Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಅರಸುಗಳು 6:8 - ಕನ್ನಡ ಸತ್ಯವೇದವು J.V. (BSI)

8 ಅರಾಮ್ಯರ ಅರಸನು ಇಸ್ರಾಯೇಲ್ಯರಿಗೆ ವಿರೋಧವಾಗಿ ಯುದ್ಧಕ್ಕೆ ಬಂದನು. ಅವನು ಯುದ್ಧದಲ್ಲಿ ಹೊಂಚುಹಾಕತಕ್ಕ ಸ್ಥಳವನ್ನು ತನ್ನ ಸೇನಾಪತಿಗಳೊಡನೆ ಗೊತ್ತು ಮಾಡುವಷ್ಟು ಸಾರಿ

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

8 ಅರಾಮ್ಯರ ಅರಸನು ಇಸ್ರಾಯೇಲರಿಗೆ ವಿರೋಧವಾಗಿ ಯುದ್ಧಕ್ಕೆ ಬಂದನು. ಅವನು ತನ್ನ ಸೇನಾಧಿಪತಿಗಳಿಗೆ, “ಯುದ್ಧದಲ್ಲಿ ಹೊಂಚುಹಾಕತಕ್ಕ ಸ್ಥಳವನ್ನು ಗೊತ್ತುಮಾಡಬೇಕು” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

8 ಸಿರಿಯಾದ ರಾಜನು ಇಸ್ರಯೇಲರಿಗೆ ವಿರುದ್ಧ ಯುದ್ಧಕ್ಕೆ ಬಂದನು. ಅವನು ಯುದ್ಧದಲ್ಲಿ ಹೊಂಚುಹಾಕತಕ್ಕ ಸ್ಥಳವನ್ನು ತನ್ನ ಸೇನಾಪತಿಗಳೊಡನೆ ಗೊತ್ತುಮಾಡುತ್ತಿದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

8 ಅರಾಮ್ಯರ ರಾಜನು ಇಸ್ರೇಲಿನ ವಿರುದ್ಧ ಯುದ್ಧಮಾಡಲು ಬಂದನು. ಅವನು ತನ್ನ ಸೇನಾಧಿಕಾರಿಗಳ ಸಭೆಸೇರಿಸಿ, “ನೀವು ಈ ಜಾಗದಲ್ಲಿ ಅಡಗಿಕೊಂಡಿದ್ದು, ಇಸ್ರೇಲರು ಇಲ್ಲಿಗೆ ಬಂದಾಗ ಅವರ ಮೇಲೆ ಆಕ್ರಮಣ ಮಾಡಿ” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

8 ಅರಾಮ್ಯರ ಅರಸನು ಇಸ್ರಾಯೇಲಿನ ಮೇಲೆ ಯುದ್ಧ ಮಾಡುತ್ತಿದ್ದನು. ಇಂಥಿಂಥ ಸ್ಥಳದಲ್ಲಿ ತನ್ನ ದಂಡು ಇಳಿಯಬೇಕೆಂದು ತನ್ನ ಸೇವಕರ ಸಂಗಡ ಯೋಚನೆ ಮಾಡಿಕೊಂಡನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಅರಸುಗಳು 6:8
13 ತಿಳಿವುಗಳ ಹೋಲಿಕೆ  

ಆಲೋಚನೆಮಾಡಿಕೊಳ್ಳಿರಿ, ಅದು ಮುರಿದುಹೋಗುವದು; ಅಪ್ಪಣೆಮಾಡಿರಿ, ಅದು ನಿಲ್ಲದು; ದೇವರು ನಮ್ಮ ಕೂಡ ಇದ್ದಾನಷ್ಟೆ.


ಯಾವ ಜ್ಞಾನವೂ ಯಾವ ವಿವೇಕವೂ ಯಾವ ಆಲೋಚನೆಯೂ ಯೆಹೋವನೆದುರಿಗೆ ನಿಲ್ಲುವದಿಲ್ಲ.


ಉದ್ದೇಶಗಳು ಮಂತ್ರಾಲೋಚನೆಯಿಂದ ನೆರವೇರುವವು; ಮಂತ್ರಾಲೋಚನೆಯಿಂದಲೇ ಯುದ್ಧವನ್ನು ನಡಿಸು.


ಆಮೇಲೆ ಅರಾಮ್ಯರ ಅರಸನಾದ ಬೆನ್ಹದದನು ತನ್ನ ಎಲ್ಲಾ ಸೈನ್ಯವನ್ನು ಕೂಡಿಸಿಕೊಂಡು ಬಂದು ಸಮಾರ್ಯಕ್ಕೆ ಮುತ್ತಿಗೆಹಾಕಿದನು.


ಅರಾಮ್ಯರ ಅರಸನು ತನ್ನ ರಥಬಲದ ಮೂವತ್ತೆರಡು ಮಂದಿ ಅಧಿಪತಿಗಳಿಗೆ - ನೀವು ಶತ್ರುಗಳ ಸಾಧಾರಣ ಸೈನಿಕರನ್ನೂ ಅಧಿಪತಿಗಳನ್ನೂ ಬಿಟ್ಟು ಇಸ್ರಾಯೇಲ್ಯರ ಅರಸನಿಗೇ ಗುರಿಯಿಡಿರಿ ಎಂದು ಆಜ್ಞಾಪಿಸಿದ್ದನು.


ಬೆನ್ಹದದನು ಅವನಿಗೆ - ನನ್ನ ತಂದೆಯು ನಿನ್ನ ತಂದೆಯಿಂದ ಕಿತ್ತುಕೊಂಡ ಪಟ್ಟಣಗಳನ್ನು ನಾನು ಹಿಂದಕ್ಕೆ ಕೊಡುತ್ತೇನೆ; ಅವನು ಸಮಾರ್ಯದಲ್ಲಿ ಮಾಡಿದಂತೆ ನೀನೂ ನಿನಗೋಸ್ಕರ ದಮಸ್ಕದಲ್ಲಿ ಕೆಲವು ಕೇರಿಗಳನ್ನು ಮಾಡಿಸಿಕೊಳ್ಳಬಹುದು ಎಂದು ಹೇಳಲು ಅಹಾಬನು - ನಾನು ಈ ಒಪ್ಪಂದದ ಮೇಲೆ ನಿನ್ನನ್ನು ಬಿಟ್ಟುಬಿಡುತ್ತೇನೆ ಎಂದು ಹೇಳಿ ಅವನಿಂದ ಪ್ರಮಾಣಮಾಡಿಸಿ ಕಳುಹಿಸಿಬಿಟ್ಟನು.


ಅರಾಮ್ಯರ ಅರಸನ ಮಂತ್ರಿಗಳು ತಮ್ಮ ಒಡೆಯನಿಗೆ - ಇಸ್ರಾಯೇಲ್ಯರ ದೇವರು ಬೆಟ್ಟಗಳ ದೇವರಾಗಿರುವದರಿಂದ ಅವರು ನಮ್ಮನ್ನು ಸೊಲಿಸಿದರು; ನಾವು ಅವರೊಡನೆ ಬೈಲಿನಲ್ಲಿ ಯುದ್ಧಮಾಡುವದಾದರೆ ಹೇಗೂ ಜಯಹೊಂದುವೆವು.


ಅರಾಮ್ಯರ ಅರಸನಾದ ಬೆನ್ಹದದನು ತನ್ನ ಎಲ್ಲಾ ಸೈನ್ಯವನ್ನು ಕೂಡಿಸಿಕೊಂಡು ರಥಾಶ್ವಬಲಗಳಿಂದ ಕೂಡಿದ ಮೂವತ್ತೆರಡು ಮಂದಿ ಅರಸರೊಡನೆ ಹೊರಟು ಬಂದು ಸಮಾರ್ಯಪಟ್ಟಣಕ್ಕೆ ಮುತ್ತಿಗೆ ಹಾಕಿ ಯುದ್ಧಮಾಡಿದನು.


ಎಲೀಷನು ಅದನ್ನು ತೆಗೆದುಕೋ ಎಂದು ಆಜ್ಞಾಪಿಸಲು ಆ ಮನುಷ್ಯನು ಕೈಚಾಚಿ ಅದನ್ನು ತೆಗೆದುಕೊಂಡನು.


ದೇವರ ಮನುಷ್ಯನು ಇಸ್ರಾಯೇಲ್ಯರ ಅರಸನಿಗೆ - ಜಾಗರೂಕತೆಯಿಂದಿರ್ರಿ; ನೀವು ಇಂಥಿಂಥ ಸ್ಥಳದಲ್ಲಿ ಹಾಯಬಾರದು, ಅಲ್ಲಿ ಅರಾಮ್ಯರು ಅಡಗಿಕೊಂಡಿದ್ದಾರೆ ಎಂದು ತಿಳಿಸುತ್ತಿದ್ದನು.


ಮೂರು ವರುಷಗಳವರೆಗೆ ಇಸ್ರಾಯೇಲ್ಯರಿಗೂ ಅರಾಮ್ಯರಿಗೂ ಯುದ್ಧ ನಡೆಯಲಿಲ್ಲ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು