Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಕೊರಿಂಥದವರಿಗೆ 10:10 - ಕನ್ನಡ ಸತ್ಯವೇದವು J.V. (BSI)

10 ಅವನಿಂದ ಬಂದ ಪತ್ರಿಕೆಗಳು ಗೌರವವಾದವುಗಳೂ ಬಲವುಳ್ಳವುಗಳೂ ಆಗಿವೆ; ಅವನು ಸಾಕ್ಷಾತ್ತಾಗಿ ಬಂದರೆ ಅವನು ನಿರ್ಬಲನು, ಅವನ ಮಾತು ಗಣನೆಗೆ ಬಾರದ್ದು ಅನ್ನುತ್ತಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

10 “ಅವನಿಂದ ಬಂದ ಪತ್ರಿಕೆಗಳು ಕಠೋರವಾದವುಗಳೂ, ಪ್ರಬಲವಾದವುಗಳೂ ಆಗಿವೆ. ಆದರೆ ದೈಹಿಕವಾಗಿ ಅವನು ದುರ್ಬಲನು ಅವನ ಮಾತುಗಳು ನಿಂದಾತ್ಮಕವಾದವುಗಳೆಂದು ಕೆಲವರು ಹೇಳುತ್ತಾರಲ್ಲಾ.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

10 “ಪೌಲನ ಪತ್ರಗಳು ಪ್ರಬಲವಾದುವು, ತೀಕ್ಷ್ಣವಾದುವು; ಆದರೆ ಆತನು ಸ್ವತಃ ನಮ್ಮಲ್ಲಿಗೆ ಬಂದಾಗ ಆತನು ದುರ್ಬಲನು ಹಾಗೂ ಆತನ ಮಾತು ಸಹ ಕೆಲಸಕ್ಕೆ ಬಾರದವು,” ಎಂದು ಕೆಲವರು ಹೇಳುತ್ತಿದ್ದಾರಂತೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

10 “ಪೌಲನ ಪತ್ರಗಳು ಬಲಯುತವಾಗಿವೆ ಮತ್ತು ಪ್ರಾಮುಖ್ಯವಾಗಿವೆ, ಆದರೆ ಅವನು ನಮ್ಮೊಂದಿಗಿರುವಾಗ ಬಲಹೀನನಾಗಿರುತ್ತಾನೆ, ಅವನ ಮಾತುಗಳು ನಿಸ್ಸಾರವಾಗಿರುತ್ತವೆ” ಎಂದು ಕೆಲವರು ಹೇಳುತ್ತಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

10 “ಅವನ ಪತ್ರಗಳು ತೀಕ್ಷ್ಣವಾಗಿಯೂ ಶಕ್ತಿಯುತವಾಗಿಯೂ ಇವೆ. ಆದರೆ ಅವನು ಎದುರು ಬಂದಾಗ ನಿರ್ಬಲನೂ ಕೆಲಸಕ್ಕೆ ಬಾರದ ಮಾತುಗಳನ್ನಾಡುವವನೂ ಆಗಿದ್ದಾನೆ,” ಎಂದು ಕೆಲವರು ಹೇಳುತ್ತಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

10 ಉಲ್ಲೆ ಜಾನಾ ಮನುಕ್ ಫಿರೆ;" ಪಾವ್ಲುಚ್ಯಾ ಚಿಟಿಯಾ ಬಡಾಯೆಚ್ಯಾ ಅನಿ ತಾಕ್ತಿಚ್ಯಾ; ಖರೆ ತೊ ಅಮ್ಚ್ಯಾ ಮದ್ದಿ ರ್‍ಹಾತಾನಾ ಬಳ್ ನಸಲ್ಲ್ಯಾಚ್ಯಾ ಸಾರ್ಕೊ ದಿಸ್ತಾ .ಅನಿ ತೆಚ್ಯಾ ಗೊಸ್ಟಿಯಾತ್ನಿಬಿ ಅರ್ಥ್ ನಾ ಸಾರ್ಕೆ ದಿಸ್ತಾ .

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಕೊರಿಂಥದವರಿಗೆ 10:10
13 ತಿಳಿವುಗಳ ಹೋಲಿಕೆ  

ದೀಕ್ಷಾಸ್ನಾನ ಮಾಡಿಸುವದಕ್ಕಲ್ಲ, ಸುವಾರ್ತೆಯನ್ನು ಸಾರುವದಕ್ಕೇ ಕ್ರಿಸ್ತನು ನನ್ನನ್ನು ಕಳುಹಿಸಿದನು. ಆದರೆ ವಾಕ್ಚಾತುರ್ಯದಿಂದ ಸಾರಬೇಕೆಂದು ಕಳುಹಿಸಲಿಲ್ಲ; ಹಾಗೆ ಸಾರಿದರೆ ಕ್ರಿಸ್ತನ ಶಿಲುಬೆಯು ನಿರರ್ಥಕವಾಗುವದು.


ನಾನು ವಾಕ್ಚಾತುರ್ಯದಲ್ಲಿ ನಿಪುಣನಲ್ಲದಿದ್ದರೂ ಜ್ಞಾನದಲ್ಲಿ ನಿಪುಣನಾಗಿದ್ದೇನೆ; ಇದನ್ನು ಎಲ್ಲಾ ಕಾರ್ಯಗಳಲ್ಲಿ ಎಲ್ಲರ ಮುಂದೆ ನಿಮ್ಮ ಪ್ರಯೋಜನಕ್ಕಾಗಿ ತೋರ್ಪಡಿಸಿದ್ದೇವೆ.


ಆದರೆ ಮೋಶೆ ಯೆಹೋವನಿಗೆ - ಸ್ವಾಮೀ, ನಾನು ಮೊದಲಿನಿಂದಲೂ ನೀನು ದಾಸನ ಸಂಗಡ ಮಾತಾಡಿದ ಮೇಲೆಯೂ ವಾಕ್ಚಾತುರ್ಯವಿಲ್ಲದವನು; ನನ್ನ ಮಾತೂ ನಾಲಿಗೆಯೂ ಮಂದವಾಗಿವೆ ಎಂದು ಹೇಳಲು ಯೆಹೋವನು ಅವನಿಗೆ -


ಪೌಲನು ನಮ್ಮೆದುರಿನಲ್ಲಿರುವಾಗ ದೀನನಾಗಿ ನಡಕೊಳ್ಳುವವನೂ ದೂರದಲ್ಲಿರುವಾಗ ನಮ್ಮನ್ನು ಕುರಿತು ದಿಟ್ಟತನತೋರಿಸುವವನೂ ಆಗಿದ್ದಾನೆ ಎಂದು ಹೇಳುವವರು ನಿಮ್ಮಲ್ಲಿದ್ದಾರಲ್ಲಾ. ಆ ಪೌಲನೆಂಬ ನಾನು ಕ್ರಿಸ್ತನ ಶಾಂತಮನಸ್ಸನ್ನೂ ಸಾತ್ವಿಕತ್ವವನ್ನೂ ನೆನಪಿಗೆ ತಂದುಕೊಂಡು ನಿಮಗೆ ಖಂಡಿತವಾಗಿ ಹೇಳುವದೇನಂದರೆ


ಹೇಗಂದರೆ ಲೋಕವು ಜ್ಞಾನವೆನಿಸುವ ಮಾರ್ಗದಿಂದ ದೇವರನ್ನು ತಿಳುಕೊಳ್ಳದೆ ಹೋದದ್ದು ದೇವರ ಜ್ಞಾನದ ಸಂಕಲ್ಪವೆ; ಹೀಗಾದ ಮೇಲೆ ಹುಚ್ಚು ಮಾತು ಎಣಿಸಿಕೊಂಡಿರುವ ನಮ್ಮ ಪ್ರಸಂಗದಿಂದಲೇ ನಂಬುವವರನ್ನು ರಕ್ಷಿಸುವದು ದೇವರಿಗೆ ಒಳ್ಳೇದೆಂದು ತೋಚಿತು.


ಅದಕ್ಕೆ ನಾನು - ಅಯ್ಯೋ, ಕರ್ತನಾದ ಯೆಹೋವನೇ, ನಾನು ಮಾತು ಬಲ್ಲವನಲ್ಲ, ಬಾಲಕನು ಎಂದು ಬಿನ್ನವಿಸಿದೆನು.


ಪತ್ರಿಕೆಗಳಿಂದ ನಿಮ್ಮನ್ನು ಹೆದರಿಸುವವನಾಗಿ ಕಾಣಿಸಿಕೊಳ್ಳುವದಕ್ಕೆ ನನಗೆ ಮನಸ್ಸಿಲ್ಲ.


ಅಂಥವರು - ನಾವು ದೂರದಲ್ಲಿರುವಾಗ ಪತ್ರಿಕೆಗಳ ಮೂಲಕ ಮಾತಿನಲ್ಲಿ ಎಂಥವರಾಗಿದ್ದೇವೋ ಹತ್ತಿರದಲ್ಲಿರುವಾಗ ಕಾರ್ಯದಲ್ಲಿಯೂ ಅಂಥವರಾಗಿಯೇ ಇದ್ದೇವೆಂದು ತಿಳುಕೊಳ್ಳಲಿ.


ನಾವು ಬಲವಿಲ್ಲದವರಾಗಿದ್ದೆವೆಂಬಂತೆ ಇದನ್ನು ನನ್ನ ಅವಮಾನಕ್ಕೆ ಹೇಳಿದ್ದರೂ ಯಾವ ಆಧಾರದಿಂದ ಯಾವನಾದರೂ ಧೈರ್ಯವಾಗಿ ನಡಕೊಳ್ಳುತ್ತಾನೋ ಅದರಿಂದಲೇ ನಾನೂ ಧೈರ್ಯವುಳ್ಳವನಾಗಿದ್ದೇನೆ.


ಕ್ರಿಸ್ತನು ನನ್ನಲ್ಲಿ ಮಾತಾಡುತ್ತಾನೆಂಬದಕ್ಕೆ ನಿಮಗೆ ಬೇಕಾದ ಪ್ರಮಾಣವು ಆಗ ತೋರಿಬರುವದು. ಆತನು ನಿಮ್ಮನ್ನು ಕುರಿತು ನಿರ್ಬಲನಾಗಿರದೆ ಬಲವಾದ ಕೆಲಸಗಳನ್ನು ನಿಮ್ಮಲ್ಲಿ ನಡಿಸುವವನಾಗಿದ್ದಾನೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು