Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಅರಸುಗಳು 4:37 - ಕನ್ನಡ ಸತ್ಯವೇದವು J.V. (BSI)

37 ಆಕೆಯು ಹತ್ತಿರ ಬಂದು ಅವನ ಪಾದಗಳಿಗೆ ಬಿದ್ದು ಸಾಷ್ಟಾಂಗನಮಸ್ಕಾರಮಾಡಿ ಮಗನನ್ನು ತೆಗೆದುಕೊಂಡು ಹೋದಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

37 ಆಕೆಯು ಹತ್ತಿರ ಬಂದು, ಅವನ ಪಾದಗಳಿಗೆ ಬಿದ್ದು ಸಾಷ್ಟಾಂಗನಮಸ್ಕಾರ ಮಾಡಿ, ಮಗನನ್ನು ಕರೆದುಕೊಂಡು ಹೋದಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

37 ಆಕೆ ಹತ್ತಿರ ಬಂದು ಅವನ ಪಾದಗಳಿಗೆ ಬಿದ್ದು, ಸಾಷ್ಟಾಂಗ ನಮಸ್ಕಾರ ಮಾಡಿ, ಮಗನನ್ನು ತೆಗೆದುಕೊಂಡು ಹೋದಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

37 ಆಗ ಶೂನೇಮಿನ ಆ ಸ್ತ್ರೀಯು ಕೊಠಡಿಯೊಳಕ್ಕೆ ಹೋಗಿ, ಎಲೀಷನ ಪಾದಗಳಿಗೆ ಬಾಗಿ ನಮಸ್ಕರಿಸಿದಳು. ನಂತರ ಅವಳು ತನ್ನ ಮಗನನ್ನು ಎತ್ತಿಕೊಂಡು ಹೊರಗೆ ಹೋದಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

37 ಆಗ ಅವಳು ಬಂದು, ಅವನ ಪಾದಗಳ ಮೇಲೆ ಬಿದ್ದು, ನೆಲಕ್ಕೆ ಬಗ್ಗಿ ತನ್ನ ಮಗನನ್ನು ಎತ್ತಿಕೊಂಡು ಹೊರಟು ಹೋದಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಅರಸುಗಳು 4:37
6 ತಿಳಿವುಗಳ ಹೋಲಿಕೆ  

ಸ್ತ್ರೀಯರು ಸತ್ತುಹೋಗಿದ್ದ ತಮ್ಮವರನ್ನು ಪುನರುತ್ಥಾನದಿಂದ ತಿರಿಗಿ ಹೊಂದಿದರು. ಕೆಲವರು ತಾವು ಯಾತನೆಯ ಯಂತ್ರಕ್ಕೆ ಕಟ್ಟಲ್ಪಟ್ಟಾಗ ಶ್ರೇಷ್ಠ ಪುನರುತ್ಥಾನವನ್ನು ಹೊಂದುವದಕ್ಕೋಸ್ಕರ ಬಿಡುಗಡೆ ಬೇಡವೆಂದು ಹೇಳಿ ಮುರಿಸಿಕೊಂಡು ಸತ್ತರು.


ಬೆಟ್ಟದ ಮೇಲಿದ್ದ ದೇವರ ಮನುಷ್ಯನ ಬಳಿಗೆ ಬಂದು ಅವನ ಪಾದಗಳನ್ನು ಹಿಡಿದಳು. ಗೇಹಜಿಯು ಆಕೆಯನ್ನು ದೂಡುವದಕ್ಕಾಗಿ ಹತ್ತಿರ ಬರಲು ದೇವರ ಮನುಷ್ಯನು ಅವನಿಗೆ - ಬಿಡು, ಆಕೆಯ ಮನಸ್ಸಿನಲ್ಲಿ ಬಹುದುಃಖವಿರುವ ಹಾಗೆ ತೋರುತ್ತದೆ; ಯೆಹೋವನು ಆಕೆಯ ದುಃಖವನ್ನು ನನಗೆ ಪ್ರಕಟಿಸಲಿಲ್ಲ, ಮರೆ ಮಾಡಿದ್ದಾನೆ ಎಂದು ಹೇಳಿದನು.


ದೂರದಲ್ಲಿ ನಿಂತಿದ್ದ ಯೆರಿಕೋವಿನ ಪ್ರವಾದಿ ಮಂಡಲಿಯವರು ಇದನ್ನು ಕಂಡು ಎಲೀಯನಿಗಿದ್ದ ಆತ್ಮವು ಎಲೀಷನ ಮೇಲೆ ಬಂದಿತೆಂದು ತಿಳಿದುಕೊಂಡು ಅವನನ್ನು ಎದುರುಗೊಂಡು ಅವನಿಗೆ ಸಾಷ್ಟಾಂಗ ನಮಸ್ಕಾರಮಾಡಿದರು.


ಆಗ ಆಕೆಯು ಅವನಿಗೆ - ನೀನು ದೇವರ ಮನುಷ್ಯನೆಂದೂ ನಿನ್ನ ಬಾಯಿಂದ ಬಂದ ಯೆಹೋವನ ಮಾತು ಸತ್ಯವೆಂದೂ ಈಗ ನನಗೆ ಗೊತ್ತಾಯಿತು ಎಂದು ಹೇಳಿದಳು.


ಆಗ ಎಲೀಷನು ಗೇಹಜಿಗೆ - ಶೂನೇಮ್ಯಳನ್ನು ಕರೆ ಎಂದು ಆಜ್ಞಾಪಿಸಲು ಅವನು ಆಕೆಯನ್ನು ಕರೆದನು. ಆಕೆಯು ಬಂದಾಗ ಎಲೀಷನು ಆಕೆಗೆ - ನಿನ್ನ ಮಗನನ್ನು ತೆಗೆದುಕೋ ಎಂದು ಹೇಳಿದನು.


ಆಗ ಯೋಸೇಫನು ಅವರನ್ನು ತಂದೆಯ ಮೊಣಕಾಲಿನ ಕಡೆಯಿಂದ ಬರಮಾಡಿ [ಅವನಿಗೆ] ಅಡ್ಡಬಿದ್ದನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು