Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಕೊರಿಂಥದವರಿಗೆ 12:13 - ಕನ್ನಡ ಸತ್ಯವೇದವು J.V. (BSI)

13 ನನ್ನನ್ನು ಸಂರಕ್ಷಿಸುವ ಭಾರವನ್ನು ನಾನು ನಿಮ್ಮ ಮೇಲೆ ಹಾಕಲಿಲ್ಲವೆಂಬುವ ಒಂದೇ ವಿಷಯದಲ್ಲಿ ಹೊರತು ಇನ್ನಾವ ವಿಷಯದಲ್ಲಿಯೂ ನಿಮ್ಮನ್ನು ವಿುಕ್ಕಾದ ಸಭೆಗಳವರಿಗಿಂತ ಕಡಿಮೆ ಮಾಡಲಿಲ್ಲವಲ್ಲಾ. ನಾನು ಮಾಡಿದ ಈ ಅನ್ಯಾಯವನ್ನು ಕ್ಷವಿುಸಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

13 ನನ್ನನ್ನು ಸಂರಕ್ಷಿಸುವ ಭಾರವನ್ನು ನಾನು ನಿಮ್ಮ ಮೇಲೆ ಹಾಕಲಿಲ್ಲವೆಂಬುವ ಒಂದೇ ವಿಷಯದಲ್ಲಿ ಹೊರತು ಇನ್ಯಾವ ವಿಷಯದಲ್ಲಿಯೂ ನಿಮ್ಮನ್ನು ಮಿಕ್ಕಾದ ಸಭೆಗಳವರಿಗಿಂತ ಕಡಿಮೆಮಾಡಿಲ್ಲವಲ್ಲಾ? ನನ್ನ ಈ ತಪ್ಪನ್ನು ಕ್ಷಮಿಸಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

13 ನನ್ನ ಜೀವನಾಂಶದ ಹೊಣೆಯನ್ನು ನಾನು ನಿಮ್ಮ ಮೇಲೆ ಹೊರಿಸಲಿಲ್ಲ. ಇದೊಂದನ್ನು ಬಿಟ್ಟರೆ ಯಾವ ವಿಷಯದಲ್ಲೂ ನಿಮ್ಮನ್ನು ಮಿಕ್ಕ ಸಭೆಗಳಿಗಿಂತ ಕೀಳಾಗಿ ಕಾಣಲಿಲ್ಲ. ಈ ಒಂದು ಅನ್ಯಾಯಕ್ಕಾಗಿ ನನ್ನನ್ನು ಕ್ಷಮಿಸಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

13 ನಾನು ಈ ಕಾರ್ಯಗಳನ್ನು ಬಹು ತಾಳ್ಮೆಯಿಂದ ಮಾಡಿದೆನು. ಆದ್ದರಿಂದ ಇತರ ಸಭೆಗಳಿಗೆ ದೊರೆತವುಗಳೆಲ್ಲ ನಿಮಗೂ ದೊರೆತವು. ಒಂದೇ ಒಂದು ವ್ಯತ್ಯಾಸವೇನೆಂದರೆ, ನಾನು ನಿಮಗೆ ಭಾರವಾಗಿರಲಿಲ್ಲ. ಈ ವಿಷಯದಲ್ಲಿ ನನ್ನನ್ನು ಕ್ಷಮಿಸಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

13 ನಾನು ನಿಮಗೆ ಎಂದೂ ಭಾರವಾಗಿರಲಿಲ್ಲ ಎಂಬ ಒಂದೇ ವಿಷಯದಲ್ಲಿ ಹೊರತು, ಬೇರೆ ಯಾವ ವಿಷಯದಲ್ಲಿಯೂ ನಿಮ್ಮನ್ನು ಉಳಿದ ಸಭೆಗಳವರಿಗಿಂತ ಕಡಿಮೆ ಮಾಡಲಿಲ್ಲ. ಈ ನನ್ನ ತಪ್ಪನ್ನು ಕ್ಷಮಿಸಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

13 ಮಾಜ್ಯಾ ಗರ್ಜಾ ಪುರಾ ಕರ್‍ತಲೆ ಎಕ್ ವಜ್ಜೆ ಮಿಯಾ ತುಮ್ಚ್ಯಾ ವರ್‍ತಿ ಘಾಲುಕ್ ನಾ, ಕಸ್ಲ್ಯಾಬಿ ಸಂಗ್ತಿಯಾತ್ನಿ ತುಮಿ ದುಸ್ರ್ಯಾ ದೆವಾಚ್ಯಾ ಲೊಕಾಂಚ್ಯಾ ತಾಂಡ್ಯಾಂಚ್ಯಾನ್ಕಿ ಕಮಿ ಪರಿಸ್ಥಿತಿ ಕಾಯ್? ಮಿಯಾ ಕರಲ್ಲೊ ಹ್ಯೊ ಅನ್ನ್ಯಾಯ್ ಮಾಕಾ ಮಾಪ್ ಕರಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಕೊರಿಂಥದವರಿಗೆ 12:13
7 ತಿಳಿವುಗಳ ಹೋಲಿಕೆ  

ಈ ಹಕ್ಕು ಇತರರಿಗೆ ನಿಮ್ಮ ಮೇಲೆ ಇದ್ದರೆ ನಮಗೆ ಎಷ್ಟೋ ಹೆಚ್ಚಾಗಿ ಇರಬೇಕಲ್ಲಾ. ಆದರೂ ನಾವು ಈ ಹಕ್ಕನ್ನು ನಡಿಸದೆ ಕ್ರಿಸ್ತನ ಸುವಾರ್ತೆಗೆ ಅಡ್ಡಿಮಾಡಬಾರದೆಂದು ಎಲ್ಲವನ್ನೂ ಸಹಿಸಿಕೊಂಡೆವು.


ಅಥವಾ, ಕೈಕೆಲಸವನ್ನು ಮಾಡದೆ ಜೀವಿಸುವದಕ್ಕೆ ನನಗೂ ಬಾರ್ನಬನಿಗೂ ಮಾತ್ರ ಹಕ್ಕಿಲ್ಲವೇನು?


ಇಗೋ, ನಾನು ನಿಮ್ಮ ಬಳಿಗೆ ಬರುವದಕ್ಕೆ ಸಿದ್ಧವಾಗಿರುವದು ಇದು ಮೂರನೆಯ ಸಾರಿ; ಮತ್ತು ನಿಮಗೆ ಭಾರವಾಗಿರುವದಿಲ್ಲ; ನಾನು ನಿಮ್ಮ ಸೊತ್ತನ್ನು ಆಶಿಸದೆ ನಿಮ್ಮನ್ನೇ ಆಶಿಸುತ್ತೇನೆ. ಮಕ್ಕಳು ತಂದೆತಾಯಿಗಳಿಗೋಸ್ಕರ ದ್ರವ್ಯವನ್ನು ಕೂಡಿಸಿಡುವದು ಧರ್ಮವಲ್ಲ, ತಂದೆತಾಯಿಗಳು ಮಕ್ಕಳಿಗೋಸ್ಕರ ಕೂಡಿಸಿಡುವದೇ ಧರ್ಮ.


ಪೌಲನು ಅವರ ಮನೆಗೆ ಹೋಗಿ ತಾನೂ ಅವರೂ ಒಂದೇ ಕಸಬಿನವರಾಗಿದ್ದದರಿಂದ ಅವರಲ್ಲಿದ್ದು ಅವರೊಂದಿಗೆ ಕೆಲಸಮಾಡುತ್ತಿದ್ದನು; ಗುಡಾರ ಮಾಡುವದು ಅವರ ಕಸಬಾಗಿತ್ತು.


ನೀವೂ ನಿಮ್ಮ ಮನೆಗಳವರೂ ಅದನ್ನು ಯಾವ ಸ್ಥಳದಲ್ಲಿಯಾದರೂ ಊಟಮಾಡಬಹುದು. ನೀವು ದೇವದರ್ಶನದ ಗುಡಾರದ ಪರಿಚರ್ಯವನ್ನು ಮಾಡಿದ್ದಕ್ಕೆ ಅದು ನಿಮಗೆ ಪ್ರತಿಫಲ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು