9 ಆತನು ನಮ್ಮಲ್ಲಿರುವ ಸುಕೃತ್ಯಗಳನ್ನು ನೋಡಿದ್ದರಿಂದಲ್ಲ, ತನ್ನ ಸಂಕಲ್ಪವನ್ನು ಅನುಸರಿಸಿ ಕೃಪೆಯಿಂದಲೇ ನಮ್ಮನ್ನು ರಕ್ಷಿಸಿ ಪರಿಶುದ್ಧರಾಗುವುದಕ್ಕೆ ಕರೆದನು. ಆತನು ಅನಾದಿಕಾಲದಲ್ಲಿ ಆ ಕೃಪೆಯನ್ನು ಕ್ರಿಸ್ತ ಯೇಸುವಿನಲ್ಲಿ ನಮಗೆ ಅನುಗ್ರಹಿಸಿ,
9 ನಾವು ಸ್ವಂತ ಸತ್ಕಾರ್ಯಗಳಿಂದಲ್ಲ, ದೇವರ ಯೋಜನೆ ಹಾಗೂ ಅನುಗ್ರಹಗಳಿಂದಲೇ ಜೀವೋದ್ಧಾರ ವರವನ್ನು ಪಡೆದಿದ್ದೇವೆ; ದೇವರ ಪ್ರಜೆಗಳೆನಿಸಿಕೊಂಡಿದ್ದೇವೆ. ಈ ಅನುಗ್ರಹವನ್ನು ಕ್ರಿಸ್ತಯೇಸುವಿನಲ್ಲಿ ಅನಾದಿಯಿಂದಲೇ ನಮಗೆ ಕೊಡಲಾಯಿತು.
9 ಆತನು ನಮ್ಮನ್ನು ರಕ್ಷಿಸಿ, ತನ್ನ ಪವಿತ್ರ ಜನರಾಗಿರುವುದಕ್ಕಾಗಿ ನಮ್ಮನ್ನು ಕರೆದನು. ನಾವು ಮಾಡಿದ ಒಳ್ಳೆಯ ಕಾರ್ಯಗಳಿಂದ ಹೀಗಾಯಿತು ಎಂದಲ್ಲ. ಆತನು ತನ್ನ ಸಂಕಲ್ಪಕ್ಕನುಸಾರವಾಗಿ ಮತ್ತು ಕೃಪೆಗನುಸಾರವಾಗಿ ನಮ್ಮನ್ನು ರಕ್ಷಿಸಿ ತನ್ನವರನ್ನಾಗಿ ಮಾಡಿದನು. ಅನಾದಿಕಾಲದಲ್ಲಿಯೇ ಈ ಕೃಪೆಯು ಕ್ರಿಸ್ತ ಯೇಸುವಿನ ಮೂಲಕ ನಮಗೆ ದೊರೆಯಿತು.
9 ದೇವರು ನಮ್ಮ ಕ್ರಿಯೆಗಳಿಗನುಸಾರವಾಗಿ ಅಲ್ಲ, ತಮ್ಮ ಸ್ವಂತ ಸಂಕಲ್ಪ ಮತ್ತು ಕೃಪೆಯ ಪ್ರಕಾರ ನಮ್ಮನ್ನು ರಕ್ಷಿಸಿ ಪರಿಶುದ್ಧವಾದ ಜೀವಿತಕ್ಕೆ ನಮ್ಮನ್ನು ಕರೆದರು. ಈ ಕೃಪೆಯು ಕಾಲದ ಆರಂಭಕ್ಕೆ ಮುಂಚೆಯೇ ಕ್ರಿಸ್ತ ಯೇಸುವಿನಲ್ಲಿ ನಮಗೆ ಕೊಡಲಾಯಿತು.
ಅನಾದಿಯಾಗಿ ಗುಪ್ತವಾಗಿದ್ದ ಮರ್ಮವು ಈಗ ಪ್ರಕಾಶಕ್ಕೆ ಬಂದು ನಿತ್ಯನಾದ ದೇವರ ಅಪ್ಪಣೆಯ ಪ್ರಕಾರ ಪ್ರವಾದಿಗಳ ಗ್ರಂಥಗಳ ಮೂಲಕ ಅನ್ಯಜನರೆಲ್ಲರಿಗೆ ನಂಬಿಕೆಯೆಂಬ ವಿಧೇಯತ್ವವನ್ನು ಉಂಟುಮಾಡುವದಕ್ಕೋಸ್ಕರ ತಿಳಿಸಲ್ಪಟ್ಟಿದೆ. ಪ್ರಕಾಶಕ್ಕೆ ಬಂದಿರುವ ಈ ಮರ್ಮಕ್ಕೆ ಅನುಸಾರ ಅಂದರೆ ಯೇಸು ಕ್ರಿಸ್ತನ ವಿಷಯವಾದಂಥ ನಾನು ಸಾರುವಂಥ ಸುವಾರ್ತೆಗನುಸಾರ ನಿಮ್ಮನ್ನು ಸ್ಥಿರಪಡಿಸುವದಕ್ಕೆ ಶಕ್ತನಾಗಿರುವ
ಆ ಮಕ್ಕಳು ಒಬ್ಬ ತಂದೆಯ ಮಕ್ಕಳಾಗಿದ್ದರೂ ಅವರು ಇನ್ನು ಹುಟ್ಟದೆಯೂ ಒಳ್ಳೇದನ್ನಾಗಲಿ ಕೆಟ್ಟದ್ದನ್ನಾಗಲಿ ಮಾಡದೆಯೂ ಇದ್ದಾಗ - ಹಿರಿಯನು ಕಿರಿಯನಿಗೆ ಸೇವೆ ಮಾಡುವನೆಂಬದಾಗಿ ಆಕೆಗೆ ಹೇಳಲ್ಪಟ್ಟಿತು. ಇದರಿಂದ ದೇವರು ತನಗೆ ಮನಸ್ಸಿದ್ದವರನ್ನು ಆರಿಸಿಕೊಳ್ಳುತ್ತಾನೆಂಬ ಸಂಕಲ್ಪವು ಸ್ಥಿರವಾಗಿರಬೇಕೆಂದು ತೋರಿಸಿದನು. ಆ ಸಂಕಲ್ಪವು ಪುಣ್ಯಕ್ರಿಯೆಗಳ ಮೇಲೆ ಆಧಾರಗೊಳ್ಳದೆ ಕರೆಯುವಾತನ ಚಿತ್ತದ ಮೇಲೆಯೇ ಆಧಾರಗೊಂಡಿದೆ.
ತಂದೆಯೇ, ನೀನು ಯಾರನ್ನು ನನಗೆ ಕೊಟ್ಟಿಯೋ ಅವರು ನಾನಿರುವ ಸ್ಥಳದಲ್ಲಿ ನನ್ನ ಕೂಡ ಇದ್ದುಕೊಂಡು ಲೋಕವು ಹುಟ್ಟುವದಕ್ಕಿಂತ ಮುಂಚೆಯೇ ನೀನು ನನ್ನನ್ನು ಪ್ರೀತಿಸಿ ನನಗೆ ಕೊಟ್ಟಿರುವ ಮಹಿಮೆಯನ್ನು ನೋಡಬೇಕೆಂದು ಇಚ್ಫೈಸುತ್ತೇನೆ.
ಇದಲ್ಲದೆ ಆತನಲ್ಲಿ ನಾವು ದೇವರ ಸ್ವಕೀಯ ಪ್ರಜೆಯಾದೆವು, ಬರಬೇಕಾದ ಕ್ರಿಸ್ತನನ್ನು ಎದುರುನೋಡುತ್ತಿದ್ದ ನಾವು ತನ್ನ ಮಹಿಮೆಯನ್ನು ಪ್ರಖ್ಯಾತಿಪಡಿಸಬೇಕೆಂದು ಸಮಸ್ತಕಾರ್ಯಗಳನ್ನು ತನ್ನ ಇಷ್ಟದಂತೆ ನಡಿಸುವ ದೇವರು ತನ್ನ ಸಂಕಲ್ಪದ ಮೇರೆಗೆ ನಮ್ಮನ್ನು ಆದಿಯಲ್ಲಿಯೇ ಆರಿಸಿಕೊಂಡನು.
ಜಗದುತ್ಪತ್ತಿಗೆ ಮೊದಲೇ ಕೊಯ್ಯಲ್ಪಟ್ಟ ಕುರಿಯಾದಾತನ ಬಳಿಯಲ್ಲಿರುವ ಜೀವಬಾಧ್ಯರ ಪಟ್ಟಿಯಲ್ಲಿ ಯಾರಾರ ಹೆಸರುಗಳು ಬರೆದಿರುವದಿಲ್ಲವೋ ಆ ಭೂನಿವಾಸಿಗಳೆಲ್ಲರೂ ಅದಕ್ಕೆ ನಮಸ್ಕಾರ ಮಾಡುವರು.
ನೀನು ಕಂಡ ಈ ಮೃಗವು ಮೊದಲು ಇತ್ತು, ಈಗ ಇಲ್ಲ, ಮತ್ತು ಅಧೋಲೋಕದಿಂದ ಏರಿಬಂದು ನಾಶಕ್ಕೆ ಹೋಗುವದು. ಭೂನಿವಾಸಿಗಳೊಳಗೆ ಯಾರಾರ ಹೆಸರುಗಳು ಲೋಕಾದಿಯಿಂದ ಜೀವಬಾಧ್ಯರ ಪಟ್ಟಿಯಲ್ಲಿ ಬರೆದಿರುವದಿಲ್ಲವೋ ಅವರು ಈ ಮೃಗವನ್ನು ನೋಡಿ ಇದು ಮೊದಲು ಇತ್ತು, ಈಗ ಇಲ್ಲ, ಇನ್ನು ಮೇಲೆ ಬರುವದು ಎಂದು ತಿಳಿದು ಆಶ್ಚರ್ಯಪಡುವರು.
ತಾನು ಕಾಲವು ಪರಿಪೂರ್ಣವಾದಾಗ ನಿರ್ವಹಿಸಬೇಕಾದ ಒಂದು ಕೃಪೆಯುಳ್ಳ ಸಂಕಲ್ಪವನ್ನು ಆತನು ಕ್ರಿಸ್ತನಲ್ಲಿ ಮೊದಲೇ ನಿಷ್ಕರ್ಷೆಮಾಡಿಕೊಂಡಿದ್ದನು. ಅದೇನಂದರೆ ಭೂಪರಲೋಕಗಳಲ್ಲಿರುವ ಸಮಸ್ತವನ್ನೂ ಕ್ರಿಸ್ತನಲ್ಲಿ ಒಂದಾಗಿ ಕೂಡಿಸಬೇಕೆಂಬದೇ. ಕ್ರಿಸ್ತನಲ್ಲಿಯೇ ಸಮಸ್ತವು ಒಂದಾಗುವದು.