Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಅರಸುಗಳು 21:5 - ಕನ್ನಡ ಸತ್ಯವೇದವು J.V. (BSI)

5 ಸರ್ವನಕ್ಷತ್ರಮಂಡಲಕ್ಕೋಸ್ಕರ ಯಜ್ಞವೇದಿಗಳನ್ನು ಕಟ್ಟಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

5 ಯೆಹೋವನ ಆಲಯದ ಎರಡು ಪ್ರಾಕಾರಗಳಲ್ಲಿಯೂ ಸರ್ವ ನಕ್ಷತ್ರಮಂಡಲಗಳಿಗಾಗಿ ಯಜ್ಞವೇದಿಗಳನ್ನು ಕಟ್ಟಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

5 ಸರ್ವ ನಕ್ಷತ್ರಮಂಡಲಕ್ಕಾಗಿ ಬಲಿಪೀಠಗಳನ್ನು ಕಟ್ಟಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

5 ಮನಸ್ಸೆಯು ಪರಲೋಕದ ನಕ್ಷತ್ರಗಳಿಗಾಗಿ ದೇವಾಲಯದ ಎರಡು ಪ್ರಾಕಾರಗಳಲ್ಲಿ ಯಜ್ಞವೇದಿಕೆಗಳನ್ನು ನಿರ್ಮಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

5 ಯೆಹೋವ ದೇವರ ಆಲಯದ ಎರಡು ಅಂಗಳಗಳಲ್ಲಿ ಆಕಾಶದ ಸಮಸ್ತ ನಕ್ಷತ್ರಮಂಡಲಕ್ಕಾಗಿ ಬಲಿಪೀಠಗಳನ್ನು ಕಟ್ಟಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಅರಸುಗಳು 21:5
17 ತಿಳಿವುಗಳ ಹೋಲಿಕೆ  

ಒಳಗಣ ಪ್ರಾಕಾರವೆನಿಸಿಕೊಳ್ಳುವ ಯೆಹೋವನ ಆಲಯದ ಪ್ರಾಕಾರಕ್ಕೂ ಅರಮನೆಯ ಪ್ರಾಕಾರಕ್ಕೂ ಹೇಗೋ ಹಾಗೆಯೇ ಎಲ್ಲಾ ಮಂದಿರಗಳ ಸುತ್ತಲಿರುವ ದೊಡ್ಡ ಪ್ರಾಕಾರಕ್ಕೆ ಮೂರು ಸಾಲು ಕಲ್ಲಿನ ಕಂಬಗಳೂ ಒಂದು ಸಾಲು ದೇವದಾರುವಿನ ಮರದ ಕಂಬಗಳೂ ಇದ್ದವು.


ಇದಲ್ಲದೆ ಯೆಹೂದ್ಯರ ಅರಸರು ದೇವಸ್ಥಾನದ ಮಾಳಿಗೆಯ ಮೇಲೆ ಆಹಾಜನ ಉಪ್ಪರಿಗೆಯ ಹತ್ತಿರ ಕಟ್ಟಿಸಿದ್ದ ಯಜ್ಞವೇದಿಗಳನ್ನೂ ಮನಸ್ಸೆಯು ಯೆಹೋವನ ಆಲಯದ ಎರಡು ಪ್ರಾಕಾರಗಳಲ್ಲಿ ಕಟ್ಟಿಸಿದ್ದ ಯಜ್ಞವೇದಿಗಳನ್ನೂ ಕೆಡವಿ ಪುಡಿಪುಡಿಮಾಡಿ ಅವುಗಳ ಧೂಳನ್ನು ಕಿದ್ರೋನ್‍ಹಳ್ಳದಲ್ಲಿ ಹಾಕಿಸಿದನು.


ತರುವಾಯ ಅವನು ಮಹಾಯಾಜಕನಾದ ಹಿಲ್ಕೀಯನು, ಎರಡನೆಯ ತರಗತಿಯ ಯಾಜಕರು, ದ್ವಾರಪಾಲಕರು ಇವರ ಮುಖಾಂತರವಾಗಿ ಬಾಳ್, ಅಶೇರ ಎಂಬ ದೇವತೆಗಳಿಗೋಸ್ಕರವೂ ಆಕಾಶ ಸೈನ್ಯಕ್ಕೋಸ್ಕರವೂ ಉಪಯೋಗಿಸುತ್ತಿದ್ದ ಎಲ್ಲಾ ಸಾಮಾನುಗಳನ್ನು ಯೆಹೋವನ ಆಲಯದಿಂದ ತರಿಸಿ ಯೆರೂಸಲೇವಿುನ ಹೊರಗಿರುವ ಕಿದ್ರೋನ್ ಬೈಲಿನಲ್ಲಿ ಅವುಗಳನ್ನು ಸುಡಿಸಿ ಬೂದಿಯನ್ನು ಬೇತೇಲಿಗೆ ಕಳುಹಿಸಿದನು.


ದೇವಾಲಯದ ಪ್ರಾಕಾರದಲ್ಲಿ ಮೂರು ಸಾಲು ಕಲ್ಲಿನ ಕಂಬಗಳನ್ನೂ ಒಂದು ಸಾಲು ದೇವದಾರುವಿನ ಕಂಬಗಳನ್ನೂ ಇರಿಸಿದನು.


ಅವರು ಹೊರಗಣ ಪ್ರಾಕಾರಕ್ಕೆ ಅಂದರೆ ಅಲ್ಲಿನ ಜನರ ಬಳಿಗೆ ಹೊರಡುವಾಗ ತಮ್ಮ ದೀಕ್ಷಾವಸ್ತ್ರಗಳನ್ನು ಅವರಿಗೆ ತಗಲಿಸಿ ಅವರನ್ನು ಪರಿಶುದ್ಧರಾಗಮಾಡದಂತೆ ಅವುಗಳನ್ನು ತೆಗೆದು ಪರಿಶುದ್ಧವಾದ ಕೋಣೆಗಳಲ್ಲಿ ಇಟ್ಟು ಬೇರೆ ವಸ್ತ್ರಗಳನ್ನು ಹಾಕಿಕೊಳ್ಳಲಿ.


ದೇವರಾತ್ಮವು ನನ್ನನ್ನು ಎತ್ತಿ ಒಳಗಣ ಪ್ರಾಕಾರಕ್ಕೆ ತರಲು ಆಹಾ, ಯೆಹೋವನ ತೇಜಸ್ಸು ದೇವಸ್ಥಾನವನ್ನು ತುಂಬಿಕೊಂಡಿತ್ತು.


ಒಳಗಣ ಪ್ರಾಕಾರಕ್ಕೆ ಸೇರಿದ ಇಪ್ಪತ್ತು ಮೊಳ ಅಗಲದ ದೀಕ್ಷಿತರ ಪ್ರಾಕಾರಕ್ಕೂ ಹೊರಗಣ ಪ್ರಾಕಾರದ ನೆಲಗಟ್ಟಿಗೂ ನಡುವೆಯಿದ್ದ ಆ ಪ್ರದೇಶವು ಐವತ್ತು ಮೊಳ ಅಗಲ; [ಅಲ್ಲಿನ ಎರಡು ಸಾಲುಗಳ] ಮೂರನೆಯ ಅಂತಸ್ತಿನ ಅಂಚಿನ ದಾರಿಗಳು ಒಂದಕ್ಕೊಂದು ಎದುರಾಗಿದ್ದವು.


ಆಮೇಲೆ ಅವನು ಪ್ರಾಕಾರವನ್ನು ಅಳೆಯಲು ಅದು ನೂರು ಮೊಳ ಉದ್ದವಾಗಿಯೂ ನೂರು ಮೊಳ ಅಗಲವಾಗಿಯೂ ಚಚ್ಚೌಕವಾಗಿತ್ತು; ಯಜ್ಞವೇದಿಯು ದೇವಸ್ಥಾನದ ಮುಂದೆ ಇತ್ತು.


ಅದರ ನಿಲವುಕಂಬಗಳು ಹೊರಗಣ ಪ್ರಾಕಾರಕ್ಕೆ ಅಭಿಮುಖವಾಗಿದ್ದವು; ಆ ಎದುರುಬದುರಿನ ನಿಲವುಕಂಬಗಳಲ್ಲಿ ಖರ್ಜೂರ ವೃಕ್ಷಗಳು ಚಿತ್ರಿತವಾಗಿದ್ದವು; ಅಲ್ಲಿ ಹತ್ತುವದಕ್ಕೆ ಎಂಟು ಮೆಟ್ಲುಗಳಿದ್ದವು.


ಅವನು ನನ್ನನ್ನು ಒಳಗಣ ಪ್ರಾಕಾರದ ಮೂಡಲಿಗೆ ಕರತಂದು ಅಲ್ಲಿನ ಹೆಬ್ಬಾಗಿಲನ್ನೂ ಅದರ ಗೋಡೇಕೋಣೆ, ನಿಲವುಕಂಬ, ಕೈಸಾಲೆ ಇವುಗಳನ್ನೂ ಅಳೆಯಲು ಆ ಅಳತೆಗಳೇ ಕಂಡುಬಂದವು;


ಆಮೇಲೆ ಅವನು ನನ್ನನ್ನು ತೆಂಕಣ ಬಾಗಿಲ ಮಾರ್ಗವಾಗಿ ಒಳಗಣ ಪ್ರಾಕಾರಕ್ಕೆ ಕರತಂದನು; ಅವನು ಆ ತೆಂಕಣ ಹೆಬ್ಬಾಗಿಲನ್ನೂ ಅಲ್ಲಿನ ಗೊಡೇಕೋಣೆ, ನಿಲವುಕಂಬ, ಕೈಸಾಲೆ ಇವುಗಳನ್ನೂ ಅಳೆಯಲು ಅಷ್ಟೇ ಅಳತೆಗಳಿದ್ದವು;


ಅನ್ಯದೇವತಾಪ್ರತಿಮೆಗಳನ್ನೂ ತಾನು ಮಾಡಿಸಿದ್ದ ಸ್ತಂಭವನ್ನೂ ಯೆಹೋವನ ಆಲಯದಿಂದ ತೆಗಿಸಿ ಯೆಹೋವಮಂದಿರವಿರುವ ಗುಡ್ಡದಲ್ಲಿಯೂ ಯೆರೂಸಲೇವಿುನಲ್ಲಿಯೂ ಕಟ್ಟಿಸಿದ್ದ ಎಲ್ಲಾ ಯಜ್ಞವೇದಿಗಳನ್ನು ಕೆಡವಿ ಪಟ್ಟಣದ ಹೊರಗೆ ಹಾಕಿಸಿದನು.


ಆಲಯದ ಎರಡು ಪ್ರಾಕಾರಗಳಲ್ಲಿಯೂ ಸರ್ವನಕ್ಷತ್ರಮಂಡಲಕ್ಕೋಸ್ಕರ ಯಜ್ಞವೇದಿಗಳನ್ನು ಕಟ್ಟಿಸಿದನು.


ಯೆಹೋವನ ಆಲಯದಲ್ಲಿದ್ದ ಅಶೇರವಿಗ್ರಹಸ್ತಂಭವನ್ನು ತರಿಸಿ ಯೆರೂಸಲೇವಿುನ ಹೊರಗಿರುವ ಕಿದ್ರೋನ್‍ಹಳ್ಳಕ್ಕೆ ತೆಗೆದುಕೊಂಡು ಹೋಗಿ ಅಲ್ಲಿ ಅದನ್ನು ಸುಡಿಸಿ ಪುಡಿಪುಡಿ ಮಾಡಿಸಿ ಆ ಪುಡಿಯನ್ನು ಕನಿಷ್ಠಜನರ ಶ್ಮಶಾನದಲ್ಲಿ ಹಾಕಿಸಿದನು.


ಇದಲ್ಲದೆ ಯೆಹೂದ ಪ್ರಾಂತದ ಪಟ್ಟಣಗಳಲ್ಲಿಯೂ ಯೆರೂಸಲೇವಿುನ ಸುತ್ತಣ ಪ್ರದೇಶದಲ್ಲಿಯೂ ಇದ್ದ ಪೂಜಾಸ್ಥಳಗಳ ವಿಗ್ರಹಗಳಿಗೂ ಬಾಳನಿಗೂ ಸೂರ್ಯಚಂದ್ರನಕ್ಷತ್ರಗಳೆನಿಸಿಕೊಳ್ಳುವ ಆಕಾಶಸೈನ್ಯಕ್ಕೂ ಧೂಪಸುಡುವದಕ್ಕಾಗಿ ಯೆಹೂದರಾಜರಿಂದ ನೇವಿುಸಲ್ಪಟ್ಟ ಎಲ್ಲಾ ಪೂಜಾರಿಗಳನ್ನು ತೆಗೆದುಹಾಕಿದನು.


ಇದಲ್ಲದೆ ಯಾಜಕರ ಪ್ರಾಕಾರವನ್ನೂ ಮಹಾಪ್ರಾಕಾರವನ್ನೂ ಮಹಾಪ್ರಾಕಾರಕ್ಕೆ ಬಾಗಲುಗಳನ್ನೂ ಮಾಡಿಸಿದನು; ಅವುಗಳ ಕದಗಳನ್ನು ತಾಮ್ರದ ತಗಡಿನಿಂದ ಹೊದಿಸಿದನು.


ಯೆಹೋವನ ಆಲಯದ ಒಳಗಣ ಪ್ರಾಕಾರದೊಳಕ್ಕೆ ನನ್ನನ್ನು ಕರತಂದನು; ಆಹಾ, ಯೆಹೋವನ ಗುಡಿಯ ಬಾಗಿಲ ಮುಂದೆ ಮಂಟಪಕ್ಕೂ ಯಜ್ಞವೇದಿಗೂ ನಡುವೆ ಸುಮಾರು ಇಪ್ಪತ್ತೈದು ಜನರು ಯೆಹೋವನ ಗುಡಿಗೆ ಬೆನ್ನುಮಾಡಿ ಮೂಡಲಮುಖವಾಗಿ ಉದಯಕಾಲದ ಸೂರ್ಯನನ್ನು ಪೂಜಿಸುತ್ತಿದ್ದರು .


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು