2 ಕೊರಿಂಥದವರಿಗೆ 11:31 - ಕನ್ನಡ ಸತ್ಯವೇದವು J.V. (BSI)31 ನಾನು ಸುಳ್ಳಾಡುವದಿಲ್ಲವೆಂದು ಕರ್ತನಾದ ಯೇಸುವಿನ ತಂದೆಯೂ ನಿರಂತರ ಸ್ತುತಿಹೊಂದತಕ್ಕವನೂ ಆಗಿರುವ ದೇವರೇ ಬಲ್ಲನು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201931 ನನ್ನ ಮಾತುಗಳು ಸುಳ್ಳಲ್ಲವೆಂಬುದನ್ನು ನಮ್ಮ ಕರ್ತನಾದ ಯೇಸು ಕ್ರಿಸ್ತನ ದೇವರೂ, ತಂದೆಯೂ ಆಗಿರುವಾತನು ನಿರಂತರ ಸ್ತುತಿ ಹೊಂದತಕ್ಕ ದೇವರೇ ಬಲ್ಲನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)31 ನಾನು ಹೇಳುತ್ತಿರುವುದು ಸುಳ್ಳಲ್ಲ, ನಮ್ಮ ಪ್ರಭು ಯೇಸುಕ್ರಿಸ್ತರ ತಂದೆಯಾದ ದೇವರೇ ಇದನ್ನು ಬಲ್ಲರು. ಅವರಿಗೆ ಯುಗಯುಗಾಂತರಕ್ಕೂ ಸ್ತುತಿ ಸಲ್ಲಲಿ! ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್31 ನಾನು ಸುಳ್ಳು ಹೇಳುತ್ತಿಲ್ಲವೆಂದು ದೇವರಿಗೆ ಗೊತ್ತಿದೆ. ಆತನು ಪ್ರಭು ಯೇಸು ಕ್ರಿಸ್ತನ ದೇವರೂ ತಂದೆಯೂ ಆಗಿದ್ದಾನೆ. ಆತನಿಗೆ ಸದಾಕಾಲ ಸ್ತೋತ್ರ ಸಲ್ಲಿಸಬೇಕು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ31 ನಮ್ಮ ಕರ್ತ ಯೇಸುವಿನ ದೇವರೂ ತಂದೆಯೂ ನಾನು ಸುಳ್ಳು ಹೇಳುವುದಿಲ್ಲ ಎಂಬುದನ್ನು ಬಲ್ಲವರಾಗಿದ್ದಾರೆ. ಅವರಿಗೇ ನಿತ್ಯವೂ ಸ್ತುತಿ ಸಲ್ಲಲಿ. ಅಧ್ಯಾಯವನ್ನು ನೋಡಿದೆವಾಚಿ ಖರಿ ಖಬರ್31 ಅಮ್ಚ್ಯಾ ಧನಿಯಾ ಜೆಜು ಕ್ರಿಸ್ತಾಚ್ಯಾ ದೆವಾ ಅನಿ ಬಾಬಾಕ್ ಸದಾ ಸರ್ವತಾಕ್ ಸ್ತುತಿ ಹೊಂವ್ದಿತ್! ತೆಕಾ ಗೊತ್ತ್ ಹಾಯ್ ಮಿಯಾ ಝುಟೆ ಬೊಲಿನಾ ಮನುನ್. ಅಧ್ಯಾಯವನ್ನು ನೋಡಿ |
ಕ್ರಿಸ್ತ ಯೇಸುವಿನಲ್ಲಿ ನೀವು ಇಟ್ಟ ನಂಬಿಕೆಯ ವಿಷಯವಾಗಿಯೂ ದೇವಜನರ ಮೇಲಿರುವ ನಿಮ್ಮ ಪ್ರೀತಿಯ ವಿಷಯವಾಗಿಯೂ ನಾವು ಕೇಳಿ ಪರಲೋಕದಲ್ಲಿ ನಿಮಗೋಸ್ಕರ ಸಿದ್ಧವಾಗಿರುವ ಮಹಾಪದವಿಯನ್ನು ನೆನಸುತ್ತಾ ನಾವು ಪ್ರಾರ್ಥನೆಮಾಡುವಾಗೆಲ್ಲಾ ನಿಮ್ಮ ನಿವಿುತ್ತವಾಗಿ ನಮ್ಮ ಕರ್ತನಾದ ಯೇಸು ಕ್ರಿಸ್ತನ ತಂದೆಯಾಗಿರುವ ದೇವರಿಗೆ ಸ್ತೋತ್ರಮಾಡುತ್ತೇವೆ. ನೀವು ಆ ಪದವಿಯನ್ನು ಕುರಿತು ನಿಮ್ಮ ಬಳಿಗೆ ಬಂದಿರುವ ಸುವಾರ್ತೆಯ ಸತ್ಯವಾಕ್ಯದಿಂದ ಮೊದಲೇ ಕೇಳಿದಿರಿ.