Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಅರಸುಗಳು 23:8 - ಕನ್ನಡ ಸತ್ಯವೇದವು J.V. (BSI)

8 ಅನಂತರ ಗೆಬದಿಂದ ಬೇರ್ಷೆಬದವರೆಗಿರುವ ಯೆಹೂದ ಪಟ್ಟಣಗಳ ಎಲ್ಲಾ ಯಾಜಕರನ್ನು ಕರಿಸಿಕೊಂಡು ಅವರು ಧೂಪಸುಡುತ್ತಿದ್ದ ಪೂಜಾಸ್ಥಳಗಳನ್ನು ಹೊಲೆಮಾಡಿದನು. ಪುರಾಧಿಕಾರಿಯಾದ ಯೆಹೋಶುವನ ಬಾಗಲಿನ ಎಡಗಡೆಯಲ್ಲಿದ್ದ ದ್ವಾರಗಳ ದೇವತೆಯ ಪೂಜಾಸ್ಥಳಗಳನ್ನು ಕೆಡವಿಬಿಟ್ಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

8 ಅನಂತರ ಗೆಬದಿಂದ ಬೇರ್ಷೆಬದವರೆಗಿರುವ ಯೆಹೂದ ಪಟ್ಟಣಗಳ ಎಲ್ಲಾ ಯಾಜಕರನ್ನು ಕರೆಯಿಸಿಕೊಂಡು ಅವರು ಧೂಪಹಾಕುತ್ತಿದ್ದ ಪೂಜಾಸ್ಥಳಗಳನ್ನು ನಾಶಮಾಡಿಸಿದನು. ಪುರಾಧಿಕಾರಿಯಾದ ಯೆಹೋಶುವನ ಬಾಗಿಲಿನ ಎಡಗಡೆಯಲ್ಲಿದ್ದ ದ್ವಾರಗಳ ದೇವತೆಯ ಪೂಜಾಸ್ಥಳಗಳನ್ನು ಕೆಡವಿ ಹಾಕಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

8 ಅನಂತರ ಗೆಬದಿಂದ ಬೇರ್ಷೆಬದವರೆಗಿರುವ ಜುದೇಯದ ಪಟ್ಟಣಗಳ ಯಾಜಕರನ್ನೆಲ್ಲಾ ಕರೆಯಿಸಿಕೊಂಡು ಅವರು ಧೂಪಸುಡುತ್ತಿದ್ದ ಪೂಜಾಸ್ಥಳಗಳನ್ನು ಹೊಲೆಮಾಡಿದನು. ಪುರಾಧಿಕಾರಿ ಯೆಹೋಶುವನ ಬಾಗಿಲಿನ ಎಡಗಡೆಯಲ್ಲಿದ್ದ ದ್ವಾರದೇವತೆಗಳ ಪೂಜಾ ಸ್ಥಳಗಳನ್ನು ಕೆಡವಿಬಿಟ್ಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

8-9 ಆ ಸಮಯದಲ್ಲಿ ಯಾಜಕರು ಯಜ್ಞಗಳನ್ನು ಜೆರುಸಲೇಮಿಗೆ ತರಲಿಲ್ಲ ಮತ್ತು ದೇವಾಲಯದಲ್ಲಿನ ಯಜ್ಞವೇದಿಕೆಯ ಮೇಲೆ ಅವುಗಳನ್ನು ಅರ್ಪಿಸಲಿಲ್ಲ. ಯಾಜಕರು ಯೆಹೂದದ ಎಲ್ಲಾ ನಗರಗಳಲ್ಲಿಯೂ ವಾಸಿಸುತ್ತಿದ್ದರು. ಅವರು ಆ ನಗರಗಳಲ್ಲಿನ ಉನ್ನತಸ್ಥಳಗಳಲ್ಲಿ ಧೂಪವನ್ನು ಸುಡುತ್ತಿದ್ದರು ಮತ್ತು ಯಜ್ಞಗಳನ್ನು ಅರ್ಪಿಸುತ್ತಿದ್ದರು. ಆ ಉನ್ನತಸ್ಥಳಗಳು ಗೆಬದಿಂದ ಬೇರ್ಷೆಬದವರೆಗೆ ಎಲ್ಲಾ ಕಡೆಗಳಲ್ಲಿದ್ದವು. ಯಾಜಕರು ತಮ್ಮ ಹುಳಿಯಿಲ್ಲದ ರೊಟ್ಟಿಗಳನ್ನು ಜೆರುಸಲೇಮಿನ ದೇವಾಲಯದಲ್ಲಿ ಯಾಜಕರಾಗಿದ್ದ ವಿಶೇಷ ಸ್ಥಳಗಳಲ್ಲಿ ತಿನ್ನದೆ ಆ ಊರುಗಳಲ್ಲಿ ಸಾಮಾನ್ಯ ಜನರೊಂದಿಗೆ ತಿನ್ನುತ್ತಿದ್ದರು. ಆದರೆ ರಾಜನಾದ ಯೋಷೀಯನು ಆ ಉನ್ನತಸ್ಥಳಗಳನ್ನು ನಾಶಗೊಳಿಸಿ ಆ ಯಾಜಕರನ್ನು ಜೆರುಸಲೇಮಿಗೆ ಕರೆತಂದನು. ನಗರಾಧಿಕಾರಿಯಾದ ಯೆಹೋಶುವನ ದ್ವಾರದ ಎಡಗಡೆಯಲ್ಲಿದ್ದ ಉನ್ನತಸ್ಥಳಗಳನ್ನು ಯೋಷೀಯನು ನಾಶಗೊಳಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

8 ಯೋಷೀಯನು ಯೆಹೂದದ ಪಟ್ಟಣಗಳಿಂದ ಯಾಜಕರೆಲ್ಲರನ್ನು ಬರಮಾಡಿ, ಗಿಬೆಯ ಪಟ್ಟಣದಿಂದ ಬೇರ್ಷೆಬದವರೆಗೂ, ಯಾಜಕರು ಧೂಪ ಸುಡುತ್ತಿದ್ದ ಉನ್ನತ ಪೂಜಾಸ್ಥಳಗಳನ್ನೂ ಅಶುದ್ಧ ಮಾಡಿದನು. ಅನಂತರ ಪುರಾಧಿಕಾರಿಯಾದ ಯೆಹೋಶುವನ ಬಾಗಿಲಿನ ದ್ವಾರದಲ್ಲಿದ್ದ ಬಾಗಿಲುಗಳ ಉನ್ನತ ಸ್ಥಳಗಳನ್ನು ಕೆಡವಿ ಹಾಕಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಅರಸುಗಳು 23:8
13 ತಿಳಿವುಗಳ ಹೋಲಿಕೆ  

ಅನಂತರ ಅರಸನಾದ ಆಸನು ಯೆಹೂದ್ಯರಲ್ಲಿ ಒಬ್ಬನನ್ನೂ ಬಿಡದೆ ಎಲ್ಲರನ್ನೂ ಕರಿಸಿ ಬಾಷನು ರಾಮಕೋಟೆಗಾಗಿ ತರಿಸಿದ್ದ ಕಲ್ಲುಮರಗಳನ್ನು ಇವರ ಮುಖಾಂತರವಾಗಿ ತೆಗೆದುಕೊಂಡು ಹೋಗಿ ಬೆನ್ಯಾಮೀನ್ಯರ ಗೆಬ, ವಿುಚ್ಬೆ ಎಂಬ ಪಟ್ಟಣಗಳನ್ನು ಭದ್ರಪಡಿಸಿದನು.


ಬೆನ್ಯಾಮೀನ್ ಕುಲದಿಂದ ಗಿಬ್ಯೋನ್, ಗೆಬ,


ಆಗ ದೇಶವು ಗೆಬದಿಂದ ಯೆರೂಸಲೇವಿುಗೆ ತೆಂಕಲಲ್ಲಿರುವ ರಿಮ್ಮೋನಿನವರೆಗೆ ತಗ್ಗಾಗಿ ಮಾರ್ಪಡುವದು; ಯೆರೂಸಲೇಮೋ ಬೆನ್ಯಾಮೀನಿನ ಬಾಗಿಲಿಂದ ಪೂರ್ವಕಾಲದ ಬಾಗಿಲಿನ ಸ್ಥಳದವರೆಗೆ, ಮೂಲೆಯ ಬಾಗಿಲಿನ ತನಕ, ಹನನೇಲನ ಬುರುಜಿನಿಂದ ಅರಸನ ದ್ರಾಕ್ಷೆಯ ಆಲೆಗಳ ಪರಿಯಂತ ಇದ್ದ ಕಡೆಯೇ ಎತ್ತರದಲ್ಲಿ ನಿಂತಿರುವದು.


ಕಣಿವೆಯನ್ನು ದಾಟಿದ್ದಾರೆ, ಗೆಬದಲ್ಲಿ ದಂಡಿಳಿಸುವ [ಅನ್ನುತ್ತಾರೆ], ರಾಮಾ ನಡುಗುತ್ತದೆ,


ಬೆನ್ಯಾಮೀನ್ ಕುಲದಿಂದ ಗೆಬ, ಆಲೆಮೆತ್, ಅನಾತೋತ್ ಎಂಬ ಗೋಮಾಳಸಹಿತವಾದ ಪಟ್ಟಣಗಳನ್ನೂ ಕೊಟ್ಟರು. ಅವರ ಕುಟುಂಬಗಳಿಗೆ ದೊರಕಿದ ಪಟ್ಟಣಗಳು ಹದಿಮೂರು.


ಅವನು ಇದನ್ನು ಕೇಳಿದೊಡನೆ ತನ್ನ ಪ್ರಾಣರಕ್ಷಣೆಗಾಗಿ ಅಲ್ಲಿಂದ ಹೊರಟು ಯೆಹೂದದ ಬೇರ್ಷೆಬಕ್ಕೆ ಬಂದು ಅಲ್ಲಿ ತನ್ನ ಸೇವಕನನ್ನು ಬಿಟ್ಟನು.


ದಾನ್ ಪಟ್ಟಣದಿಂದ ಬೇರ್ಷೆಬದವರೆಗಿರುವ ಪ್ರಾಂತ್ಯಗಳಲ್ಲಿಯೂ ಗಿಲ್ಯಾದಿನಲ್ಲಿಯೂ ಇರುವ ಇಸ್ರಾಯೇಲ್ಯರೆಲ್ಲರೂ ಏಕಮನಸ್ಸಿನಿಂದ ಹೊರಟು ವಿುಚ್ಪೆಗೆ ಬಂದು ಯೆಹೋವನ ಸನ್ನಿಧಿಯಲ್ಲಿ ಸಭೆ ನೆರೆದರು.


ಇಸಾಕನು ಅಲ್ಲಿಂದ ಹೊರಟು ಗಟ್ಟಾ ಹತ್ತಿ ಬೇರ್ಷೆಬಕ್ಕೆ ಬಂದನು.


ಅವರಿಬ್ಬರು ಅಲ್ಲಿ ಪ್ರಮಾಣಮಾಡಿದ್ದರಿಂದ ಆ ಸ್ಥಳಕ್ಕೆ ಬೇರ್ಷೆಬ ಎಂದು ಹೆಸರಾಯಿತು.


ಮಾರಣೇ ದಿನ ಬೆಳಿಗ್ಗೆ ಅಬ್ರಹಾಮನು ಎದ್ದು ಹಾಗರಳಿಗೆ ಬುತ್ತಿಯನ್ನೂ ಒಂದು ತಿತ್ತಿ ತಣ್ಣೀರನ್ನೂ ಕೊಟ್ಟು ಅವಳ ಹೆಗಲಿನ ಮೇಲೆ ಇಟ್ಟು ಮಗುವನ್ನು ಒಪ್ಪಿಸಿ ಕಳುಹಿಸಿಬಿಟ್ಟನು. ಅವಳು ಹೊರಟು ಬೇರ್ಷೆಬದ ಕಾಡಿನಲ್ಲಿ ಅಲೆಯುತ್ತಿದ್ದಳು.


ಇಸ್ರಾಯೇಲ್ಯರು ನನ್ನನ್ನು ತೊರೆದಾಗ ನನ್ನಿಂದಗಲಿ ತಮ್ಮ ಬೊಂಬೆಗಳ ಕಡೆಗೆ ತಿರುಗಿಕೊಂಡು ನನಗೆ ದೂರವಾಗಿ ಹೋದ ಲೇವಿಯರು ತಮ್ಮ ದೋಷಫಲವನ್ನು ಅನುಭವಿಸುವರು.


ಬೇತೇಲನ್ನು ಆಶ್ರಯಿಸಬೇಡಿರಿ, ಗಿಲ್ಗಾಲನ್ನು ಸೇರಬಾರದು, ಬೇರ್ಷೆಬಕ್ಕೆ ಯಾತ್ರೆಹೋಗದಿರಿ; ಗಿಲ್ಗಾಲು ಗಡೀಪಾರಾಗುವದು, ಬೇತೇಲು ಬೈಲಾಗುವದು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು