2 ಪೂರ್ವಕಾಲ ವೃತ್ತಾಂತ 19:8 - ಕನ್ನಡ ಸತ್ಯವೇದವು J.V. (BSI)8 ಇದಲ್ಲದೆ ಯೆಹೋಷಾಫಾಟನು ತನ್ನ ಪರಿವಾರದವರೊಡನೆ ಯೆರೂಸಲೇವಿುಗೆ ಹಿಂದಿರುಗಿ ಬಂದು ಲೇವಿಯರಿಂದಲೂ ಯಾಜಕರಿಂದಲೂ ಇಸ್ರಾಯೇಲ್‍ಗೋತ್ರ ಪ್ರಧಾನರಿಂದಲೂ ಕೆಲವರನ್ನು ಆರಿಸಿ ಯೆಹೋವ ಧರ್ಮಶಾಸ್ತ್ರಕ್ಕೆ ಸಂಬಂಧಪಟ್ಟ ವ್ಯಾಜ್ಯಗಳನ್ನೂ ಬೇರೆ ವ್ಯಾಜ್ಯಗಳನ್ನೂ ವಿಚಾರಿಸಿ ತೀರಿಸುವದಕ್ಕೋಸ್ಕರ ಯೆರೂಸಲೇವಿುನಲ್ಲಿ ಇರಿಸಿ ಅವರಿಗೆ - ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20198 ಇದಲ್ಲದೆ, ಯೆಹೋಷಾಫಾಟನು ತನ್ನ ಪರಿವಾರದವರೊಡನೆ ಯೆರೂಸಲೇಮಿಗೆ ಹಿಂತಿರುಗಿ ಬಂದು ಲೇವಿಯರಿಂದಲೂ, ಯಾಜಕರಿಂದಲೂ, ಇಸ್ರಾಯೇಲ್ ಗೋತ್ರ ಪ್ರಧಾನರಿಂದಲೂ, ಕೆಲವರನ್ನು ಆರಿಸಿ ಯೆಹೋವನ ಧರ್ಮಶಾಸ್ತ್ರಕ್ಕೆ ಸಂಬಂಧಪಟ್ಟ, ಕಲಹಗಳನ್ನೂ ಬೇರೆ ವ್ಯಾಜ್ಯಗಳನ್ನೂ ವಿಚಾರಿಸಿ ತೀರಿಸುವುದಕ್ಕಾಗಿ ಅವರನ್ನು ಯೆರೂಸಲೇಮಿನಲ್ಲೇ ಇರಿಸಿದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)8 ಇದಲ್ಲದೆ ಯೆಹೋಷಾಫಾಟನು ತನ್ನ ಪರಿವಾರದೊಡನೆ ಜೆರುಸಲೇಮಿಗೆ ಹಿಂದಿರುಗಿ ಬಂದು, ಲೇವಿಯರಿಂದ, ಯಾಜಕರ ಹಾಗು ಇಸ್ರಯೇಲ್ ಗೋತ್ರಪ್ರಧಾನರಿಂದ ಕೆಲವರನ್ನು ಆರಿಸಿ, ಸರ್ವೇಶ್ವರನ ಧರ್ಮಶಾಸ್ತ್ರಕ್ಕೆ ಸಂಬಂಧಪಟ್ಟ ವ್ಯಾಜ್ಯಗಳನ್ನೂ ಬೇರೆ ವ್ಯಾಜ್ಯಗಳನ್ನೂ ವಿಚಾರಿಸಿ ತೀರ್ಪುನೀಡಲು ಜೆರುಸಲೇಮಿನಲ್ಲೇ ಇರಿಸಿದನು. ಅವರಿಗೆ, ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್8 ಜೆರುಸಲೇಮಿನೊಳಗೆ ಯೆಹೋಷಾಫಾಟನು ಲೇವಿಯರಲ್ಲಿ, ಯಾಜಕರಲ್ಲಿ ಮತ್ತು ಇಸ್ರೇಲರ ನಾಯಕರಲ್ಲಿ ಕೆಲವರನ್ನು ನ್ಯಾಯಾಧಿಪತಿಗಳನ್ನಾಗಿ ಆರಿಸಿದನು. ಇವರು ಜನರ ಜಗಳಗಳನ್ನು ಮತ್ತು ಸಮಸ್ಯೆಗಳನ್ನು ಯೆಹೋವನ ಕಟ್ಟಳೆಗಳ ಪ್ರಕಾರ ತೀರಿಸಬೇಕಾಗಿತ್ತು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ8 ಅವರು ಯೆರೂಸಲೇಮಿಗೆ ತಿರುಗಿ ಬಂದ ತರುವಾಯ ಯೆಹೋಷಾಫಾಟನು ಯೆಹೋವ ದೇವರ ನ್ಯಾಯತೀರ್ವಿಕೆಗೋಸ್ಕರವೂ, ವ್ಯಾಜ್ಯಗಳಿಗೋಸ್ಕರವೂ ಯೆರೂಸಲೇಮಿನೊಳಗೆ ಲೇವಿಯರಲ್ಲಿಯೂ, ಯಾಜಕರಲ್ಲಿಯೂ, ಇಸ್ರಾಯೇಲ್ ಗೋತ್ರಪ್ರಧಾನರಲ್ಲಿಯೂ ಕೆಲವರನ್ನು ನೇಮಿಸಿ ಅವರಿಗೆ, ಅಧ್ಯಾಯವನ್ನು ನೋಡಿ |