Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಅರಸುಗಳು 18:24 - ಕನ್ನಡ ಸತ್ಯವೇದವು J.V. (BSI)

24 ಇದೂ ನಿನಗೆ ಅಸಾಧ್ಯವಾಗುವದಾದರೆ ನನ್ನ ಒಡೆಯನ ಸೇನಾಪತಿಗಳಲ್ಲಿ ಅತ್ಯಲ್ಪನನ್ನಾದರೂ ಸೋಲಿಸುವದು ಹೇಗೆ? ರಥಾಶ್ವಬಲಗಳ ವಿಷಯವಾಗಿ ಐಗುಪ್ತ್ಯರನ್ನು ನಂಬಿರುತ್ತೀಯೆಂದು ಕಾಣುತ್ತದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

24 ಹೀಗಿದ್ದಾಗ ನೀನು ನನ್ನ ಒಡೆಯನ ಸೇನಾಧಿಪತಿಗಳಲ್ಲಿ ಅತಿ ಸಣ್ಣವನನ್ನಾದರೂ ಸೋಲಿಸುವುದು ಸಾಧ್ಯವೇ? ರಥಾಶ್ವಬಲಗಳ ವಿಷಯವಾಗಿ ನೀನು ಐಗುಪ್ತರ ಮೇಲೆ ಭರವಸೆಯಿಟ್ಟಿರುವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

24 ಇದು ಕೂಡ ನಿನಗೆ ಅಸಾಧ್ಯವಾದರೆ ನನ್ನ ಒಡೆಯನ ಸೇನಾಪತಿಗಳಲ್ಲಿ ಅತ್ಯಲ್ಪನನ್ನಾದರೂ ಸೋಲಿಸುವುದು ಹೇಗೆ ತಾನೆ ಸಾಧ್ಯ? ರಥಾಶ್ವಬಲಗಳಿಗಾಗಿ ಈಜಿಪ್ಟಿನವರನ್ನು ನೀನು ನಂಬಿಕೊಂಡಿರುವಂತೆ ಕಾಣುತ್ತದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

24 ನನ್ನ ಒಡೆಯನ ಅಧಿಕಾರಿಗಳಲ್ಲಿ ಕನಿಷ್ಠನಾದ ಒಬ್ಬ ಅಧಿಕಾರಿಯನ್ನು ನೀನು ಸೋಲಿಸಲಾಗುವುದಿಲ್ಲ! ನಿನಗೆ ರಥಗಳನ್ನು ಮತ್ತು ಕುದುರೆಯ ಸವಾರರನ್ನು ಕೊಡಲು ನೀನು ಈಜಿಪ್ಟನ್ನು ಅವಲಂಬಿಸಿರುವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

24 ಇದಾಗದಿದ್ದರೆ ನನ್ನ ಯಜಮಾನನ ಸೇವಕರಲ್ಲಿ ಚಿಕ್ಕವನಾದ ಒಬ್ಬ ಸೈನ್ಯಾಧಿಪತಿಯನ್ನು ಹೇಗೆ ಎದುರಿಸುತ್ತೀ? ನೀನು ರಥಗಳಿಗೋಸ್ಕರವೂ, ರಾಹುತರಿಗೋಸ್ಕರವೂ ಈಜಿಪ್ಟಿನ ಮೇಲೆ ಭರವಸೆ ಇಟ್ಟಿದ್ದೀಯೋ?

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಅರಸುಗಳು 18:24
21 ತಿಳಿವುಗಳ ಹೋಲಿಕೆ  

ಅದು ಅಂದುಕೊಳ್ಳುವದೇನಂದರೆ - ನನ್ನ ಅಧಿಪತಿಗಳೆಲ್ಲಾ ರಾಜರಲ್ಲವೆ.


ಈಗ ನೆಬೂಕದ್ನೆಚ್ಚರನಾದ ನಾನು ಪರಲೋಕರಾಜನನ್ನು ಹೊಗಳಿ ಕೊಂಡಾಡಿ ಕೀರ್ತಿಸುತ್ತೇನೆ; ಆತನ ಕಾರ್ಯಗಳೆಲ್ಲಾ ಸತ್ಯ, ಆತನ ಮಾರ್ಗಗಳೆಲ್ಲಾ ನ್ಯಾಯ; ಸೊಕ್ಕಿನಿಂದ ನಡೆಯುವವರನ್ನು ತಗ್ಗಿಸಬಲ್ಲನು.


ರಾಜಾ, ನೀನು ಬೆಳೆದು ಬಲಗೊಂಡಿದ್ದೀ, ನಿನ್ನ ಮಹಿಮೆಯು ವೃದ್ಧಿಯಾಗಿ ಆಕಾಶಕ್ಕೆ ಮುಟ್ಟಿದೆ, ನಿನ್ನ ಆಳಿಕೆಯು ಲೋಕದ ಕಟ್ಟಕಡೆಗೂ ವ್ಯಾಪಿಸಿದೆ.


ಫರೋಹನೂ ಅವನ ಮಹಾಸೈನ್ಯವೂ ದೊಡ್ಡ ಪರಿವಾರವೂ ಬಂದು ಬಹುಜನರನ್ನು ಕೊಲ್ಲುವದಕ್ಕೆ ದಿಬ್ಬಗಳನ್ನು ಹಾಕಿ ಬುರುಜುಗಳನ್ನು ಕಟ್ಟಿದರೂ ಯುದ್ಧದಲ್ಲಿ ಇವನಿಗೆ ಏನೂ ಸಹಾಯವಾಗದು.


ಆದರೆ ಅವನು ಬಾಬೆಲಿನ ಅರಸನ ಮೇಲೆ ತಿರುಗಿಬಿದ್ದು ಕುದುರೆಗಳನ್ನೂ ಬಹುಮಂದಿ ಸೈನಿಕರನ್ನೂ ನಮಗೆ ಒದಗಿಸೆಂದು ಐಗುಪ್ತಕ್ಕೆ ರಾಯಭಾರಿಗಳನ್ನು ಕಳುಹಿಸಿದನು. ಇವನು ಸಮೃದ್ಧನಾಗಿಯೇ ಇರುವನೋ? ಇಂಥಾ ಕೃತ್ಯಗಳನ್ನು ನಡಿಸಿದವನು ಪಾರಾಗುವನೋ? ಒಡಂಬಡಿಕೆಯನ್ನು ಮೀರಿದವನು ತಪ್ಪಿಸಿಕೊಂಡಾನೇ?


ಇಸ್ರಾಯೇಲ್ಯರ ದೇವರಾದ ಯೆಹೋವನು ಇಂತೆನ್ನುತ್ತಾನೆ - ನನ್ನನ್ನು ವಿಚಾರಿಸುವದಕ್ಕೆ ನಿಮ್ಮನ್ನು ನನ್ನ ಬಳಿಗೆ ಕಳುಹಿಸಿದ ಯೆಹೂದದ ಅರಸನಿಗೆ ಹೀಗೆ ಹೇಳಿರಿ - ಇಗೋ, ನಿಮ್ಮ ಸಹಾಯಕ್ಕೆ ಹೊರಟಿರುವ ಫರೋಹನ ಸೈನ್ಯವು ಸ್ವದೇಶವಾದ ಐಗುಪ್ತಕ್ಕೆ ಹಿಂದಿರುಗುವದು.


ಇದೂ ನಿನಗೆ ಅಸಾಧ್ಯವಾಗುವದಾದರೆ ನನ್ನ ಒಡೆಯನ ಸೇನಾಪತಿಗಳಲ್ಲಿ ಅತ್ಯಲ್ಪನನ್ನಾದರೂ ಸೋಲಿಸುವದು ಹೇಗೆ? ರಥಾಶ್ವಬಲಗಳಿಗಾಗಿ ಐಗುಪ್ತ್ಯರನ್ನು ನಂಬಿರುತ್ತೀಯೆಂದು ಕಾಣುತ್ತದೆ.


ಜಜ್ಜಿದ ದಂಟಿಗೆ ಸಮಾನವಾದ ಐಗುಪ್ತವೆಂಬ ಕೋಲಿನ ಮೇಲೆ ಭರವಸವಿಟ್ಟಿರುತ್ತೀಯಷ್ಟೆ. ಒಬ್ಬನು ಅಂಥ ಕೋಲನ್ನು ಊರಿಕೊಳ್ಳುವದಾದರೆ ಅದು ಅವನ ಕೈಯನ್ನು ತಿವಿದು ಒಳಕ್ಕೆ ಹೋಗುತ್ತದೆ! ಐಗುಪ್ತದ ಅರಸನಾದ ಫರೋಹನಲ್ಲಿ ಭರವಸವಿಟ್ಟವರಿಗೆ ಅದೇ ಗತಿಯಾಗುವದು.


ಐಗುಪ್ತ್ಯರು ಮನುಷ್ಯ ಮಾತ್ರದವರೇ, ದೇವರಲ್ಲ; ಅವರ ಅಶ್ವಗಳು ಮಾಂಸಮಯವೇ, ಆತ್ಮವಲ್ಲ; ಯೆಹೋವನು ಕೈಚಾಚುವಾಗ ಸಹಾಯ ಮಾಡಿದವನು ಮುಗ್ಗರಿಸುವನು, ಸಹಾಯಪಡೆದವನು ಬಿದ್ದು ಹೋಗುವನು, ಅಂತು ಎಲ್ಲರೂ ಒಟ್ಟಿಗೆ ಲಯವಾಗುವರು.


ಅಯ್ಯೋ, ಸಹಾಯಕ್ಕಾಗಿ ಐಗುಪ್ತವನ್ನು ಸೇರಿ ಅಶ್ವಬಲವನ್ನು ಆಶ್ರಯಿಸುವವರ ಗತಿಯನ್ನು ಏನು ಹೇಳಲಿ! ರಥಗಳು ಬಹಳವೆಂದು ಅವುಗಳಲ್ಲಿ ನಂಬಿಕೆಯಿಟ್ಟು ಸವಾರರು ಬಹು ಬಲಿಷ್ಠರೆಂದು ಅವರ ಮೇಲೆ ಭರವಸಪಡುತ್ತಾರೆ; ಆದರೆ ಇಸ್ರಾಯೇಲ್ಯರ ಸದಮಲಸ್ವಾವಿುಯ ಕಡೆಗೆ ದೃಷ್ಟಿಯಿಡುವದಿಲ್ಲ, ಯೆಹೋವನನ್ನು ಆಶ್ರಯಿಸುವದಿಲ್ಲ;


ಜಜ್ಜಿದ ದಂಟಿಗೆ ಸಮಾನವಾಗಿರುವ ಐಗುಪ್ತದಲ್ಲಿ ಭರವಸವಿಟ್ಟಿರುತ್ತೀಯಷ್ಟೆ. ಒಬ್ಬನು ಅಂಥ ದಂಟಿನ ಮೇಲೆ ಕೈಯೂರಿಕೊಳ್ಳುವದಾದರೆ ಅದು ಅವನ ಕೈಯನ್ನು ತಿವಿದು ಒಳಗೆ ಹೋಗುತ್ತದಲ್ಲವೇ! ಐಗುಪ್ತದ ಅರಸನಾದ ಫರೋಹನಲ್ಲಿ ಭರವಸವಿಟ್ಟವರಿಗೆ ಅದೇ ಗತಿಯಾಗುವದು.


ಅವನು ಕುದುರೆಯ ದಂಡನ್ನು ಕೂಡಿಸಿಕೊಳ್ಳಬಾರದು. ಕುದುರೆಗಳನ್ನು ಸಂಪಾದಿಸಿಕೊಳ್ಳುವದಕ್ಕಾಗಿ ತನ್ನ ಪ್ರಜೆಗಳನ್ನು ಐಗುಪ್ತದೇಶಕ್ಕೆ ಹೋಗಗೊಡಿಸಬಾರದು. ನೀವು ಇನ್ನು ಆ ದೇಶಕ್ಕೆ ಹೋಗಲೇಕೂಡದೆಂದು ಯೆಹೋವನು ಆಜ್ಞಾಪಿಸಿದ್ದಾನಲ್ಲಾ.


ನನ್ನ ಒಡೆಯನಾದ ಅಶ್ಶೂರದ ಅರಸನೊಂದಿಗೆ ಪಂಥಹಾಕುವದಕ್ಕೆ ನಿನಗೆ ಮನಸ್ಸುಂಟೋ? ಹಾಗಾದರೆ ಅವನು ನಿನಗೆ ಎರಡು ಸಾವಿರ ಕುದುರೆಗಳನ್ನು ಕೊಡುತ್ತಾನೆ; ನೀನು ಎಷ್ಟು ಮಂದಿ ಸವಾರರನ್ನು ಅವುಗಳ ಮೇಲೆ ಕುಳ್ಳಿರಿಸುವಿಯೋ?


ಈ ದೇಶವನ್ನು ಹಾಳುಮಾಡುವದಕ್ಕೆ ಯೆಹೋವನ ಚಿತ್ತವಿಲ್ಲದೆ ಬಂದೆನೆಂದು ನೆನಸುತ್ತೀಯೋ? ಇಲ್ಲಿಗೆ ಬಂದು ಇದನ್ನು ಹಾಳುಮಾಡಿಬಿಡು ಎಂದು ಯೆಹೋವನೇ ನನಗೆ ಆಜ್ಞಾಪಿಸಿದನು ಅನ್ನುತ್ತಾನೆ ಎಂದನು.


ಇದಲ್ಲದೆ ಅವನ ಸಂಗಡ ರಥಗಳೂ ಕುದುರೆಗಳೂ ಸಹ ಹೋದವು. ಹೊರಟುಹೋದವರು ಬಹು ಮಂದಿ.


ದೂತರು ಬಂದು ಈ ಮಾತುಗಳನ್ನು ಬೆನ್ಹದದನಿಗೆ ತಿಳಿಸಿದಾಗ ಅವನು ಅಹಾಬನಿಗೆ - ಸಮಾರ್ಯಪಟ್ಟಣದ ನಾಶನದಿಂದುಂಟಾಗುವ ಧೂಳು ಲೆಕ್ಕವಿಲ್ಲದ ನನ್ನ ಸೈನಿಕರ ಹಿಡಿತುಂಬವಷ್ಟಿದ್ದರೆ ದೇವತೆಗಳು ನನಗೆ ಬೇಕಾದದ್ದನ್ನು ಮಾಡಲಿ ಎಂದು ಹೇಳಿಕಳುಹಿಸಿದನು.


ಯೆಹೋವನು ಹೀಗೆ ನುಡಿಯುತ್ತಾನೆ :- ದ್ರೋಹಿಗಳಾದ [ನನ್ನ] ಮಕ್ಕಳ ಗತಿಯನ್ನು ಏನು ಹೇಳಲಿ! ಇವರು ನನ್ನನ್ನು ಕೇಳದೆ ಒಂದು ಆಲೋಚನೆಯನ್ನು ಸಾಗಿಸಿ ನನ್ನ ಆತ್ಮಪ್ರೇರಿತರಾಗದೆ ಉಪಾಯವನ್ನು ನೆಯ್ದು ಪಾಪದ ಮೇಲೆ ಪಾಪವನ್ನು ಸೇರಿಸಿಕೊಂಡಿದ್ದಾರೆ;


ಆಗ ಐಗುಪ್ತದ ಸಕಲ ನಿವಾಸಿಗಳು ಇಸ್ರಾಯೇಲ್ ವಂಶದವರಿಗೆ ತಾವು ಬರೀ ದಂಟಿನ ಊರುಗೋಲಾದೆವು ಎಂದು ನಾಚಿಕೆಪಟ್ಟು ನಾನೇ ಯೆಹೋವನು ಎಂಬದಾಗಿ ದೃಢಮಾಡಿಕೊಳ್ಳುವರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು