2 ಕೊರಿಂಥದವರಿಗೆ 2:3 - ಕನ್ನಡ ಸತ್ಯವೇದವು J.V. (BSI)3 ಆದಕಾರಣ ನಾನು ಬಂದಾಗ ನನ್ನನ್ನು ಸಂತೋಷಪಡಿಸತಕ್ಕವರಿಂದ ದುಃಖಹೊಂದಬಾರದೆಂದು ಯೋಚಿಸಿ ಆ ಸಂಗತಿಯನ್ನು ಪತ್ರಿಕೆಯ ಮೂಲಕವೇ ತಿಳಿಸಿದೆನು. ನನ್ನ ಸಂತೋಷವು ನಿಮ್ಮೆಲ್ಲರ ಸಂತೋಷವೇ ಎಂದು ತಿಳಿದು ನಿಮ್ಮೆಲ್ಲರ ವಿಷಯದಲ್ಲೂ ನನಗೆ ಭರವಸವಿತ್ತು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20193 ಆದಕಾರಣ ನಾನು ಆ ಪತ್ರವನ್ನು ಬರೆದದ್ದು: ನನ್ನನ್ನು ಸಂತೋಷಪಡಿಸಬೇಕಾದವರೇ ನನ್ನನ್ನು ದುಃಖಕ್ಕೆ ಈಡುಮಾಡಬಾರದೆಂದು ನಾನು ಬರಲಿಲ್ಲ. ನನ್ನ ಸಂತೋಷವೇ ನಿಮ್ಮೆಲ್ಲರ ಸಂತೋಷವೆಂದು ನೀವು ಭಾವಿಸುತ್ತೀರೆಂದು ನಂಬಿದ್ದೇನೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)3 ಇದಕ್ಕಾಗಿಯೇ ನಾನು ಆ ಪತ್ರವನ್ನು ಬರೆದದ್ದು; ನನ್ನನ್ನು ಸಂತೋಷಪಡಿಸಬೇಕಾದವರೇ ನನ್ನನ್ನು ದುಃಖಕ್ಕೆ ಈಡುಮಾಡಬಾರದೆಂದು ನಾನು ಬರಲಿಲ್ಲ. ನನ್ನ ಸಂತೋಷವೇ ನಿಮ್ಮ ಸಂತೋಷವೆಂದು ನೀವು ಭಾವಿಸುತ್ತೀರೆಂದು ಬಲ್ಲೆ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್3 ನಾನು ನಿಮ್ಮ ಬಳಿಗೆ ಬಂದಾಗ, ನನ್ನನ್ನು ಸಂತೋಷಗೊಳಿಸಬೇಕಾದ ಜನರಿಂದಲೇ ನನಗೆ ದುಃಖವಾಗಬಾರದೆಂಬ ಉದ್ದೇಶದಿಂದ ನಾನು ನಿಮಗೆ ಈ ಪತ್ರವನ್ನು ಬರೆದೆನು. ನೀವೆಲ್ಲರೂ ನನ್ನ ಆನಂದದಲ್ಲಿ ಪಾಲುಗಾರರಾಗುತ್ತೀರಿ ಎಂಬ ಭರವಸೆ ನನಗಿತ್ತು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ3 ನಾನು ಬಂದಾಗ ನನ್ನನ್ನು ಆನಂದಪಡಿಸತಕ್ಕವರಿಂದಲೇ ದುಃಖ ಹೊಂದಬಾರದೆಂದು ನಾನು ಹಿಂದಿನ ಪತ್ರವನ್ನು ನಿಮಗೆ ಬರೆದಿದ್ದೇನೆ. ನನ್ನ ಆನಂದದಲ್ಲಿ ನೀವೆಲ್ಲರೂ ಪಾಲಾಗುವಿರಿ ಎಂದು ನಿಮ್ಮೆಲ್ಲರ ವಿಷಯದಲ್ಲಿ ನನಗೆ ಭರವಸೆ ಇದೆ. ಅಧ್ಯಾಯವನ್ನು ನೋಡಿದೆವಾಚಿ ಖರಿ ಖಬರ್3 ಹೆಚ್ಯಾಸಾಟ್ನಿ ಮಿಯಾ ತುಮ್ಕಾ ಲಿವ್ಕ್ ಲಾಗ್ಲಾ. ಮಿಯಾ ತುಮ್ಚ್ಯಾಕ್ಡೆ ಯೆಲ್ಲ್ಯಾ ತನ್ನಾ ಮಾಕಾ ಕುಶಿ ಹೊಯ್ ಸರ್ಕೆ ಕರ್ತಲ್ಯಾಂಚ್ಯಾಕ್ನಾ ಮಾಕಾ ದುಖ್ ಗಾವ್ತಲೆ ನಕ್ಕೊ ಮನುನ್ ಮಿಯಾ ಲಿವ್ಕ್ ಲಾಗ್ಲಾ. ಕಶ್ಯಾಕ್ ಮಟ್ಲ್ಯಾರ್ ಮಾಜಿ ಕುಶಿಚ್ ತುಮ್ಚಿ ಖುಶಿ ಮನುನ್ ಯವಜ್ತ್ಯಾಶಿ ಮನುನ್ ಮಾಕಾ ಬರೆ ಗೊತ್ತ್ ಹಾಯ್. ಅಧ್ಯಾಯವನ್ನು ನೋಡಿ |