2 ಪೂರ್ವಕಾಲ ವೃತ್ತಾಂತ 11:17 - ಕನ್ನಡ ಸತ್ಯವೇದವು J.V. (BSI)17 ಇವರೆಲ್ಲರೂ ಮೊದಲನೆಯ ಮೂರು ವರುಷಗಳಲ್ಲಿ ದಾವೀದಸೊಲೊಮೋನರ ಮಾರ್ಗದಲ್ಲಿ ನಡೆಯುತ್ತಿದ್ದದರಿಂದ ಯೆಹೂದರಾಜ್ಯವು ಆ ವರುಷಗಳಲ್ಲಿ ವೃದ್ಧಿಯಾಗಿ ಸೊಲೊಮೋನನ ಮಗನಾದ ರೆಹಬ್ಬಾಮನು ಬಲಗೊಂಡನು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201917 ಇವರೆಲ್ಲರೂ ಮೊದಲನೆಯ ಮೂರು ವರ್ಷಗಳಲ್ಲಿ ದಾವೀದ ಹಾಗು ಸೊಲೊಮೋನರ ಮಾರ್ಗದಲ್ಲೇ ನಡೆಯುತ್ತಿದ್ದರು. ಅಂತೆಯೇ ಯೆಹೂದ ರಾಜ್ಯವು ಆ ವರ್ಷಗಳಲ್ಲಿ ಅಭಿವೃದ್ಧಿಯಾಗಿ, ಸೊಲೊಮೋನನ ಮಗನಾದ ರೆಹಬ್ಬಾಮನು ಬಲಗೊಂಡನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)17 ಇವರೆಲ್ಲರು ಮೊದಲನೆಯ ಮೂರು ವರ್ಷಗಳಲ್ಲಿ ದಾವೀದ ಹಾಗೂ ಸೊಲೊಮೋನರ ಮಾರ್ಗದಲ್ಲೇ ನಡೆಯುತ್ತಿದ್ದರು. ಎಂದೇ ಜುದೇಯರಾಜ್ಯವು ಆ ವರ್ಷಗಳಲ್ಲಿ ವೃದ್ಧಿಯಾಗಿ, ಸೊಲೊಮೋನನ ಮಗ ರೆಹಬ್ಬಾಮನು ಬಲಿಷ್ಠನಾದನು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್17 ಅವರೆಲ್ಲ ಯೆಹೂದ ರಾಜ್ಯವನ್ನು ಬಲಗೊಳಿಸಿದರು ಮತ್ತು ಸೊಲೊಮೋನನ ಮಗನಾದ ರೆಹಬ್ಬಾಮನೊಂದಿಗೆ ಮೂರು ವರ್ಷವಿದ್ದರು. ಯಾಕೆಂದರೆ ಅವರು ಈ ವರ್ಷಗಳಲ್ಲಿ ದಾವೀದನಂತೆ ಮತ್ತು ಸೊಲೊಮೋನನಂತೆ ದೇವರ ಮಾರ್ಗದಲ್ಲಿ ನಡೆಯುತ್ತಿದ್ದರು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ17 ಹೀಗೆ ಅವರು ಯೆಹೂದ ರಾಜ್ಯವನ್ನು ದೃಢಪಡಿಸಿ, ಸೊಲೊಮೋನನ ಮಗ ರೆಹಬ್ಬಾಮನನ್ನು ಮೂರು ವರ್ಷಗಳವರೆಗೂ ಬಲಪಡಿಸಿದರು. ಅವರು ಮೂರು ವರ್ಷಗಳವರೆಗೂ ದಾವೀದನ, ಸೊಲೊಮೋನನ ಮಾರ್ಗದಲ್ಲಿ ನಡೆದರು. ಅಧ್ಯಾಯವನ್ನು ನೋಡಿ |