2 ಅರಸುಗಳು 6:28 - ಕನ್ನಡ ಸತ್ಯವೇದವು J.V. (BSI)28 ನಿನಗಿರುವ ದುಃಖ ಯಾವದು ಎಂದು ಕೇಳಿದನು. ಆಗ ಆಕೆಯು - ಈ ಸ್ತ್ರೀಯು ನನಗೆ - ನಿನ್ನ ಮಗನನ್ನು ತೆಗೆದುಕೊಂಡು ಬಾ; ನಾವು ಈ ಹೊತ್ತು ಅವನನ್ನು ತಿಂದುಬಿಡೋಣ; ನಾಳೆ ನನ್ನ ಮಗನನ್ನು ತಿನ್ನೋಣ ಎಂದು ಹೇಳಿದ್ದರಿಂದ ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201928 “ನಿನಗಿರುವ ದುಃಖ ಯಾವುದು” ಎಂದು ಅರಸನು ಕೇಳಿದನು. ಆಗ ಆಕೆಯು, “ಈ ಸ್ತ್ರೀಯು ನನಗೆ, ನಿನ್ನ ಮಗನನ್ನು ತೆಗೆದುಕೊಂಡು ಬಾ, ನಾವು ಈ ಹೊತ್ತು ಅವನನ್ನು ತಿಂದುಬಿಡೋಣ, ನಾಳೆ ನನ್ನ ಮಗನನ್ನು ತಿನ್ನೋಣ” ಎಂದು ಹೇಳಿದ್ದರಿಂದ, ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)28 “ನಿನಗಿರುವ ದುಃಖ ಯಾವುದು?” ಎಂದನು. ಆಗ ಆಕೆ, “ಈ ಸ್ತ್ರೀ ನನಗೆ, ‘ನಿನ್ನ ಮಗನನ್ನು ತೆಗೆದುಕೊಂಡು ಬಾ; ನಾವು ಈ ದಿನ ಅವನನ್ನು ತಿಂದುಬಿಡೋಣ; ನಾಳೆ ನನ್ನ ಮಗನನ್ನು ತಿನ್ನೋಣ,’ ಎಂದು ಹೇಳಿದ್ದರಿಂದ ನಾವಿಬ್ಬರೂ ನನ್ನ ಮಗನನ್ನು ಕೊಂದು ಬೇಯಿಸಿ ತಿಂದುಬಿಟ್ಟೆವು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್28 ನಂತರ ಇಸ್ರೇಲಿನ ರಾಜನು ಆ ಸ್ತ್ರೀಗೆ, “ನಿನ್ನ ತೊಂದರೆಯೇನು?” ಎಂದು ಕೇಳಿದನು. ಆ ಸ್ತ್ರೀಯು, “ಇವಳು ನನಗೆ, ‘ನಿನ್ನ ಮಗನನ್ನು ನನಗೆ ಕೊಡು. ನಾವು ಅವನನ್ನು ಕೊಂದು, ಈ ಹೊತ್ತು ತಿನ್ನೋಣ. ನಾಳೆ ನನ್ನ ಮಗನನ್ನು ತಿನ್ನೋಣ’ ಎಂದಳು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ28 ಅರಸನು ಅವಳಿಗೆ, “ನಿನ್ನ ದುಃಖವೇನು?” ಎಂದನು. ಅದಕ್ಕವಳು, “ಈ ಸ್ತ್ರೀಯು ನನಗೆ ಹೇಳಿದ್ದೇನೆಂದರೆ, ‘ಈ ಹೊತ್ತು ನಾವು ನಿನ್ನ ಮಗನನ್ನು ತಿನ್ನುವಂತೆ ಅವನನ್ನು ಕೊಡು, ನಾಳೆ ನನ್ನ ಮಗನನ್ನು ತಿನ್ನೋಣ,’ ಎಂದಳು. ಅಧ್ಯಾಯವನ್ನು ನೋಡಿ |