Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಅರಸುಗಳು 7:17 - ಕನ್ನಡ ಸತ್ಯವೇದವು J.V. (BSI)

17 ಅರಸನು ತನ್ನ ಹಸ್ತಕನಾದ ಸರದಾರನನ್ನು ಊರು ಬಾಗಲು ಕಾಯುವದಕ್ಕಾಗಿ ಕಳುಹಿಸಿದಲ್ಲಿ ಅವನು ಜನರಿಂದ ತುಳಿಯಲ್ಪಟ್ಟು ಸತ್ತನು. ಹೀಗೆ ದೇವರ ಮನುಷ್ಯನು ಅರಸನ ಜೊತೆಯಲ್ಲಿ ತನ್ನ ಬಳಿಗೆ ಬಂದಿದ್ದ ಆ ಸರದಾರನಿಗೆ ಹೇಳಿದ ಮಾತು ನೆರವೇರಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

17 ಅರಸನು ತನ್ನ ಸಹವರ್ತಿಯಾದ ಸರದಾರನನ್ನು ಊರಬಾಗಿಲು ಕಾಯುವುದಕ್ಕಾಗಿ ಕಳುಹಿಸಿದ್ದರಿಂದ, ಅವನು ಜನರಿಂದ ತುಳಿಯಲ್ಪಟ್ಟು ಸತ್ತು ಹೋದನು. ಹೀಗೆ ದೇವರ ಮನುಷ್ಯನು ಅರಸನ ಜೊತೆಯಲ್ಲಿ, ತನ್ನ ಬಳಿಗೆ ಬಂದಿದ್ದ ಆ ಸರದಾರನಿಗೆ ಹೇಳಿದ ಮಾತು ನೆರವೇರಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

17 ಅರಸನು ತನ್ನ ಹಸ್ತಕನಾದ ಸರದಾರನನ್ನು ಊರ ದ್ವಾರಪಾಲಕರ ನಾಯಕನನ್ನಾಗಿ ಕಳುಹಿಸಿದ್ದನು. ಅವನು ಜನರ ತುಳಿತಕ್ಕೆ ಸಿಕ್ಕಿ ಸತ್ತನು. ಹೀಗೆ ಆ ದೈವಪುರುಷನು ಅರಸನ ಜೊತೆಯಲ್ಲಿ ತನ್ನ ಬಳಿಗೆ ಬಂದಿದ್ದ ಆ ಸರದಾರನಿಗೆ ಹೇಳಿದ ಮಾತು ನೆರವೇರಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

17 ರಾಜನು ತನಗೆ ಆಪ್ತನಾಗಿದ್ದ ಅಧಿಕಾರಿಯನ್ನು ಪಟ್ಟಣದ ಬಾಗಿಲನ್ನು ಕಾಯಲು ಆರಿಸಿಕೊಂಡನು. ಆದರೆ ಜನರು ಶತ್ರುಗಳ ಪಾಳೆಯದಲ್ಲಿದ್ದ ಆಹಾರವನ್ನು ಪಡೆಯಲು ಓಡಿಹೋಗುವಾಗ ಅವನು ಜನರ ತುಳಿತಕ್ಕೆ ಸಿಕ್ಕಿಕೊಂಡು ಸತ್ತುಹೋದನು. ರಾಜನು ಎಲೀಷನ ಮನೆಗೆ ಬಂದಿದ್ದಾಗ, ದೇವಮನುಷ್ಯನು ಹೇಳಿದಂತೆಯೇ ಈ ಸಂಗತಿಗಳೆಲ್ಲಾ ಸಂಭವಿಸಿದವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

17 ಆದರೆ ಅರಸನಿಗೆ ಹಸ್ತಕನಾದ ಆ ಅಧಿಕಾರಿಯನ್ನು ಅರಸನು ಪಟ್ಟಣದ ಬಾಗಿಲಿನ ಕಾವಲಿಗೆ ನೇಮಿಸಿದ್ದನು. ಅರಸನು ದೇವರ ಮನುಷ್ಯನ ಬಳಿಗೆ ಬಂದಾಗ, ದೇವರ ಮನುಷ್ಯನು ಹೇಳಿದ್ದ ಪ್ರಕಾರವೇ ಜನರು ಆ ಅಧಿಕಾರಿಯನ್ನು ಪಟ್ಟಣದ ಬಾಗಿಲಲ್ಲಿ ತುಳಿದುಹಾಕಿದ್ದರಿಂದ ಅವನು ಮರಣಹೊಂದಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಅರಸುಗಳು 7:17
8 ತಿಳಿವುಗಳ ಹೋಲಿಕೆ  

ಇದನ್ನು ಕೇಳಿ ಅರಸನ ಹಸ್ತಕನಾದ ಸರದಾರನು ದೇವರ ಮನುಷ್ಯನಿಗೆ - ಯೆಹೋವನು ಆಕಾಶದಲ್ಲಿ ದ್ವಾರಗಳನ್ನು ಮಾಡಿದರೂ ಇದು ಸಂಭವಿಸಲಾರದು ಅನ್ನಲು ಎಲೀಷನು ಅವನಿಗೆ - ಅದು ಸಂಭವಿಸುವದನ್ನು ನೀನು ಕಣ್ಣಾರೆ ಕಾಣುವಿ, ಆದರೆ ಅದನ್ನು ಅನುಭವಿಸುವದಿಲ್ಲ ಎಂದು ಹೇಳಿದನು.


ಎಲೀಷನು ಊರಿನ ಹಿರಿಯರೊಡನೆ ತನ್ನ ಮನೆಯಲ್ಲಿ ಕೂತುಕೊಂಡಿದ್ದನು; ಅರಸನು ತನ್ನ ಹತ್ತಿರವಿದ್ದ ಒಬ್ಬ ಆಳನ್ನು ಕಳುಹಿಸಿದನು. ಅವನು ಇನ್ನೂ ದೂರದಲ್ಲಿರುವಾಗಲೇ ಎಲೀಷನು ಹಿರಿಯರಿಗೆ - ನೋಡಿರಿ, ಆ ಕೊಲೆಗಾರನ ಮಗನು ನನ್ನ ತಲೆಯನ್ನು ಹಾರಿಸುವದಕ್ಕೆ ಆಳನ್ನು ಕಳುಹಿಸಿದ್ದಾನೆ. ಆಳು ಇಲ್ಲಿಗೆ ಬಂದ ಕೂಡಲೆ ನೀವು ಬಾಗಲನ್ನು ಮುಚ್ಚಿ ಅವನು ಒಳಗೆ ಬಾರದಂತೆ ಅದನ್ನು ಒತ್ತಿಹಿಡಿಯಿರಿ; ಅವನ ಹಿಂದೆಯೇ ಬರುತ್ತಿರುವ ಅವನೊಡೆಯನ ಕಾಲು ಸಪ್ಪಳವು ಕೇಳಿಸುತ್ತದಲ್ಲಾ ಎಂದು ಹೇಳಿದನು.


ಯಾವನು ದೇವಕುಮಾರನನ್ನು ತುಳಿದು ಒಡಂಬಡಿಕೆಯನ್ನು ಸ್ಥಿರಪಡಿಸಿದಂಥ ತನ್ನನ್ನು ಪವಿತ್ರಮಾಡಿದಂಥ ರಕ್ತವನ್ನು ಅಶುದ್ಧವೆಂದೆಣಿಸಿ ದೇವರ ಕೃಪಾವರವಾಗಿರುವ ಆತ್ಮನನ್ನು ತಿರಸ್ಕಾರ ಮಾಡಿದ್ದಾನೋ ಅವನು ಇನ್ನೂ ಎಷ್ಟೋ ಕ್ರೂರವಾದ ದಂಡನೆಗೆ ಪಾತ್ರನಾಗಬೇಕೆಂಬದನ್ನು ಯೋಚಿಸಿರಿ.


ನಿನ್ನ ದೇವರಾದ ಯೆಹೋವನು ಎಲ್ಲಿ ಎಂದು ನನ್ನನ್ನು ಜರೆದ ಶತ್ರುಗಳು ಇದನ್ನು ನೋಡುವಾಗ ನಾಚಿಕೆಯು ಅವರನ್ನು ಕವಿದುಕೊಳ್ಳುವದು; ನಾನು ಅವರನ್ನು ಕಣ್ಣಾರೆ ನೋಡುವೆನು. ಈಗಲೇ ಬೀದಿಗಳ ಕೆಸರಂತೆ ತುಳಿತಕ್ಕೀಡಾಗುವರು.


ಏಕೆಂದರೆ ಯೆಹೋವನ ಹಸ್ತವು ಈ ಪರ್ವತದಲ್ಲಿ ನೆಲೆಯಾಗಿರುವದು; ಮೋವಾಬಾದರೋ ತಿಪ್ಪೆಗುಂಡಿಯ ರೊಚ್ಚಿನಲ್ಲಿ ಒಣಹುಲ್ಲು ತುಳಿಯಲ್ಪಡುವ ಹಾಗೆ ತಾನಿದ್ದಲ್ಲೇ ತುಳಿಯಲ್ಪಡುವದು.


ಅವನು ಅವರಿಗೆ - ಆಕೆಯನ್ನು ಕೆಳಗೆ ದೊಬ್ಬಿರಿ ಎಂದು ಆಜ್ಞಾಪಿಸಲು ಅವರು ದೊಬ್ಬಿದರು. ಆಕೆಯ ರಕ್ತವು ಗೋಡೆಗೂ ಕುದುರೆಗಳಿಗೂ ಸಿಡಿಯಿತು. ಅವನು ಆಕೆಯ ಶವವನ್ನು ತುಳಿಸಿಬಿಟ್ಟನು.


ಇಸ್ರಾಯೇಲ್ಯರು ಅವರನ್ನು ಸುತ್ತಿಕೊಂಡು ಎಲ್ಲಿಯೂ ಓಡಗೊಡದೆ ಗಿಬೆಯ ಊರಿನ ಪೂರ್ವದಿಕ್ಕಿನಲ್ಲಿರುವ ಮೆನೂಹದಲ್ಲಿ ತುಳಿದುಬಿಟ್ಟರು.


ಆದರೆ ಈ ವಿಷಯದಲ್ಲಿ ಯೆಹೋವನು ನನ್ನನ್ನು ಕ್ಷವಿುಸಲಿ; ನನ್ನ ಒಡೆಯನು ಆರಾಧನೆಗೋಸ್ಕರ ರಿಮ್ಮೋನನ ದೇವಸ್ಥಾನಕ್ಕೆ ಹೋಗಿ ನನ್ನ ಕೈಹಿಡಿದು ಆ ದೇವತೆಗೆ ನಮಸ್ಕಾರ ಮಾಡುವಾಗ ನಾನೂ ನಮಸ್ಕಾರ ಮಾಡಬೇಕಾಗುವದು. ಈ ಒಂದು ವಿಷಯದಲ್ಲಿ ಮಾತ್ರ ಯೆಹೋವನು ನನಗೆ ಕ್ಷಮೆಯನ್ನು ಅನುಗ್ರಹಿಸಬೇಕು ಅನ್ನಲು


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು