Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಸಮುಯೇಲ 9:13 - ಕನ್ನಡ ಸತ್ಯವೇದವು J.V. (BSI)

13 ಅವನು ಯಜ್ಞಭೋಜನಕ್ಕೋಸ್ಕರ ಗುಡ್ಡಕ್ಕೆ ಹೋಗುವ ಮೊದಲು ನೀವು ಊರೊಳಕ್ಕೆ ಹೋದರೆ ಸಿಕ್ಕುವನು. ಅವನು ಅಲ್ಲಿ ಹೋಗುವವರೆಗೆ ಜನರು ಊಟಮಾಡುವದಿಲ್ಲ. ಅವನು ಹೋಗಿ ಯಜ್ಞಾಹಾರವನ್ನು ಆಶೀರ್ವದಿಸುತ್ತಾನೆ; ಅನಂತರ ಕರೆಯಲ್ಪಟ್ಟವರು ಊಟಮಾಡುತ್ತಾರೆ. ಈಗಲೇ ಹೋಗಿರಿ; ಅವನು ಸಿಕ್ಕುವ ಸಮಯ ಇದೇ ಅಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

13 ಅವನು ಯಜ್ಞಭೋಜನಕ್ಕೋಸ್ಕರ ಗುಡ್ಡಕ್ಕೆ ಹೋಗುವ ಮೊದಲು ನೀವು ಊರೊಳಕ್ಕೆ ಹೋದರೆ ಸಿಕ್ಕುವನು. ಅವನು ಅಲ್ಲಿಗೆ ಹೋಗುವ ವರೆಗೆ ಜನರು ಊಟಮಾಡುವುದಿಲ್ಲ. ಅವನು ಹೋಗಿ ಯಜ್ಞಾಹಾರವನ್ನು ಆಶೀರ್ವದಿಸುತ್ತಾನೆ. ಅನಂತರ ಕರೆಯಲ್ಪಟ್ಟವರು ಊಟಮಾಡುತ್ತಾರೆ. ಈಗಲೇ ಹೋಗಿರಿ. ಅವನು ಸಿಕ್ಕುವ ಸಮಯ ಇದೇ” ಅಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

13 ಅವರು ಬಲಿಭೋಜನಕ್ಕಾಗಿ ಗುಡ್ಡಕ್ಕೆ ಹೋಗುವ ಮೊದಲೇ ನೀವು ಊರೊಳಕ್ಕೆ ಹೋದರೆ ಸಿಕ್ಕುವರು. ಅವರು ಅಲ್ಲಿಗೆ ಹೋಗುವವರೆಗೆ ಜನರು ಊಟಮಾಡುವುದಿಲ್ಲ. ಅವರು ಹೋಗಿ ಬಲಿ ಆಹಾರವನ್ನು ಆಶೀರ್ವದಿಸುತ್ತಾರೆ; ಅನಂತರವೇ ಆಮಂತ್ರಿತರು ಊಟಮಾಡುವುದು. ಈಗಲೇ ಹೋಗಿ; ಅವನು ಸಿಕ್ಕುವ ಸಮಯ ಇದೇ,” ಎಂದರು ಆ ಮಹಿಳೆಯರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

13 ನೀವು ಪಟ್ಟಣದೊಳಕ್ಕೆ ಹೋದರೆ ಅವನನ್ನು ಕಾಣಬಹುದು. ನೀವು ಬೇಗನೆ ನೋಡಬೇಕೆಂದಿದ್ದರೆ, ಅವನು ಊಟ ಮಾಡುವುದಕ್ಕಾಗಿ ಆರಾಧನೆಯ ಸ್ಥಳಕ್ಕೆ ಹೋಗುವುದಕ್ಕಿಂತ ಮೊದಲೇ ಅವನನ್ನು ಕಾಣಬೇಕು. ದರ್ಶಿಯು ಯಜ್ಞವನ್ನು ಆಶೀರ್ವದಿಸಬೇಕಾಗಿರುವುದರಿಂದ ಅವನು ಅಲ್ಲಿಗೆ ಹೋಗುವವರೆಗೆ ಜನರು ಊಟಮಾಡುವುದಿಲ್ಲ. ಆದ್ದರಿಂದ ನೀವು ಬೇಗನೆ ಹೋದರೆ ಅವನನ್ನು ಕಾಣಬಹುದು” ಎಂದು ಹೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

13 ನೀವು ಪಟ್ಟಣದೊಳಗೆ ಪ್ರವೇಶಿಸುತ್ತಲೇ ಗುಡ್ಡದ ಮೇಲೆ ತಿನ್ನಲು ಹೋಗುವರು. ಅವನು ಬರುವವರೆಗೂ ಜನರು ಏನೂ ತಿನ್ನುವುದಿಲ್ಲ. ಅವನು ಬಂದು ಅರ್ಪಣೆಯನ್ನು ಆಶೀರ್ವದಿಸುವನು. ಅನಂತರವೇ ಆಮಂತ್ರಿತರು ಊಟಮಾಡುವರು. ಈಗಲೇ ಹೋಗಿರಿ. ಈ ವೇಳೆಯಲ್ಲಿ ಅವನನ್ನು ಕಂಡುಕೊಳ್ಳುವಿರಿ,” ಎಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಸಮುಯೇಲ 9:13
12 ತಿಳಿವುಗಳ ಹೋಲಿಕೆ  

ತರುವಾಯ ಯೇಸು ಆ ರೊಟ್ಟಿಗಳನ್ನು ತೆಗೆದುಕೊಂಡು ದೇವರ ಸ್ತೋತ್ರಮಾಡಿ ಕೂತುಕೊಂಡವರಿಗೆ ಹಂಚಿ ಕೊಟ್ಟನು; ಅದರಂತೆ ಮೀನುಗಳಲ್ಲಿಯೂ ಅವರಿಗೆ ಬೇಕಾದಷ್ಟು ಹಂಚಿಕೊಟ್ಟನು.


ಆತನು ಉಂಟುಮಾಡಿದ್ದೆಲ್ಲವೂ ಒಳ್ಳೇದೇ; ದೇವರ ಸ್ತೋತ್ರಮಾಡಿ ತೆಗೆದುಕೊಳ್ಳುವ ಪಕ್ಷಕ್ಕೆ ಯಾವದನ್ನೂ ನಿಷಿದ್ಧವೆಂದು ಹೇಳತಕ್ಕದ್ದಲ್ಲ;


ನಾನು ಕೃತಜ್ಞತೆಯೊಡನೆ ಊಟಮಾಡಿ ದೇವರನ್ನು ಸ್ತುತಿಸಿದ ಮೇಲೆ ಆ ಪದಾರ್ಥಗಳ ನಿವಿುತ್ತ ನನಗೆ ಯಾಕೆ ದೂಷಣೆಯಾಗಬೇಕು?


ಆದರೆ ಅಷ್ಟರೊಳಗೆ ಬೇರೆ ದೋಣಿಗಳು ತಿಬೇರಿಯದಿಂದ ಹೊರಟು ಸ್ವಾವಿುಯು ಸ್ತೋತ್ರಮಾಡಿ ಜನರಿಗೆ ರೊಟ್ಟೀ ಊಟಮಾಡಿಸಿದ ಸ್ಥಳದ ಸಮೀಪಕ್ಕೆ ಬಂದಿದ್ದವು.


ಆತನು ಅವರ ಸಂಗಡ ಊಟಕ್ಕೆ ಕೂತುಕೊಂಡಾಗ ರೊಟ್ಟಿಯನ್ನು ತೆಗೆದುಕೊಂಡು ದೇವರ ಸ್ತೋತ್ರಮಾಡಿ ಮುರಿದು ಅವರಿಗೆ ಕೊಡುತ್ತಿರಲಾಗಿ ಅವರ ಕಣ್ಣುಗಳು ತೆರೆದವು.


ಆಮೇಲೆ ಆತನು ಆ ಐದು ರೊಟ್ಟಿ ಎರಡು ಮೀನುಗಳನ್ನು ತೆಗೆದುಕೊಂಡು ಆಕಾಶದ ಕಡೆಗೆ ನೋಡಿ ದೇವರ ಸ್ತೋತ್ರಮಾಡಿ ಆ ರೊಟ್ಟಿಗಳನ್ನು ಮುರಿದು - ನೀವು ಜನರಿಗೆ ಹಂಚಿರಿ ಎಂದು ಶಿಷ್ಯರ ಕೈಗೆ ಕೊಟ್ಟು ಆ ಎರಡು ಮೀನುಗಳನ್ನೂ ಎಲ್ಲರಿಗೆ ಹಂಚಿಸಿದನು.


ಅವರು ಊಟಮಾಡುತ್ತಿರುವಾಗ ಯೇಸು ರೊಟ್ಟಿಯನ್ನು ತೆಗೆದುಕೊಂಡು ದೇವರ ಸ್ತೋತ್ರಮಾಡಿ ಮುರಿದು ಶಿಷ್ಯರಿಗೆ ಕೊಟ್ಟು - ತಕ್ಕೊಳ್ಳಿರಿ, ತಿನ್ನಿರಿ, ಇದು ನನ್ನ ದೇಹ ಅಂದನು.


ಮತ್ತು ಜನರಿಗೆ ಹುಲ್ಲಿನ ಮೇಲೆ ಕೂತುಕೊಳ್ಳುವದಕ್ಕೆ ಹೇಳಿ ಆ ಐದು ರೊಟ್ಟಿ ಎರಡು ಮೀನುಗಳನ್ನು ತಕ್ಕೊಂಡು ಆಕಾಶದ ಕಡೆಗೆ ನೋಡಿ ದೇವರ ಸ್ತೋತ್ರಮಾಡಿ ರೊಟ್ಟಿಗಳನ್ನು ಮುರಿದು ಶಿಷ್ಯರ ಕೈಗೆ ಕೊಟ್ಟನು; ಶಿಷ್ಯರು ಜನರ ಗುಂಪಿಗೆ ಕೊಟ್ಟರು.


ಆಮೇಲೆ ಆತನು ಆ ಐದು ರೊಟ್ಟಿ ಎರಡು ಮೀನುಗಳನ್ನು ತೆಗೆದುಕೊಂಡು ಆಕಾಶದ ಕಡೆಗೆ ನೋಡಿ ಅವುಗಳನ್ನು ಆಶೀರ್ವದಿಸಿ ಮುರಿದು ಶಿಷ್ಯರ ಕೈಗೆ ಕೊಟ್ಟು - ಈ ಜನರ ಗುಂಪಿಗೆ ಹಂಚಿರಿ ಅಂದನು.


ನನ್ನ ದೃಷ್ಟಿಗೂ ಮನಸ್ಸಿಗೂ ಸರಿಯಾದದ್ದನ್ನೇ ಮಾಡುವ ಒಬ್ಬ ನಂಬಿಗಸ್ತನಾದ ಯಾಜಕನನ್ನು ಎಬ್ಬಿಸುವೆನು; ಅವನಿಗೆ ಶಾಶ್ವತಗೃಹವನ್ನು ಅನುಗ್ರಹಿಸುವೆನು. ಅವನು ನನ್ನ ಅಭಿಷಿಕ್ತನ ಬಳಿಯಲ್ಲಿ ಸದಾಕಾಲ ಸೇವೆಮಾಡುವನು.


ಅವರು ಮೇಲೆ ಹತ್ತಿ ಊರಿಗೆ ಬಂದಾಗ ಸಮುವೇಲನು ಗುಡ್ಡಕ್ಕೆ ಹೋಗುವದಕ್ಕೋಸ್ಕರ ಹೊರಟು ಅವರೆದುರಿಗೆ ಬಂದನು.


ಅಬ್ಷಾಲೋಮನು ಯೆರೂಸಲೇವಿುನಿಂದ ಸಮಾರಾಧನೆಗೆಂದು ಇನ್ನೂರು ಜನರನ್ನು ಕರಕೊಂಡು ಹೋಗಿದ್ದನು. ಅವರು ಯಥಾರ್ಥ ಮನಸ್ಸಿನಿಂದ ಹೋದವರು; ಅವರಿಗೇನೂ ಗೊತ್ತಿರಲಿಲ್ಲ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು