2 ಪೂರ್ವಕಾಲ ವೃತ್ತಾಂತ 18:3 - ಕನ್ನಡ ಸತ್ಯವೇದವು J.V. (BSI)
3 ಇಸ್ರಾಯೇಲ್ಯರ ಅರಸನಾದ ಅಹಾಬನು ಯೆಹೂದ್ಯರ ಅರಸನಾದ ಯೆಹೋಷಾಫಾಟನನ್ನು - ನನ್ನ ಜೊತೆಯಲ್ಲಿ ರಾಮೋತ್ ಗಿಲ್ಯಾದಿಗೆ ಬರುತ್ತೀಯೋ ಎಂದು ಕೇಳಲು ಅವನು - ನಾನೂ ನೀನೂ ನನ್ನ ಜನರೂ ನಿನ್ನ ಜನರೂ ಒಂದೇಯಲ್ಲವೋ. ನಿನ್ನ ಜೊತೆಯಲ್ಲಿ ಯುದ್ಧಕ್ಕೆ ಬರುವೆನು ಎಂದು ಉತ್ತರಕೊಟ್ಟು
3 ಇಸ್ರಾಯೇಲರ ಅರಸನಾದ ಅಹಾಬನು ಯೆಹೂದ್ಯರ ಅರಸನಾದ ಯೆಹೋಷಾಫಾಟನನ್ನು, “ನನ್ನ ಜೊತೆಯಲ್ಲಿ ರಾಮೋತ್ ಗಿಲ್ಯಾದಿಗೆ ಬರುತ್ತೀಯೋ?” ಎಂದು ಕೇಳಿದನು. ಅದಕ್ಕೆ ಅವನು, “ನಾನೂ, ನೀನೂ ನನ್ನ ಜನರೂ ನಿನ್ನ ಜನರೂ ಒಂದೇ ಅಲ್ಲವೇ? ನಿನ್ನ ಜೊತೆಯಲ್ಲಿ ಯುದ್ಧಕ್ಕೆ ಬರುವೆನು” ಎಂದು ಉತ್ತರ ಕೊಟ್ಟನು.
3 ಇಸ್ರಯೇಲರ ಅರಸ ಆಹಾಬನು ಯೆಹೂದ್ಯರ ಅರಸ ಯೆಹೋಷಾಫಾಟನನ್ನು, “ನನ್ನ ಜೊತೆಯಲ್ಲಿ ರಾಮೋತ್‍ಗಿಲ್ಯಾದಿಗೆ ಬರುತ್ತೀಯಾ?” ಎಂದು ಕೇಳಿದನು. ಅವನು, “ನಾನೂ ನೀನೂ ನನ್ನ ಜನರೂ ನಿನ್ನ ಜನರೂ ಒಂದೆ ಅಲ್ಲವೇ? ನಿನ್ನ ಜೊತೆಯಲ್ಲಿ ಯುದ್ಧಕ್ಕೆ ಖಂಡಿತ ಬರುತ್ತೇನೆ,” ಎಂದು ಉತ್ತರಕೊಟ್ಟನು.
3 ಇಸ್ರೇಲರ ಅರಸನಾದ ಅಹಾಬನು ಯೆಹೂದದ ಅರಸನಾದ ಯೆಹೋಷಾಫಾಟನಿಗೆ, “ನೀನು ನನ್ನೊಂದಿಗೆ ರಾಮೋತ್‌ಗಿಲ್ಯಾದಿಗೆ ಯುದ್ಧಮಾಡಲು ಬರುವಿಯಾ?” ಎಂದು ಕೇಳಲು, ಯೆಹೋಷಾಫಾಟನು, “ನಾನು ನಿನ್ನವನೆ, ನನ್ನ ಜನರು ನಿನ್ನ ಜನರೇ ಆಗಿದ್ದಾರೆ. ನಾವು ಯುದ್ಧಮಾಡಲು ನಿಮ್ಮೊಂದಿಗೆ ಬರುತ್ತೇವೆ” ಎಂದು ಅಹಾಬನಿಗೆ ಉತ್ತರಿಸಿದನು.
3 ಇಸ್ರಾಯೇಲಿನ ಅರಸನಾದ ಅಹಾಬನು ಯೆಹೂದದ ಅರಸನಾದ ಯೆಹೋಷಾಫಾಟನಿಗೆ, “ನೀನು ಗಿಲ್ಯಾದಿನ ರಾಮೋತಿನ ಮೇಲೆ ಯುದ್ಧಮಾಡಲು ನನ್ನ ಸಂಗಡ ಬರುತ್ತೀಯಾ?” ಎಂದನು. ಅದಕ್ಕವನು, “ನಾನೂ ನೀನೂ, ನನ್ನ ಜನರೂ ನಿನ್ನ ಜನರೂ ಒಂದೇ ಅಲ್ಲವೇ? ನಾವು ಯುದ್ಧದಲ್ಲಿ ನಿನ್ನ ಸಂಗಡ ಇರುವೆವು,” ಎಂದನು.
ಯೆಹೂದ್ಯರ ಅರಸನಾದ ಯೆಹೋಷಾಫಾಟನಿಗೆ ದೂತರ ಮುಖಾಂತರವಾಗಿ - ಮೋವಾಬ್ಯರ ಅರಸನು ನನಗೆ ವಿರೋಧವಾಗಿ ತಿರುಗಿಬಿದ್ದಿದ್ದಾನೆ; ಮೋವಾಬ್ಯರೊಡನೆ ಯುದ್ಧಮಾಡುವದಕ್ಕೆ ನೀನು ನನ್ನ ಜೊತೆಯಲ್ಲಿ ಬರುತ್ತೀಯೋ ಎಂದು ಹೇಳಿಕಳುಹಿಸಿದನು. ಅದಕ್ಕೆ ಯೆಹೋಷಾಫಾಟನು - ಬರುತ್ತೇನೆ; ನಾನೂ ನೀನೂ, ನನ್ನ ಜನರೂ ನಿನ್ನ ಜನರೂ, ನನ್ನ ಕುದುರೆಗಳೂ ನಿನ್ನ ಕುದುರೆಗಳೂ ಒಂದೇಯಲ್ಲವೋ ಎಂದು ಉತ್ತರಕೊಟ್ಟು
ಯೆಹೋಷಾಫಾಟನನ್ನು - ಯುದ್ಧಮಾಡುವದಕ್ಕಾಗಿ ನೀನೂ ನಮ್ಮ ಜೊತೆಯಲ್ಲಿ ರಾಮೋತ್‍ಗಿಲ್ಯಾದಿಗೆ ಬರುತ್ತೀಯೋ ಎಂದು ಕೇಳಲು ಅವನು - ನಾನೂ ನೀನೂ, ನನ್ನ ಜನರೂ ನಿನ್ನ ಜನರೂ, ನನ್ನ ಕುದುರೆಗಳೂ ನಿನ್ನ ಕುದುರೆಗಳೂ ಒಂದೇಯಲ್ಲವೋ ಎಂದು ಉತ್ತರಕೊಟ್ಟು
ಕೆಲವು ವರುಷಗಳಾದನಂತರ ಅವನ ಬಳಿಗೆ ಸಮಾರ್ಯಕ್ಕೆ ಹೋದಾಗ ಅಹಾಬನು ಅವನಿಗೋಸ್ಕರವೂ ಅವನೊಡನೆ ಬಂದ ಜನರಿಗೋಸ್ಕರವೂ ಅನೇಕಾನೇಕ ದನಕುರಿಗಳನ್ನು ವಧಿಸಿ ಔತಣಮಾಡಿಸಿ ತನ್ನ ಸಂಗಡ ಯುದ್ಧಕ್ಕಾಗಿ ರಾಮೋತ್‍ಗಿಲ್ಯಾದಿಗೆ ಬರಬೇಕೆಂದು ಅವನನ್ನು ಪ್ರೇರಿಸಿದನು.
ಅವನು ಯೆರೂಸಲೇವಿುಗೆ ಬರಲು ಹನಾನೀಯನ ಮಗನಾದ ಯೇಹೂ ಎಂಬ ದರ್ಶಿಯು ಅವನನ್ನು ಎದುರುಗೊಂಡು ಅವನಿಗೆ - ನೀನು ಕೆಟ್ಟವನಿಗೆ ಸಹಾಯಮಾಡತಕ್ಕದ್ದೋ? ಯೆಹೋವನ ಹಗೆಗಾರರನ್ನು ಪ್ರೀತಿಸುವದೋ! ನೀನು ಹೀಗೆ ಮಾಡಿದ್ದರಿಂದ ಯೆಹೋವನ ಕೋಪವು ನಿನ್ನ ಮೇಲಿರುತ್ತದೆ.