Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಕೊರಿಂಥದವರಿಗೆ 8:20 - ಕನ್ನಡ ಸತ್ಯವೇದವು J.V. (BSI)

20 ನಾವು ಪಾರುಪತ್ಯಮಾಡುವ ಈ ದ್ರವ್ಯಸಂಚಯದ ವಿಷಯದಲ್ಲಿ ಒಬ್ಬರೂ ನಮ್ಮ ಮೇಲೆ ತಪ್ಪುಹೊರಿಸುವದಕ್ಕೆ ಆಸ್ಪದವಿರಬಾರದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

20 ನಾವು ಸಂಗ್ರಹಿಸುತ್ತಿರುವಂತಹ ಈ ಉದಾರ ಕೊಡುಗೆಯ ವಿಷಯದಲ್ಲಿ ಒಬ್ಬರೂ ನಮ್ಮ ಮೇಲೆ ತಪ್ಪುಹೊರಿಸುವುದಕ್ಕೆ ಆಸ್ಪದಕೊಡಬಾರದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

20 ನಮ್ಮ ವಶಕ್ಕೆ ಒಪ್ಪಿಸಲಾಗಿರುವ ಈ ಉದಾರ ಕೊಡುಗೆಯ ವಿತರಣೆಯಲ್ಲಿ ಯಾರೂ ನಮ್ಮ ಮೇಲೆ ತಪ್ಪುಹೊರಿಸಲು ಆಸ್ಪದವಿರಕೂಡದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

20 ಹೇರಳವಾದ ಈ ಸಹಾಯಧನವನ್ನು ನಾವು ನೋಡಿಕೊಳ್ಳುವ ಬಗ್ಗೆ ಟೀಕಿಸಲು ಯಾರಿಗೂ ಅವಕಾಶ ಕೊಡಬಾರದೆಂದು ಎಚ್ಚರಿಕೆಯಿಂದಿದ್ದೇವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

20 ಹೀಗೆ ನಮ್ಮ ಕೈಗೆ ಒಪ್ಪಿಸಲಾದ ಈ ಉದಾರ ಕೊಡುಗೆಯ ವಿತರಣೆಯ ಕಾರ್ಯದಲ್ಲಿ ಯಾರೂ ನಮ್ಮ ಮೇಲೆ ತಪ್ಪು ಹೊರಿಸಲು ಆಸ್ಪದವಿರಕೂಡದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

20 ಹ್ಯಾ ಉದಾರ್ ಆಯಾರಾಚ್ಯಾ ವಿಶಯಾತ್ಲ್ಯಾ ಕಾಮಾಚ್ಯಾ ವಿಶಯಾತ್ ಕೊನ್‍ಬಿ ಅಮ್ಚ್ಯಾ ವಿಶಯಾತ್ ಕಾಯ್ಬಿ ಬೊಲುಕ್ ನೆವ್ ರ್‍ಹಾತಲೆ ನಕ್ಕೊ ಮನುನ್ ಅಮಿ ಬಗುಕ್ ಲಾಗ್ಲಾಂವ್.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಕೊರಿಂಥದವರಿಗೆ 8:20
9 ತಿಳಿವುಗಳ ಹೋಲಿಕೆ  

ಸಕಲವಿಧವಾದ ಕೆಟ್ಟತನಕ್ಕೆ ದೂರವಾಗಿರಿ.


ಆದಕಾರಣ ನೀವು ನಡಕೊಳ್ಳುವ ರೀತಿಯನ್ನು ಕುರಿತು ಚೆನ್ನಾಗಿ ನೋಡಿಕೊಳ್ಳಿರಿ. ಜ್ಞಾನವಿಲ್ಲದರಾಗಿರದೆ ಜ್ಞಾನವಂತರಾಗಿರ್ರಿ.


ನನ್ನನ್ನು ನಿಂದಿಸುವದಕ್ಕೆ ಆಸ್ಪದವನ್ನು ಹುಡುಕುವವರಿಗೆ ಯಾವ ಆಸ್ಪದವೂ ಸಿಕ್ಕದಂತೆ ನಾನು ಮಾಡುವದನ್ನು ಇನ್ನು ಮುಂದೆಯೂ ಮಾಡುವೆನು. ಅವರು ಯಾವದರಲ್ಲಿ ಹಿಗ್ಗುತ್ತಾರೋ ಅದರಲ್ಲಿ ನಮ್ಮಂತೆಯೇ ನಡೆಯುವವರಾಗಿ ಕಂಡು ಬರಲಿ.


ನಾನು ಬಂದ ಮೇಲೆ ನೀವು ಯಾರನ್ನು ಯೋಗ್ಯರೆಂದು ಸೂಚಿಸುವಿರೋ ಅವರನ್ನು ಯೆರೂಸಲೇವಿುಗೆ ನಿಮ್ಮ ಉಪಕಾರದ್ರವ್ಯವನ್ನು ತೆಗೆದುಕೊಂಡು ಹೋಗುವದಕ್ಕೆ ಪತ್ರಗಳನ್ನು ಕೊಟ್ಟು ಕಳುಹಿಸುವೆನು.


ನಿಮಗಿರುವ ಮೇಲು ದೂಷಣೆಗೆ ಆಸ್ಪದವಾಗಬಾರದು.


ನೋಡಿರಿ, ತೋಳಗಳ ನಡುವೆ ಕುರಿಗಳನ್ನು ಹೊಗಿಸಿದಂತೆ ನಾನು ನಿಮ್ಮನ್ನು ಕಳುಹಿಸಿಕೊಡುತ್ತೇನೆ. ಆದದರಿಂದ ಸರ್ಪಗಳಂತೆ ಜಾಣರೂ ಪಾರಿವಾಳಗಳಂತೆ ನಿಷ್ಕಪಟಿಗಳೂ ಆಗಿರ್ರಿ.


ಕೆಲಸಗಾರರಿಗೆ ಸಂಬಳ ಕೊಡುವ ಮೊಕ್ತೇಸರರು ನಂಬಿಗಸ್ತರಾಗಿದ್ದದರಿಂದ ಅವರ ವಶಕ್ಕೆ ಕೊಡಲ್ಪಟ್ಟ ಹಣದ ಲೆಕ್ಕವನ್ನು ಯಾರೂ ಕೇಳಲಿಲ್ಲ.


ಇದು ಮಾತ್ರವಲ್ಲದೆ ನಾವು ನಡಿಸುವ ಈ ಧರ್ಮಕಾರ್ಯ ಸಂಬಂಧವಾಗಿ ಸಭೆಗಳವರು ಈತನನ್ನು ನಮ್ಮ ಸಂಗಡ ಪ್ರಯಾಣಮಾಡುವಂತೆ ಗೊತ್ತುಮಾಡಿದ್ದಾರೆ. ಅವರು ಹೀಗೆ ಮಾಡಿದ್ದರಿಂದ ಕರ್ತನಿಗೆ ಘನವೂ ನಮ್ಮಲ್ಲಿ ಸಿದ್ಧಮನಸ್ಸೂ ಉಂಟಾಗುವದು.


ಯಾಕಂದರೆ ಕರ್ತನ ದೃಷ್ಟಿಯಲ್ಲಿ ಮಾತ್ರವಲ್ಲದೆ ಮನುಷ್ಯರ ದೃಷ್ಟಿಯಲ್ಲಿಯೂ ಗೌರವವಾದದ್ದನ್ನು ಯೋಚನೆಗೆ ತಂದುಕೊಳ್ಳುವವರಾಗಿದ್ದೇವೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು