Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಅರಸುಗಳು 23:7 - ಕನ್ನಡ ಸತ್ಯವೇದವು J.V. (BSI)

7 ಯೆಹೋವನ ಆಲಯದ ಪ್ರಾಕಾರದೊಳಗಿದ್ದ ದೇವದಾಸ ದೇವದಾಸಿಯರ ಮನೆಗಳನ್ನು ಕೆಡವಿಸಿದನು. ಆ ಮನೆಗಳಲ್ಲಿ ಸ್ತ್ರೀಯರು ಅಶೇರ ದೇವತೆಗೋಸ್ಕರ ಗುಡಾರಗಳನ್ನು ನೇಯುತ್ತಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

7 ಯೆಹೋವನ ಆಲಯದ ಪ್ರಾಕಾರದೊಳಗಿದ್ದ ದೇವದಾಸ, ವೇಶ್ಯವೃತ್ತಿಯವರ ಮನೆಗಳನ್ನು ಕೆಡವಿಹಾಕಿಸಿದನು. ಆ ಮನೆಗಳಲ್ಲಿ ಸ್ತ್ರೀಯರು ಅಶೇರ್ ದೇವತೆಗಳಿಗಾಗಿ ಗುಡಾರದ ಬಟ್ಟೆಗಳನ್ನು ನೇಯುತ್ತಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

7 ಸರ್ವೇಶ್ವರನ ಆಲಯದ ಪ್ರಾಕಾರದೊಳಗಿದ್ದ ವೇಶ್ಯಾವೃತ್ತಿಯವರ ಮನೆಗಳನ್ನು ಕೆಡವಿಸಿದನು. ಆ ಮನೆಗಳಲ್ಲಿ ಸ್ತ್ರೀಯರು ಅಶೇರ ದೇವತೆಗಾಗಿ ಬಟ್ಟೆಬರೆಗಳನ್ನು ನೇಯುತ್ತಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

7 ನಂತರ ರಾಜನಾದ ಯೋಷೀಯನು ದೇವಾಲಯದಲ್ಲಿದ್ದ ದೇವದಾಸ ದೇವದಾಸಿಯರ ಮನೆಗಳನ್ನು ಕೆಡವಿಹಾಕಿಸಿದನು. ಆ ಮನೆಗಳಲ್ಲಿ ಸುಳ್ಳುದೇವತೆಯಾದ ಅಶೇರಳಿಗೋಸ್ಕರ ಚಿಕ್ಕ ಗುಡಾರಗಳನ್ನು ನೇಯುತ್ತಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

7 ಯೆಹೋವ ದೇವರ ಆಲಯದ ಬಳಿಯಲ್ಲಿದ್ದ ಅಶೇರದೇವತೆಗಾಗಿ ನೇಯ್ಗೆ ಕೆಲಸ ಮಾಡುತ್ತಿದ್ದ ಸ್ತ್ರೀಯರ ಹಾಗೂ ವೇಶ್ಯಾವೃತ್ತಿಯವರ ಮನೆಗಳನ್ನು ಕೆಡವಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಅರಸುಗಳು 23:7
14 ತಿಳಿವುಗಳ ಹೋಲಿಕೆ  

ನೀನು ಪೂಜಾಸ್ಥಾನಗಳನ್ನು ಕಟ್ಟಿಕೊಂಡು ನಿನ್ನ ಚಿತ್ರವಿಚಿತ್ರ ವಸ್ತ್ರಗಳಿಂದ ಅವುಗಳನ್ನು ಅಲಂಕರಿಸಿ ಅಲ್ಲಿ ವ್ಯಭಿಚಾರನಡಿಸಿದಿ. (ಇದು ನಡೆಯತಕ್ಕದ್ದಲ್ಲ. ಆಗಬಾರದಾಗಿತ್ತು.)


ದೇವದಾಸ ದೇವದಾಸಿಯರನ್ನು ದೇಶದಿಂದ ಹೊರಡಿಸಿ ತನ್ನ ಹಿರಿಯರು ಮಾಡಿಸಿಟ್ಟಿದ್ದ ವಿಗ್ರಹಗಳನ್ನೆಲ್ಲಾ ತೆಗೆದು ಹಾಕಿದನು.


ಇದಲ್ಲದೆ ಅವರ ದೇಶದಲ್ಲಿ ವೇಶ್ಯಾವೃತ್ತಿಯನ್ನನುಸರಿಸುತ್ತಿರುವ ದೇವದಾಸ ದೇವದಾಸಿಯರು ಇದ್ದರು. ಯೆಹೋವನು ಅವರ ಎದುರಿನಿಂದ ಹೊರಡಿಸಿಬಿಟ್ಟ ಅನ್ಯಜನಾಂಗಗಳಲ್ಲಿದ್ದ ದುರಾಚಾರಗಳನ್ನೆಲ್ಲಾ ಅವರೂ ನಡಿಸುವವರಾದರು.


ಅವಳು ನನ್ನನ್ನು ಮರೆತು ಮೂಗುತಿ ಮೊದಲಾದ ಒಡವೆಗಳಿಂದ ತನ್ನನ್ನು ಸಿಂಗರಿಸಿಕೊಂಡು ವಿುಂಡರ ಹಿಂದೆಹೋಗಿ ಬಾಳ್‍ದೇವತೆಗಳ ಉತ್ಸವದಿನಗಳಲ್ಲಿ ಧೂಪಹಾಕಿದ್ದಕ್ಕೆ ನಾನು ಅವಳನ್ನು ದಂಡಿಸುವೆನು; ಇದು ಯೆಹೋವನ ನುಡಿ.


ನನ್ನನ್ನು ಯೆಹೋವನ ಆಲಯದ ಬಡಗಣ ಬಾಗಿಲ ಮುಂದಕ್ಕೆ ಕರತಂದನು; ಇಗೋ, ಅಲ್ಲಿ ಸ್ತ್ರೀಯರು ತಮ್ಮೂಜ್ ದೇವತೆಗೋಸ್ಕರ ಅಳುತ್ತಾ ಕೂತಿದ್ದರು.


ಯೋಷೀಯನು ಇಸ್ರಾಯೇಲ್ಯರಿಗೆ ಸೇರಿದ ಎಲ್ಲಾ ಪ್ರಾಂತಗಳೊಳಗಿನ ಅಸಹ್ಯಮೂರ್ತಿಗಳನ್ನೆಲ್ಲಾ ತೆಗೆದುಹಾಕಿಸಿ ಇಸ್ರಾಯೇಲ್ಯರಲ್ಲಿ ಉಳಿದಿರುವವರು ತಮ್ಮ ದೇವರಾದ ಯೆಹೋವನನ್ನೇ ಸೇವಿಸುವಂತೆ ಮಾಡಿದನು. ಅವನ ಜೀವಮಾನದಲ್ಲೆಲ್ಲಾ ಅವರು ತಮ್ಮ ಪಿತೃಗಳ ದೇವರಾದ ಯೆಹೋವನನ್ನು ಬಿಡದೆ ಹಿಂಬಾಲಿಸಿದರು.


ಇವನು ತನ್ನ ತಂದೆಯಾದ ಆಸನ ಕಾಲದಲ್ಲಿ ತಪ್ಪಿಸಿಕೊಂಡ ದೇವದಾಸ ದೇವದಾಸಿಯರನ್ನು ದೇಶದಿಂದ ತೆಗೆದುಹಾಕಿದನು.


ಇಸ್ರಾಯೇಲ್ಯರಲ್ಲಿ ಯಾವ ಸ್ತ್ರೀಯೂ ದೇವದಾಸಿಯಾಗಬಾರದು; ಯಾವ ಪುರುಷನೂ ಗುದಮೈಥುನಿಯಾಗಬಾರದು.


ಇಸ್ರಾಯೇಲ್ಯರು ಶಿಟ್ಟೀವಿುನಲ್ಲಿ ವಾಸವಾಗಿದ್ದಾಗ ಅವರು ಮೋವಾಬ್ ಸ್ತ್ರೀಯರೊಡನೆ ಸಹವಾಸ ಮಾಡುವವರಾದರು.


ಪರ್ವತಾಗ್ರಗಳಲ್ಲಿ ಯಜ್ಞಮಾಡುತ್ತಾರೆ, ಗುಡ್ಡಗಳ ಮೇಲೆ ಧೂಪಹಾಕುತ್ತಾರೆ; ಅಲ್ಲೋನ್, ಲಿಬ್ನೆ, ಏಲಾ ಮರಗಳ ನೆರಳು ದಟ್ಟವಾಗಿರುವದರಿಂದ ಅವುಗಳ ಕೆಳಗೆ ಇವುಗಳನ್ನು ನಡಿಸುತ್ತಾರೆ; ಹೀಗಿರಲು [ನನ್ನ ಜನರೇ,] ನಿಮ್ಮ ಕುಮಾರಿಯರು ಸೂಳೆಯರಾಗಿ ನಡೆಯುವದೂ, ನಿಮ್ಮ ವಧುಗಳು ವ್ಯಭಿಚಾರಮಾಡುವದೂ ಏನಾಶ್ಚರ್ಯ?


ಸೂಳೆಯರಾಗಿ ನಡೆಯುವ ನಿಮ್ಮ ಕುಮಾರಿಯರನ್ನೂ ವ್ಯಭಿಚಾರಮಾಡುವ ನಿಮ್ಮ ವಧುಗಳನ್ನೂ ನಾನು ದಂಡಿಸುವದಿಲ್ಲ; ನೀವೇ ಸೂಳೆಯರನ್ನು ಕರಕೊಂಡು ಓರೆಯಾಗಿ ಹೋಗುತ್ತೀರಿ; ದೇವದಾಸಿಯರೊಂದಿಗೆ ಯಜ್ಞಮಾಡುತ್ತೀರಿ; ಆಹಾ, ವಿವೇಕವಿಲ್ಲದ ಜನರು ಕೆಡವಲ್ಪಡುವರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು