1 ಸಮುಯೇಲ 6:4 - ಕನ್ನಡ ಸತ್ಯವೇದವು J.V. (BSI)4 ಜನರು - ನಾವು ಪ್ರಾಯಶ್ಚಿತ್ತಾರ್ಥವಾಗಿ ಕಳುಹಿಸತಕ್ಕದ್ದೇನು ಎನ್ನಲು ಅವರು - ನಿಮಗೂ ನಿಮ್ಮ ಪ್ರಭುಗಳಿಗೂ ಒಂದೇ ವಿಧ ವ್ಯಾಧಿಯಿರುವದರಿಂದ ಪ್ರಭುಗಳ ಸಂಖ್ಯೆಗೆ ಸರಿಯಾಗಿ ಬಂಗಾರದ ಐದು ಗಡ್ಡೆಗಳನ್ನೂ ಇಲಿಗಳನ್ನೂ ಮಾಡಿಸಬೇಕು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20194 ಜನರು, “ನಾವು ಪ್ರಾಯಶ್ಚಿತ್ತಾರ್ಥವಾಗಿ ಏನು ಕಳುಹಿಸಬೇಕು?” ಎಂದು ಕೇಳಲು ಅವರು, “ನಿಮಗೂ ನಿಮ್ಮ ಪ್ರಭುಗಳಿಗೂ ಒಂದೇ ವಿಧವಾದ ವ್ಯಾಧಿ ಇರುವುದರಿಂದ ಪ್ರಭುಗಳ ಸಂಖ್ಯೆಗೆ ಸರಿಯಾಗಿ ಬಂಗಾರದ ಐದು ಗಡ್ಡೆಗಳನ್ನೂ, ಬಂಗಾರದ ಐದು ಇಲಿಗಳನ್ನು ಮಾಡಿಸಬೇಕು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)4 ಆ ಜನರು, “ನಾವು ಪ್ರಾಯಶ್ಚಿತಾರ್ಥವಾಗಿ ಏನನ್ನು ಕಳುಹಿಸಬೇಕು?” ಎಂದು ವಿಚಾರಿಸಿದರು. ಅದಕ್ಕೆ ಅವರು, “ನಿಮಗೂ ನಿಮ್ಮ ರಾಜರುಗಳಿಗೂ ಒಂದೇ ವಿಧವಾದ ವ್ಯಾಧಿ ಇರುವುದರಿಂದ ನಿಮ್ಮ ರಾಜರುಗಳ ಸಂಖ್ಯೆಗೆ ಸರಿಯಾಗಿ ಐದು ಬಂಗಾರದ ಗಡ್ಡೆಗಳನ್ನು ಹಾಗು ಐದು ಬಂಗಾರದ ಇಲಿಗಳನ್ನು ಮಾಡಿಸಬೇಕು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್4 ಫಿಲಿಷ್ಟಿಯರು, “ಇಸ್ರೇಲರ ದೇವರು ನಮ್ಮನ್ನು ಕ್ಷಮಿಸಬೇಕಾದರೆ ನಾವು ಯಾವ ಕಾಣಿಕೆಗಳನ್ನು ಕಳುಹಿಸಬೇಕು?” ಎಂದು ಕೇಳಿದರು. ಅರ್ಚಕರು ಮತ್ತು ಮಾಂತ್ರಿಕರು, “ನಿಮ್ಮಲ್ಲಿ ಐದು ಮಂದಿ ಅಧಿಪತಿಗಳಿದ್ದೀರಿ. ಪ್ರತಿಯೊಂದು ನಗರಕ್ಕೆ ಒಬ್ಬ ಅಧಿಪತಿಯಿದ್ದಾನೆ. ನೀವು ಮತ್ತು ನಿಮ್ಮ ಅಧಿಪತಿಗಳೆಲ್ಲರೂ ಒಂದೇ ರೀತಿಯಲ್ಲಿ ತೊಂದರೆಗೊಳಗಾಗಿದ್ದೀರಿ. ಆದ್ದರಿಂದ ಚಿನ್ನದಲ್ಲಿ ಐದು ಗಡ್ಡೆಗಳನ್ನು ಹಾಗೂ ಐದು ಇಲಿಗಳನ್ನು ಮಾಡಿಸಬೇಕು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ4 ಆಗ ಅವರು, “ದೋಷಪರಿಹಾರ ಕಾಣಿಕೆಗಾಗಿ ನಾವು ಅದರ ಸಂಗಡ ಕಳುಹಿಸತಕ್ಕದ್ದೇನು?” ಎಂದರು. ಅದಕ್ಕವರು, “ನಿಮಗೂ ನಿಮ್ಮ ಪ್ರಭುಗಳಿಗೂ ಒಂದೇ ವಿಧ ವ್ಯಾಧಿಯಿರುವುದರಿಂದ ಫಿಲಿಷ್ಟಿಯರ ಅಧಿಪತಿಗಳ ಸಂಖ್ಯೆಗೆ ಸರಿಯಾಗಿ ಒಬ್ಬೊಬ್ಬರಿಗೆ ಬಂಗಾರದ ಐದು ಗಡ್ಡೆಗಳನ್ನು ಮತ್ತು ಬಂಗಾರದ ಐದು ಇಲಿಗಳನ್ನೂ ಕಳುಹಿಸಿರಿ. ಅಧ್ಯಾಯವನ್ನು ನೋಡಿ |