2 ಅರಸುಗಳು 7:15 - ಕನ್ನಡ ಸತ್ಯವೇದವು J.V. (BSI)15 ಅವರು ಯೊರ್ದನ್‍ಹೊಳೆಯವರೆಗೂ ಹೋಗಿ ಅವಸರದಿಂದ ಓಡಿಹೋದ ಅರಾಮ್ಯರು ದಾರಿಯಲ್ಲೆಲ್ಲಾ ತಮ್ಮ ಬಟ್ಟೆಗಳನ್ನೂ ಸಾಮಾನುಗಳನ್ನೂ ಬಿಸಾಡಿದ್ದನ್ನು ಕಂಡು ಹಿಂದಿರುಗಿ ಬಂದು ಅರಸನಿಗೆ ತಿಳಿಸಿದರು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201915 ಅವರು ಯೊರ್ದನ್ ನದಿಯವರೆಗೂ ಹೋಗಿ, ಅವಸರದಿಂದ ಓಡಿಹೋದ ಅರಾಮ್ಯರು ದಾರಿಯಲ್ಲೆಲ್ಲಾ ತಮ್ಮ ಬಟ್ಟೆಗಳನ್ನು ಸಾಮಾನುಗಳನ್ನು ಬಿಸಾಡಿದ್ದನ್ನೂ ಕಂಡು, ಹಿಂದಿರುಗಿ ಬಂದು ಅರಸನಿಗೆ ತಿಳಿಸಿದರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)15 ಅವರು ಜೋರ್ಡನ್ ನದಿಯವರೆಗೂ ಹೋಗಿ, ದಾರಿಯಲ್ಲೆಲ್ಲಾ ತಮ್ಮ ಬಟ್ಟೆಬರೆಗಳನ್ನೂ ಸಾಮಾನು ಸರಂಜಾಮುಗಳನ್ನೂ ಬಿಸಾಡಿರುವುದನ್ನು ಕಂಡು, ಹಿಂದಿರುಗಿ ಬಂದು ಅರಸನಿಗೆ ತಿಳಿಸಿದರು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್15 ಅವರು ಅರಾಮ್ಯರ ಸೇನೆಗಾಗಿ ಹುಡುಕಿಕೊಂಡು ಜೋರ್ಡನ್ ನದಿಯವರೆಗೂ ಹೋದರು. ರಸ್ತೆಯ ದಾರಿಯಲ್ಲೆಲ್ಲಾ ಬಟ್ಟೆಗಳು ಮತ್ತು ಆಯುಧಗಳು ಬಿದ್ದಿದ್ದವು. ಅರಾಮ್ಯರು ಆತುರಾತುರವಾಗಿ ಹೋಗುವಾಗ ಅವುಗಳನ್ನೆಲ್ಲಾ ಬಿಸಾಡಿ ಹೋಗಿದ್ದರು. ಸಂದೇಶಕರು ಸಮಾರ್ಯಕ್ಕೆ ಹಿಂದಿರುಗಿ ಬಂದು ರಾಜನಿಗೆ ವಿಷಯವನ್ನು ಹೇಳಿದರು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ15 ಅವರು ಅವರ ಹಿಂದೆ ಯೊರ್ದನಿನವರೆಗೆ ಹೋದರು. ಮಾರ್ಗದಲ್ಲೆಲ್ಲಾ ಅರಾಮ್ಯರು ಅವಸರದಿಂದ ಬಿಸಾಡಿದ ವಸ್ತ್ರಗಳೂ, ಪಾತ್ರೆಗಳೂ ತುಂಬಿದ್ದವು. ದೂತರು ತಿರುಗಿಬಂದು ಅರಸನಿಗೆ ತಿಳಿಸಿದರು. ಅಧ್ಯಾಯವನ್ನು ನೋಡಿ |