Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಸಮುಯೇಲ 30:3 - ಕನ್ನಡ ಸತ್ಯವೇದವು J.V. (BSI)

3 ದಾವೀದನೂ ಅವನ ಜನರೂ ತಮ್ಮ ಊರಿಗೆ ಬಂದಾಗ ಅದು ಸುಡಲ್ಪಟ್ಟಿರುವದನ್ನೂ ತಮ್ಮ ಹೆಂಡತಿಯರೂ ಗಂಡುಹೆಣ್ಣು ಮಕ್ಕಳೂ ಸೆರೆಯಾಗಿ ಒಯ್ಯಲ್ಪಟ್ಟಿರುವದನ್ನೂ ಕಂಡು

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

3 ಆದರೆ ಯಾರನ್ನೂ ಕೊಂದಿರಲಿಲ್ಲ. ದಾವೀದನೂ ಅವನ ಜನರೂ ತಮ್ಮ ಊರಿಗೆ ಬಂದಾಗ ಅದು ಸುಡಲ್ಪಟ್ಟಿರುವುದನ್ನೂ, ತಮ್ಮ ಹೆಂಡತಿಯರೂ ಗಂಡುಮಕ್ಕಳೂ ಸೆರೆಯಾಗಿ ಒಯ್ಯಲ್ಪಟ್ಟಿರುವುದನ್ನೂ ಕಂಡು

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

3 ದಾವೀದನೂ ಅವನ ಜನರೂ ತಮ್ಮ ಊರಿಗೆ ಬಂದಾಗ ಅದು ಸುಟ್ಟುಹೋಗಿರುವುದನ್ನೂ ತಮ್ಮ ಹೆಂಡತಿಯರೂ ಗಂಡು-ಹೆಣ್ಣು ಮಕ್ಕಳೂ ಸೆರೆಯಾಗಿ ಹೋಗಿರುವುದನ್ನೂ ಕಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

3 ದಾವೀದನು ಮತ್ತು ಅವನ ಜನರು ಚಿಕ್ಲಗಿಗೆ ಬಂದರು. ನಗರವು ಸುಡುತ್ತಿರುವುದನ್ನು ಅವರು ನೋಡಿದರು. ಅವರ ಹೆಂಡತಿಯರಾಗಲಿ ಗಂಡುಮಕ್ಕಳಾಗಲಿ ಹೆಣ್ಣುಮಕ್ಕಳಾಗಲಿ ಅಲ್ಲಿರಲಿಲ್ಲ. ಅಮಾಲೇಕ್ಯರು ಅವರನ್ನು ಎಳೆದುಕೊಂಡು ಹೋಗಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

3 ದಾವೀದನೂ, ಅವನ ಜನರೂ ಆ ಪಟ್ಟಣಕ್ಕೆ ಬಂದಾಗ, ಅದು ಬೆಂಕಿಯಿಂದ ಸುಟ್ಟುಹೋಗಿರುವುದನ್ನೂ ಮತ್ತು ಆ ಜನರ ಹೆಂಡತಿಯರೂ ಅವರ ಪುತ್ರ ಪುತ್ರಿಯರೂ ಸೆರೆಯಾಗಿ ಹೋಗಿರುವುದನ್ನೂ ಕಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಸಮುಯೇಲ 30:3
7 ತಿಳಿವುಗಳ ಹೋಲಿಕೆ  

ನೀತಿವಂತನಿಗೆ ಸಂಭವಿಸುವ ಕಷ್ಟಗಳು ಅನೇಕವಿದ್ದರೂ ಯೆಹೋವನು ಅವೆಲ್ಲವುಗಳಿಂದ ಅವನನ್ನು ಬಿಡಿಸುತ್ತಾನೆ.


ನಾನು ನಿನಗೆ ಅನುಗ್ರಹಿಸುವದೇನಂದರೆ ತಾವು ಯೆಹೂದ್ಯರೆಂದು ಸುಳ್ಳಾಗಿ ಕೊಚ್ಚಿಕೊಳ್ಳುವ ಸೈತಾನನ ಸಮಾಜದವರಲ್ಲಿ ಕೆಲವರು ಬಂದು ನಿನ್ನ ಪಾದಗಳ ಮುಂದೆ ಬೀಳುವಂತೆಯೂ ನಿನ್ನನ್ನು ನಾನು ಪ್ರೀತಿಸಿದ್ದನ್ನು ತಿಳುಕೊಳ್ಳುವಂತೆಯೂ ಮಾಡುವೆನು.


ಕರ್ತನು ತಾನು ಪ್ರೀತಿಸುವವನನ್ನೇ ಶಿಕ್ಷಿಸುತ್ತಾನೆ; ತಾನು ಸೇರಿಸಿಕೊಳ್ಳುವ ಪ್ರತಿಯೊಬ್ಬ ಮಗನನ್ನು ಹೊಡೆಯುತ್ತಾನೆ ಎಂಬದು.


ಅವನೂ ಅವನ ಜನರೂ ತಮ್ಮತಮ್ಮ ಕುಟುಂಬ ಸಹಿತವಾಗಿ ಆಕೀಷನ ಊರಾದ ಗತ್ ಊರಿನಲ್ಲಿ ವಾಸಿಸಿದರು. ದಾವೀದನ ಹೆಂಡತಿಯರಾಗಿರುವ ಇಜ್ರೇಲ್ಯಳಾದ ಅಹೀನೋವಮಳೂ ಕರ್ಮೆಲ್ಯನಾದ ನಾಬಾಲನ ಹೆಂಡತಿಯಾಗಿದ್ದ ಅಬೀಗೈಲಳೂ ಅವನ ಸಂಗಡ ಇದ್ದರು.


ಅದರಲ್ಲಿದ್ದ ಎಲ್ಲಾ ಹೆಂಗಸರನ್ನೂ ಚಿಕ್ಕವರನ್ನೂ ದೊಡ್ಡವರನ್ನೂ ಸೆರೆಹಿಡಿದುಕೊಂಡು ಹೋಗಿದ್ದರು; ಆದರೆ ಯಾರನ್ನೂ ಕೊಂದಿರಲಿಲ್ಲ.


ಅವರು ತಮ್ಮಿಂದಾಗುವಷ್ಟು ಕಾಲ ಗಟ್ಟಿಯಾಗಿ ಅತ್ತರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು