Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಅರಸುಗಳು 4:22 - ಕನ್ನಡ ಸತ್ಯವೇದವು J.V. (BSI)

22 ಬಾಗಲು ಮುಚ್ಚಿ ಗಂಡನನ್ನು ಕರಿಸಿ ಅವನಿಗೆ - ದಯವಿಟ್ಟು ನನಗೋಸ್ಕರ ಒಬ್ಬ ಸೇವಕನನ್ನೂ ಒಂದು ಕತ್ತೆಯನ್ನೂ ಕಳುಹಿಸು; ನಾನು ಬೇಗನೆ ದೇವರ ಮನುಷ್ಯನ ಬಳಿಗೆ ಹೋಗಿ ಬರುತ್ತೇನೆ ಎಂದು ಹೇಳಿದಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

22 ಗಂಡನನ್ನು ಕರೆಯಿಸಿ ಅವನಿಗೆ, “ದಯವಿಟ್ಟು, ನನಗೋಸ್ಕರ ಒಬ್ಬ ಸೇವಕನನ್ನೂ, ಒಂದು ಕತ್ತೆಯನ್ನೂ ಕಳುಹಿಸು. ನಾನು ಬೇಗನೆ ದೇವರ ಮನುಷ್ಯನ ಬಳಿಗೆ ಹೋಗಿಬರುತ್ತೇನೆ” ಎಂದು ಹೇಳಿದಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

22 “ದಯವಿಟ್ಟು ನನಗಾಗಿ ಒಬ್ಬ ಸೇವಕನನ್ನೂ ಒಂದು ಕತ್ತೆಯನ್ನೂ ಕಳುಹಿಸಿ; ನಾನು ಬೇಗನೆ ಆ ದೈವಪುರುಷನ ಬಳಿಗೆ ಹೋಗಿ ಬರುತ್ತೇನೆ,” ಎಂದು ಕೇಳಿದಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

22 ಅವಳು ತನ್ನ ಗಂಡನನ್ನು ಕರೆದು, “ದಯವಿಟ್ಟು ಒಬ್ಬ ಸೇವಕನನ್ನೂ ಒಂದು ಹೇಸರಕತ್ತೆಯನ್ನೂ ನನಗೆ ಕಳುಹಿಸಿಕೊಡಿ. ನಾನು ದೇವಮನುಷ್ಯನನ್ನು ಕರೆತರಲು ಬೇಗ ಹೋಗಿ ಹಿಂದಿರುಗಿ ಬರುತ್ತೇನೆ” ಎಂದು ಹೇಳಿದಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

22 ತನ್ನ ಗಂಡನನ್ನು ಕರೆದು, “ನಾನು ದೇವರ ಮನುಷ್ಯನ ಬಳಿಗೆ ಬೇಗನೆ ಹೋಗಿ ತಿರುಗಿ ಬರುವ ಹಾಗೆ, ನೀನು ದಯಮಾಡಿ ಸೇವಕನನ್ನೂ ಒಂದು ಕತ್ತೆಯನ್ನೂ ಕಳುಹಿಸು,” ಎಂದಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಅರಸುಗಳು 4:22
6 ತಿಳಿವುಗಳ ಹೋಲಿಕೆ  

ಯೊಪ್ಪಕ್ಕೆ ಲುದ್ದವು ಹತ್ತಿರವಾಗಿರಲಾಗಿ ಪೇತ್ರನು ಅಲ್ಲಿ ಇದ್ದಾನೆಂದು ಶಿಷ್ಯರು ಕೇಳಿ ಇಬ್ಬರು ಮನುಷ್ಯರನ್ನು ಅವನ ಬಳಿಗೆ ಕಳುಹಿಸಿ - ತಡಮಾಡದೆ ನಮ್ಮ ತನಕ ಬರಬೇಕೆಂದು ಬೇಡಿಕೊಂಡರು.


ಹೀಗಿರಲಾಗಿ ಅವನ ಅಕ್ಕಂದಿರು - ಸ್ವಾಮೀ, ನಿನ್ನ ಪ್ರಿಯ ವಿುತ್ರನು ಅಸ್ವಸ್ಥನಾಗಿದ್ದಾನೆ ಎಂಬದಾಗಿ ಯೇಸುವಿನ ಬಳಿಗೆ ಹೇಳಿಕಳುಹಿಸಿದರು.


ಅಗೋ, ಅಲ್ಲಿ ಶೂನೇಮ್ಯಳು! ನೀನು ಓಡಿಹೋಗಿ ಆಕೆಯನ್ನು ಎದುರುಗೊಂಡು - ನಿನಗೂ ನಿನ್ನ ಗಂಡನಿಗೂ ಮಗನಿಗೂ ಕ್ಷೇಮವೋ ಎಂದು ವಿಚಾರಿಸು ಎಂಬದಾಗಿ ಆಜ್ಞಾಪಿಸಿ ಕಳುಹಿಸಿದನು. ಆಕೆಯು ಆ ಸೇವಕನಿಗೆ - ಕ್ಷೇಮ ಎಂದು ಉತ್ತರಕೊಟ್ಟು


ಆಕೆಯು ಚಿಂತೆಯಿಲ್ಲ ಎಂದು ಹೇಳಿ ಕತ್ತೆಗೆ ತಡಿಹಾಕಿಸಿ ಕೂತುಕೊಂಡು ಸೇವಕನಿಗೆ - ಹೊಡೆ, ಓಡಿಸುತ್ತಾ ಬಾ; ನಾನು ಅಪ್ಪಣೆ ಮಾಡುವವರೆಗೂ ನಿಲ್ಲಿಸಬೇಡ ಎಂದು ಆಜ್ಞಾಪಿಸಿದಳು.


ಕೂಡಲೆ ಆಕೆಯು ಅವನನ್ನು ದೇವರ ಮನುಷ್ಯನ ಕೋಣೆಗೆ ತೆಗೆದುಕೊಂಡು ಹೋಗಿ ಅವನ ಮಂಚದ ಮೇಲೆ ಮಲಗಿಸಿ


ಅದಕ್ಕೆ ಅವನು - ಇಂದು ಅಮಾವಾಸ್ಯೆಯಲ್ಲ, ಸಬ್ಬತ್ತಲ್ಲ, ಈಹೊತ್ತು ಯಾಕೆ ಹೋಗುತ್ತೀ ಅಂದನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು