2 ಅರಸುಗಳು 23:4 - ಕನ್ನಡ ಸತ್ಯವೇದವು J.V. (BSI)4 ತರುವಾಯ ಅವನು ಮಹಾಯಾಜಕನಾದ ಹಿಲ್ಕೀಯನು, ಎರಡನೆಯ ತರಗತಿಯ ಯಾಜಕರು, ದ್ವಾರಪಾಲಕರು ಇವರ ಮುಖಾಂತರವಾಗಿ ಬಾಳ್, ಅಶೇರ ಎಂಬ ದೇವತೆಗಳಿಗೋಸ್ಕರವೂ ಆಕಾಶ ಸೈನ್ಯಕ್ಕೋಸ್ಕರವೂ ಉಪಯೋಗಿಸುತ್ತಿದ್ದ ಎಲ್ಲಾ ಸಾಮಾನುಗಳನ್ನು ಯೆಹೋವನ ಆಲಯದಿಂದ ತರಿಸಿ ಯೆರೂಸಲೇವಿುನ ಹೊರಗಿರುವ ಕಿದ್ರೋನ್ ಬೈಲಿನಲ್ಲಿ ಅವುಗಳನ್ನು ಸುಡಿಸಿ ಬೂದಿಯನ್ನು ಬೇತೇಲಿಗೆ ಕಳುಹಿಸಿದನು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20194 ತರುವಾಯ ಅರಸನು ಮಹಾಯಾಜಕನಾದ ಹಿಲ್ಕೀಯನಿಗೆ, ಅವನ ಕೈಕೆಳಗಿರುವ ಯಾಜಕರ ಮತ್ತು ದ್ವಾರಪಾಲಕರ ಮುಖಾಂತರವಾಗಿ ಬಾಳ್, ಅಶೇರ್ ಎಂಬ ದೇವತೆಗಳಿಗಾಗಿಯೂ, ಆಕಾಶಸೈನ್ಯಗಳಿಗಾಗಿಯೂ, ಉಪಯೋಗಿಸುತ್ತಿದ್ದ ಎಲ್ಲಾ ಸಾಮಾನುಗಳನ್ನು ಯೆಹೋವನ ಆಲಯದಿಂದ ತರಿಸಿ ಯೆರೂಸಲೇಮಿನ ಹೊರಗಿರುವ ಕಿದ್ರೋನ್ ಬಯಲಿನಲ್ಲಿ ಅವುಗಳನ್ನು ಸುಟ್ಟು ಬೂದಿಯನ್ನು ಬೇತೇಲಿಗೆ ಕಳುಹಿಸಿದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)4 ತರುವಾಯ ಅವನು ಪ್ರಧಾನ ಯಾಜಕ ಹಿಲ್ಕೀಯನ, ಮುಖ್ಯ ಯಾಜಕರ ಹಾಗು ದ್ವಾರಪಾಲಕರ ಮುಖಾಂತರ ಬಾಳ್, ಅಶೇರ ಎಂಬ ದೇವತೆಗಳಿಗಾಗಿ ಹಾಗು ಆಕಾಶಸೈನ್ಯಗಳಿಗಾಗಿ ಉಪಯೋಗಿಸುತ್ತಿದ್ದ ಎಲ್ಲಾ ವಸ್ತುಗಳನ್ನು ಸರ್ವೇಶ್ವರನ ಆಲಯದಿಂದ ತರಿಸಿ, ಜೆರುಸಲೇಮಿನ ಹೊರಗಿರುವ ಕಿದ್ರೋನ್ ಬೈಲಿನಲ್ಲಿ ಅವುಗಳನ್ನು ಸುಡಿಸಿ, ಆ ಬೂದಿಯನ್ನು ಬೇತೇಲಿಗೆ ಕಳುಹಿಸಿದನು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್4 ನಂತರ ರಾಜನು ಪ್ರಧಾನಯಾಜಕನಾದ ಹಿಲ್ಕೀಯನಿಗೆ, ಇತರ ಯಾಜಕರಿಗೆ, ದ್ವಾರಪಾಲಕರಿಗೆ, ಬಾಳ್‌ದೇವರಿಗೂ ಅಶೇರ ದೇವತೆಗೂ ಮತ್ತು ಆಕಾಶದ ನಕ್ಷತ್ರಗಳಿಗೂ ಉಪಯೋಗಿಸುತ್ತಿದ್ದ ಎಲ್ಲಾ ಸಲಕರಣೆಗಳನ್ನು ದೇವಾಲಯದಿಂದ ಹೊರತರುವಂತೆ ಆಜ್ಞಾಪಿಸಿದನು. ಯೋಷೀಯನು ಜೆರುಸಲೇಮಿನ ಹೊರಗೆ ಕಿದ್ರೋನ್ ಹೊಲಗಳಲ್ಲಿ ಅವುಗಳನ್ನು ಸುಟ್ಟುಹಾಕಿದನು. ಅವರು ಬೂದಿಯನ್ನು ಬೇತೇಲಿಗೆ ತೆಗೆದುಕೊಂಡು ಹೋದರು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ4 ಅರಸನಾದ ಯೋಷೀಯನು ಬಾಳನಿಗೋಸ್ಕರವೂ, ಅಶೇರನಿಗೋಸ್ಕರವೂ, ಆಕಾಶದ ಸೈನ್ಯಕ್ಕೋಸ್ಕರವೂ ಉಪಯೋಗಿಸುತ್ತಿದ್ದ ಸಮಸ್ತ ಸಲಕರಣೆಗಳನ್ನು ಯೆಹೋವ ದೇವರ ಆಲಯದಿಂದ ಹೊರಗೆ ತೆಗೆದುಕೊಂಡು ಬರಬೇಕೆಂದು ಮಹಾಯಾಜಕನಾದ ಹಿಲ್ಕೀಯನಿಗೂ, ಮುಖ್ಯಯಾಜಕರಿಗೂ, ದ್ವಾರಪಾಲಕರಿಗೂ ಆಜ್ಞಾಪಿಸಿದನು. ಅರಸನು ಅವುಗಳನ್ನು ಯೆರೂಸಲೇಮಿನ ಹೊರಗೆ ಕಿದ್ರೋನ್ ಕಣಿವೆಯ ಬಯಲಿನಲ್ಲಿ ಸುಡಿಸಿ, ಅವುಗಳ ಬೂದಿಯನ್ನು ಬೇತೇಲಿಗೆ ತರುವಂತೆ ಮಾಡಿದನು. ಅಧ್ಯಾಯವನ್ನು ನೋಡಿ |
ತಾನು ಮಾಡಿಸಿದ ವಿಗ್ರಹಸ್ತಂಭವನ್ನು ದೇವಾಲಯದಲ್ಲಿಡಿಸಿದನು; ಯೆಹೋವನು ಆ ಆಲಯದ ವಿಷಯದಲ್ಲಿ ದಾವೀದನಿಗೂ ಅವನ ಮಗನಾದ ಸೊಲೊಮೋನನಿಗೂ - ಇಸ್ರಾಯೇಲ್ಯರು ಮೋಶೆಯ ಮುಖಾಂತರ ತಮಗೆ ಕೊಡಲ್ಪಟ್ಟ ನನ್ನ ಎಲ್ಲಾ ಧರ್ಮಶಾಸ್ತ್ರವಿಧಿ ನ್ಯಾಯಗಳನ್ನು ಅನುಸರಿಸಿ ನಡೆಯುವದಾದರೆ ನನ್ನ ನಾಮಮಹತ್ತು ಈ ದೇವಾಲಯದಲ್ಲಿಯೂ ಇಸ್ರಾಯೇಲ್ಯರ ಎಲ್ಲಾ ಊರುಗಳೊಳಗೆ ನನಗೆ ಇಷ್ಟವಾಗಿರುವ ಯೆರೂಸಲೇವಿುನಲ್ಲಿಯೂ ಸದಾಕಾಲವಿರುವದು;