Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಅರಸುಗಳು 17:10 - ಕನ್ನಡ ಸತ್ಯವೇದವು J.V. (BSI)

10 ಎಲ್ಲಾ ದಿನ್ನೆಗಳ ಮೇಲೆ ಮತ್ತು ಎಲ್ಲಾ ಹಸುರು ಮರಗಳ ಕೆಳಗೆ ಕಲ್ಲುಕಂಬ, ಅಶೇರವಿಗ್ರಹ ಸ್ತಂಭ ಇವುಗಳನ್ನು ನಿಲ್ಲಿಸಿದರು;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

10 ಎಲ್ಲಾ ದಿನ್ನೆಗಳ ಮೇಲೆ ಮತ್ತು ಎಲ್ಲಾ ಹಸುರು ಮರಗಳ ಕೆಳಗೆ ಕಲ್ಲು ಕಂಬ, ಅಶೇರ ವಿಗ್ರಹಸ್ತಂಭ ಇವುಗಳನ್ನು ನಿಲ್ಲಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

10 ಎಲ್ಲಾ ದಿಣ್ಣೆಗಳ ಮೇಲೆ ಮತ್ತು ಎಲ್ಲಾ ಹಸಿರು ಮರಗಳ ಕೆಳಗೆ ಕಲ್ಲುಗಂಬ, ಅಶೇರುವಿಗ್ರಹಸ್ಥಂಭ ಇವುಗಳನ್ನು ಸ್ಥಾಪಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

10 ಇಸ್ರೇಲರು ಪ್ರತಿಯೊಂದು ಬೆಟ್ಟದ ಮೇಲೂ ಪ್ರತಿಯೊಂದು ಹಸಿರುಗಿಡಗಳ ಅಡಿಯಲ್ಲೂ ಸ್ಮಾರಕಕಲ್ಲುಗಳನ್ನು ಮತ್ತು ಅಶೇರ್ ವಿಗ್ರಹಕಲ್ಲುಗಳನ್ನು ನಿಲ್ಲಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

10 ಇದಲ್ಲದೆ ಅವರು ಎತ್ತರವಾದ ಎಲ್ಲಾ ಗುಡ್ಡಗಳಲ್ಲಿ ತೋಪುಗಳನ್ನು ಹಾಕಿ, ಹಸಿರಾದ ಎಲ್ಲಾ ಮರಗಳ ಕೆಳಗೂ ತಮಗೆ ಅಶೇರ ವಿಗ್ರಹಸ್ತಂಭಗಳನ್ನು ನಿಲ್ಲಿಸಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಅರಸುಗಳು 17:10
14 ತಿಳಿವುಗಳ ಹೋಲಿಕೆ  

ಪಿತೃಗಳಂತೆಯೇ ಅವರೂ ತಮಗೋಸ್ಕರ ಪೂಜಾಸ್ಥಳಗಳನ್ನು ಏರ್ಪಡಿಸಿಕೊಂಡರು. ಪ್ರತಿಯೊಂದು ದಿನ್ನೆಯ ಮೇಲೆಯೂ ಚೆನ್ನಾಗಿ ಬೆಳೆದಿರುವ ಪ್ರತಿಯೊಂದು ಮರದ ಕೆಳಗೆಯೂ ಕಲ್ಲಿನ ಕಂಬಗಳನ್ನೂ ಅಶೇರ ವಿಗ್ರಹಸ್ತಂಭಗಳನ್ನೂ ನಿಲ್ಲಿಸಿದರು.


ನಿನ್ನ ಅಶೇರವೆಂಬ ವಿಗ್ರಹಸ್ತಂಭಗಳನ್ನು ನಿನ್ನ ಮಧ್ಯದೊಳಗಿಂದ ಕಿತ್ತುಬಿಟ್ಟು ನಿನ್ನ ಪಟ್ಟಣಗಳನ್ನು ನಿರ್ಮೂಲಮಾಡುವೆನು.


ಪೂಜಾಸ್ಥಳಗಳಲ್ಲಿಯೂ ದಿನ್ನೆಗಳ ಮೇಲೆಯೂ ಎಲ್ಲಾ ಹಸುರು ಮರಗಳ ಕೆಳಗೆಯೂ ಯಜ್ಞಧೂಪಗಳನ್ನು ಸಮರ್ಪಿಸಿದನು.


[ಆದದರಿಂದ] ನೀವು ಅವರ ಬಲಿಪೀಠಗಳನ್ನು ಕೆಡವಿ ಅವರ ಕಲ್ಲುಕಂಬಗಳನ್ನು ಒಡೆದು ಅಶೇರವೆಂಬ ವಿಗ್ರಹಸ್ತಂಭಗಳನ್ನು ಕಡಿದುಬಿಡಬೇಕು.


ಏಲಾ ಮರಗಳ ತೋಪುಗಳಲ್ಲಿಯೂ ಸೊಂಪಾಗಿ ಬೆಳೆದಿರುವ ಪ್ರತಿಯೊಂದು ಮರದ ನೆರಳಿನಲ್ಲಿಯೂ ಮದವೇರಿಸಿಕೊಂಡು ಹೊಳೆ ಕೊರೆದ ಡೊಂಗರಗಳಲ್ಲಿಯೂ ಬೆಟ್ಟದ ಗವಿಗಳಲ್ಲಿಯೂ ಮಕ್ಕಳನ್ನು ಕೊಂದುಹಾಕುವ ನೀವು ದ್ರೋಹದ ಸಂತಾನವೂ ಸುಳ್ಳಿನ ಸಂತತಿಯೂ ಆಗಿದ್ದೀರಿ.


ನಿಮ್ಮ ದೇವರಾದ ಯೆಹೋವನಿಗೋಸ್ಕರ ನೀವು ಕಟ್ಟಿಸಿಕೊಳ್ಳುವ ಯಜ್ಞವೇದಿಯ ಬಳಿಯಲ್ಲಿ ಯಾವ ವಿಧವಾದ ಮರದ ಅಶೇರವೆಂಬ ವಿಗ್ರಹ ಸ್ತಂಭವನ್ನೂ ನೆಡಬಾರದು;


ನೀವು ವಿಗ್ರಹಗಳನ್ನು ಮಾಡಿಸಿಕೊಳ್ಳಬಾರದು; ಕೆತ್ತಿದ ಪ್ರತಿಮೆಯನ್ನಾಗಲಿ ಕಲ್ಲುಕಂಬವನ್ನಾಗಲಿ ನಿಲ್ಲಿಸಿಕೊಳ್ಳಬಾರದು; ಅಡ್ಡಬೀಳುವದಕ್ಕಾಗಿ ವಿಚಿತ್ರವಾಗಿ ಕೆತ್ತಿದ ಕಲ್ಲುಗಳನ್ನು ನಿಮ್ಮ ದೇಶದಲ್ಲಿ ಇಡಬಾರದು; ನಾನೇ ಯೆಹೋವನೆಂಬ ನಿಮ್ಮ ದೇವರು.


ನೀವು ಸೇರುವ ದೇಶದ ನಿವಾಸಿಗಳ ಸಂಗಡ ಯಾವ ಒಡಂಬಡಿಕೆಯನ್ನೂ ಮಾಡಿಕೊಳ್ಳಬಾರದು ನೋಡಿಕೊಳ್ಳಿರಿ; ಮಾಡಿಕೊಂಡರೆ ಅದು ನಿಮ್ಮ ಮಧ್ಯದಲ್ಲಿ ಉರುಲಿನಂತಿರುವದು.


ಯೆಹೋವನು ತಮ್ಮ ಎದುರಿನಿಂದ ಹೊರಡಿಸಿಬಿಟ್ಟ ಅನ್ಯಜನಾಂಗಗಳಂತೆ ಎಲ್ಲಾ ಪೂಜಾಸ್ಥಳಗಳಲ್ಲಿ ಧೂಪಸುಟ್ಟು ತಮ್ಮ ದುಷ್ಕೃತ್ಯಗಳಿಂದ ಆತನನ್ನು ರೇಗಿಸಿದರು;


ಕಲ್ಲಿನ ಕಂಬವನ್ನೂ ನಿಲ್ಲಿಸಬಾರದು; ಇದು ನಿಮ್ಮ ದೇವರಾದ ಯೆಹೋವನಿಗೆ ಹೇಯವಾದದ್ದು.


ಇವರ ದೇಶವು ವಿಗ್ರಹಗಳಿಂದಲೂ ತುಂಬಿದೆ, ತಮ್ಮ ಕೈಯಿಂದಲೇ, ತಮ್ಮ ಬೆರಳುಗಳಿಂದಲೇ ಮಾಡಿದ ಕೆಲಸಕ್ಕೆ ನಮಸ್ಕರಿಸುತ್ತಾರೆ.


ಮತ್ತೆ ಅರಸನಾದ ಯೋಷೀಯನ ಕಾಲದಲ್ಲಿ ಯೆಹೋವನು ನನಗೆ ಹೀಗೆ ಹೇಳಿದನು - ಭ್ರಷ್ಟಳಾದ ಇಸ್ರಾಯೇಲು ಮಾಡಿದ್ದನ್ನು ನೋಡಿದಿಯಾ? ಅವಳು ಎತ್ತರವಾದ ಎಲ್ಲಾ ಗುಡ್ಡಗಳನ್ನು ಹತ್ತಿ ಸೊಂಪಾಗಿ ಬೆಳೆದಿರುವ ಎಲ್ಲಾ ಮರಗಳ ಕೆಳಗೆ ಹೋಗಿ ಸೂಳೆಯಾಗಿ ನಡೆದಳಷ್ಟೆ.


ನಾನು ಪ್ರಮಾಣಪೂರ್ವಕವಾಗಿ ಅವರಿಗೆ ವಾಗ್ದಾನಮಾಡಿದ ದೇಶಕ್ಕೆ ಅವರನ್ನು ಸೇರಿಸಿದ ಮೇಲೆ ಅವರು ಎತ್ತರವಾದ ಎಲ್ಲಾ ಗುಡ್ಡಗಳನ್ನೂ ಸೊಂಪಾಗಿ ಬೆಳೆದಿರುವ ಎಲ್ಲಾ ಮರಗಳನ್ನೂ ನೋಡಿ ಅಲ್ಲಿ ಯಜ್ಞಪಶುಗಳನ್ನು ವಧಿಸಿ ನನ್ನನ್ನು ರೇಗಿಸುವ ನೈವೇದ್ಯವನ್ನವರ್ಪಿಸಿ ಸುಗಂಧಹೋಮಮಾಡಿ ಪಾನದ್ರವ್ಯವನ್ನು ಸುರಿದು ಒಪ್ಪಿಸುತ್ತಿದ್ದರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು