Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಅರಸುಗಳು 6:31 - ಕನ್ನಡ ಸತ್ಯವೇದವು J.V. (BSI)

31 ಇದಲ್ಲದೆ ಅವನು - ನಾನು ಈಹೊತ್ತು ಶಾಫಾಟನ ಮಗನಾದ ಎಲೀಷನ ತಲೆಯನ್ನು ಹಾರಿಸದಿದ್ದರೆ ದೇವರು ನನಗೆ ಬೇಕಾದದ್ದನ್ನು ಮಾಡಲಿ ಎಂದು ಆಣೆಯಿಟ್ಟುಕೊಂಡನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

31 ಇದಲ್ಲದೆ ಅವನು, “ನಾನು ಈ ಹೊತ್ತು ಶಾಫಾಟನ ಮಗನಾದ ಎಲೀಷನ ತಲೆಯನ್ನು ಅವನ ದೇಹದಿಂದ ಬೇರ್ಪಡಿಸದೆ ಹೋದರೆ ದೇವರು ನನಗೆ ಬೇಕಾದದ್ದನ್ನು ಮಾಡಲಿ” ಎಂದು ಆಣೆಯಿಟ್ಟುಕೊಂಡನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

31 ಇದಲ್ಲದೆ ಅವನು, “ನಾನು ಈ ದಿನ ಶಾಫಾಟನ ಮಗ ಎಲೀಷನ ತಲೆಯನ್ನು ಹಾರಿಸದಿದ್ದರೆ ದೇವರು ನನಗೆ ಬೇಕಾದದ್ದನ್ನು ಮಾಡಲಿ!” ಎಂದು ಆಣೆಯಿಟ್ಟುಕೊಂಡನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

31 ಇದಲ್ಲದೆ ರಾಜನು, “ಈ ದಿನದ ಅಂತ್ಯದೊಳಗೆ ನಾನು ಶಾಫಾಟನ ಮಗನಾದ ಎಲೀಷನ ತಲೆಯನ್ನು ಅವನ ದೇಹದ ಮೇಲೆ ಉಳಿಯುವಂತೆ ಮಾಡಿದರೆ ದೇವರು ನನ್ನನ್ನು ದಂಡಿಸಲಿ!” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

31 ಆಗ ಅವನು, “ಶಾಫಾಟನ ಮಗ ಎಲೀಷನ ತಲೆಯನ್ನು ಹಾರಿಸದಿದ್ದರೆ, ದೇವರು ನನಗೆ ಇದರಂತೆಯೂ ಇನ್ನೂ ಹೆಚ್ಚಾಗಿಯೂ ಮಾಡಲಿ,” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಅರಸುಗಳು 6:31
18 ತಿಳಿವುಗಳ ಹೋಲಿಕೆ  

ಆಕೆಯು ಎಲೀಯನ ಬಳಿಗೆ ದೂತರನ್ನು ಕಳುಹಿಸಿ ಅವನಿಗೆ - ನೀನು ಪ್ರವಾದಿಗಳ ಪ್ರಾಣವನ್ನು ತೆಗೆದಂತೆ ನಾಳೆ ಇಷ್ಟು ಹೊತ್ತಿಗೆ ನಾನು ನಿನ್ನ ಪ್ರಾಣವನ್ನು ತೆಗೆಯದೆ ಹೋದರೆ ದೇವತೆಗಳು ನನಗೆ ಬೇಕಾದದ್ದನ್ನು ಮಾಡಲಿ ಎಂದು ಹೇಳಿಕಳುಹಿಸಿದಳು.


ನೀನು ಸಾಯುವಲ್ಲೇ ನಾನೂ ಸಾಯುವೆನು; ಅಲ್ಲೇ ನನಗೆ ಸಮಾಧಿಯಾಗಬೇಕು. ಮರಣದಿಂದಲ್ಲದೆ ನಾನು ನಿನ್ನನ್ನು ಅಗಲಿದರೆ ಯೆಹೋವನು ನನಗೆ ಬೇಕಾದದ್ದನ್ನು ಮಾಡಲಿ ಎಂದಳು.


ಜನವೆಲ್ಲಾ ನಾಶವಾಗುವದಕ್ಕಿಂತ ಒಬ್ಬ ಮನುಷ್ಯನು ಜನಕ್ಕೋಸ್ಕರ ಸಾಯುವದು ನಿಮಗೆ ಹಿತವೆಂದು ನೀವು ಆಲೋಚಿಸುವದೂ ಇಲ್ಲ ಎಂಬದಾಗಿ ಹೇಳಿದನು.


ಆಮೇಲೆ ಆ ಪ್ರಧಾನರು ಅರಸನಿಗೆ - ಒಡೆಯಾ, ಇವನಿಗೆ ಮರಣದಂಡನೆಯಾಗಬೇಕು. ಇವನು ಪಟ್ಟಣದಲ್ಲಿ ಉಳಿದಿರುವ ಯೋಧರಿಗೂ ಸಕಲ ಜನರಿಗೂ ಇಂಥಾ ಮಾತುಗಳನ್ನು ನುಡಿಯುತ್ತಾ ಅವರನ್ನು ಜೋಲುಗೈಯವರನ್ನಾಗಿ ಮಾಡುತ್ತಾನೆ; ಈ ಜನರ ಕ್ಷೇಮವನ್ನಲ್ಲ, ಹಾನಿಯನ್ನೇ ಹಾರೈಸುತ್ತಾನೆ ಎಂದು ಹೇಳಿದರು.


ನಮಗೋಸ್ಕರ ಯೆಹೋವನ ಸನ್ನಿಧಿಯಲ್ಲಿ ವಿಚಾರಿಸಬಲ್ಲವನಾದ ಇನ್ನೊಬ್ಬ ಪ್ರವಾದಿಯಿರುತ್ತಾನೆ; ಅವನು ಇಮ್ಲನ ಮಗನಾದ ಮೀಕಾಯೆಹು ಎಂಬವನು. ಆದರೆ ನಾನು ಅವನನ್ನು ಹಗೆಮಾಡುತ್ತೇನೆ; ಅವನು ನನ್ನನ್ನು ಕುರಿತು ಯಾವಾಗಲೂ ಶುಭವನ್ನಲ್ಲ, ಅಶುಭವನ್ನೇ ಮುಂತಿಳಿಸುತ್ತಾನೆ ಎಂದು ಉತ್ತರಕೊಟ್ಟನು. ಅದಕ್ಕೆ ಯೆಹೋಷಾಫಾಟನು - ಅರಸನು ಹಾಗನ್ನದಿರಲಿ ಅಂದನು.


ಅವನನ್ನು ಕಂಡ ಕೂಡಲೆ - ಇಸ್ರಾಯೇಲ್ಯರಿಗೆ ಆಪತ್ತನ್ನು ಬರಮಾಡಿದವನೇ, ನೀನು ಬಂದಿಯಾ ಅಂದನು.


ಇದಲ್ಲದೆ ಅರಸನಾದ ಸೊಲೊಮೋನನು - ಯೆಹೋವನಾಣೆ, ಅದೋನೀಯನ ಈ ಮಾತಿಗೋಸ್ಕರ ನಾನು ಅವನನ್ನು ಮರಣಕ್ಕೆ ಪಾತ್ರನೆಂದು ಎಣಿಸದಿದ್ದರೆ ದೇವರು ನನಗೆ ಬೇಕಾದದ್ದನ್ನು ಮಾಡಲಿ.


ಅಮಾಸನಿಗೆ - ನೀನೂ ನನ್ನ ರಕ್ತ ಸಂಬಂಧಿಯಾಗಿದ್ದೀ; ನಾನು ಯೋವಾಬನ ಬದಲಿಗೆ ನಿನ್ನನ್ನೇ ನಿತ್ಯ ಸೇನಾಪತಿಯನ್ನಾಗಿ ಮಾಡದಿದ್ದರೆ ಯೆಹೋವನು ನನಗೆ ಬೇಕಾದದ್ದನ್ನು ಮಾಡಲಿ ಎಂಬದಾಗಿಯೂ ತಿಳಿಸಿರಿ ಎಂದು ಹೇಳಿಕಳುಹಿಸಿದನು.


ಸೂರ್ಯಾಸ್ತಮಾನಕ್ಕೆ ಮೊದಲೇ ಜನರೆಲ್ಲರೂ ದಾವೀದನ ಬಳಿಗೆ ಬಂದು ಅವನನ್ನು ಊಟಕ್ಕೆ ಎಬ್ಬಿಸಬೇಕೆಂದು ಪ್ರಯತ್ನಿಸಿದರು. ಆದರೆ ಅವನು - ಸೂರ್ಯನು ಮುಣುಗುವ ಮೊದಲು ನಾನು ರೊಟ್ಟಿಯನ್ನಾಗಲಿ ಬೇರೆ ಯಾವದನ್ನಾಗಲಿ ಬಾಯಲ್ಲಿ ಹಾಕಿದರೆ ದೇವರು ನನಗೆ ಬೇಕಾದದ್ದು ಮಾಡಲಿ ಎಂದು ಆಣೆಯಿಟ್ಟು ಹೇಳಿದನು.


ನಾನು ಅರಸುತನವನ್ನು ಸೌಲನ ಕುಟುಂಬದಿಂದ ತೆಗೆದು ದಾನಿನಿಂದ ಬೇರ್ಷೆಬದವರೆಗಿರುವ ಎಲ್ಲಾ ಇಸ್ರಾಯೇಲ್ಯರಲ್ಲಿಯೂ ಯೆಹೂದ್ಯರಲ್ಲಿಯೂ ದಾವೀದನ ಸಿಂಹಾಸನವನ್ನು ಸ್ಥಿರಪಡಿಸಿ


ಬೆಳಗಾಗುವಷ್ಟರಲ್ಲಿ ಅವನ ಜನರೊಳಗೆ ಒಬ್ಬ ಗಂಡಸಾದರೂ ಉಳಿದರೆ ದೇವರು ದಾವೀದನಿಗೆ ಬೇಕಾದದ್ದನ್ನು ಮಾಡಲಿ ಎಂದು ಪ್ರತಿಜ್ಞೆಮಾಡಿದ್ದನು.


ಅದಕ್ಕೆ ಸೌಲನು - ಯೋನಾತಾನನೇ, ನಾನು ನಿನ್ನನ್ನು ಕೊಲ್ಲದೆ ಬಿಟ್ಟರೆ ದೇವರು ನನಗೆ ಬೇಕಾದದ್ದನ್ನು ಮಾಡಲಿ ಅನ್ನಲು ಜನರು ಅವನಿಗೆ -


ಆಗ ಏಲಿಯು ಅವನಿಗೆ - ಯೆಹೋವನು ನಿನಗೆ ತಿಳಿಸಿದ್ದೇನು? ಆತನ ಮಾತುಗಳಲ್ಲಿ ಒಂದನ್ನಾದರೂ ಮುಚ್ಚಬೇಡ; ಮುಚ್ಚಿದರೆ ಆತನು ಬೇಕಾದ ಹಾಗೆ ನಿನ್ನನ್ನು ದಂಡಿಸಲಿ ಎಂದು ಹೇಳಲು


ದೂತರು ಬಂದು ಈ ಮಾತುಗಳನ್ನು ಬೆನ್ಹದದನಿಗೆ ತಿಳಿಸಿದಾಗ ಅವನು ಅಹಾಬನಿಗೆ - ಸಮಾರ್ಯಪಟ್ಟಣದ ನಾಶನದಿಂದುಂಟಾಗುವ ಧೂಳು ಲೆಕ್ಕವಿಲ್ಲದ ನನ್ನ ಸೈನಿಕರ ಹಿಡಿತುಂಬವಷ್ಟಿದ್ದರೆ ದೇವತೆಗಳು ನನಗೆ ಬೇಕಾದದ್ದನ್ನು ಮಾಡಲಿ ಎಂದು ಹೇಳಿಕಳುಹಿಸಿದನು.


ನಾಮಾನನು ಸ್ವಲ್ಪದೂರಕ್ಕೆ ಹೋದನಂತರ ದೇವರ ಮನುಷ್ಯನಾದ ಎಲೀಷನ ಸೇವಕ ಗೇಹಜಿಯು ಮನಸ್ಸಿನಲ್ಲಿ - ನನ್ನ ಯಜಮಾನನು ಆ ಅರಾಮ್ಯನಾದ ನಾಮಾನನಿಂದ ಏನೂ ತೆಗೆದುಕೊಳ್ಳದೆ ಅವನನ್ನು ಹಾಗೆಯೇ ಕಳುಹಿಸಿಬಿಟ್ಟನಲ್ಲಾ; ಯೆಹೋವನಾಣೆ, ನಾನು ಅವನ ಹಿಂದೆ ಓಡುತ್ತಾ ಹೋಗಿ ಅವನಿಂದ ಸ್ವಲ್ಪವನ್ನಾದರೂ ಬಾಚಿಕೊಂಡು ಬರುವೆನು ಅಂದುಕೊಂಡು ಹೊರಟನು.


ಭೂಪನ ಕೋಪ ಮೃತ್ಯುವಿನ ದೂತ; ಜಾಣನು ಅದನ್ನು ಶಮನಪಡಿಸುವನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು