Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಸಮುಯೇಲ 30:20 - ಕನ್ನಡ ಸತ್ಯವೇದವು J.V. (BSI)

20 ಇದಲ್ಲದೆ ದಾವೀದನು ಶತ್ರುಗಳ ದನಕುರಿಗಳನ್ನು ತೆಗೆದುಕೊಂಡನು. ಅವನ ಜನರು - ಇವು ದಾವೀದನ ಕೊಳ್ಳೆ ಎಂದು ಹೇಳಿ ಅವುಗಳನ್ನು ತಮ್ಮ ದನಗಳ ಮುಂದಾಗಿ ಹೊಡಕೊಂಡು ಬಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

20 ಇದಲ್ಲದೆ ದಾವೀದನು ಶತ್ರುಗಳ ದನಕುರಿಗಳನ್ನೂ ತೆಗೆದುಕೊಂಡನು. ಅವನ ಜನರು, “ಇವು ದಾವೀದನ ಕೊಳ್ಳೆ” ಎಂದು ಹೇಳಿ ಅವುಗಳನ್ನು ತಮ್ಮ ದನಗಳ ಮುಂದಾಗಿ ಹೊಡೆದುಕೊಂಡು ಬಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

20 ಇದಲ್ಲದೆ, ದಾವೀದನು ಶತ್ರುಗಳ ದನಕುರಿಗಳನ್ನೂ ತೆಗೆದುಕೊಂಡನು. ಅವನ ಜನರು, “ಇವು ದಾವೀದನ ಕೊಳ್ಳೆ,” ಎಂದು ಹೇಳಿ ಅವುಗಳನ್ನು ತಮ್ಮ ದನಗಳ ಸಮೇತ ಹೊಡೆದುಕೊಂಡು ಬಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

20 ದಾವೀದನು ಎಲ್ಲ ಕುರಿಗಳನ್ನು ಮತ್ತು ದನಗಳನ್ನು ತೆಗೆದುಕೊಂಡನು. ಈ ಪಶುಗಳು ಮುಂದೆ ಹೋಗುವಂತೆ ದಾವೀದನ ಜನರು ಮಾಡಿದರು. ದಾವೀದನ ಜನರು, “ಅವು ದಾವೀದನ ಕೊಡುಗೆಗಳು” ಎಂದು ಹೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

20 ಇದಲ್ಲದೆ ದಾವೀದನು ಶತ್ರುಗಳ ಸಮಸ್ತ ದನಕುರಿಗಳ ಮಂದೆಗಳನ್ನು ತೆಗೆದುಕೊಂಡನು. ಅವನ ಜನರು, “ಇವು ದಾವೀದನ ಕೊಳ್ಳೆ” ಎಂದು ಹೇಳಿ ಅವುಗಳನ್ನು ತಮ್ಮ ಪಶುಗಳ ಮುಂದಾಗಿ ಹೊಡೆದುಕೊಂಡು ಬಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಸಮುಯೇಲ 30:20
7 ತಿಳಿವುಗಳ ಹೋಲಿಕೆ  

ದಾವೀದನು ಚಿಕ್ಲಗಿಗೆ ಬಂದನಂತರ ತನ್ನ ಸ್ನೇಹಿತರಾದ ಯೆಹೂದಹಿರಿಯರಿಗೆ ಕೊಳ್ಳೆಯ ಒಂದು ಭಾಗವನ್ನು ಕಳುಹಿಸಿ - ಇಗೋ, ಯೆಹೋವನ ಶತ್ರುಗಳನ್ನು ಸೂರೆಮಾಡಿ ತಂದವುಗಳಲ್ಲಿ ಇದು ನಿಮಗೆ ಬಹುಮಾನವಾಗಿರಲಿ ಎಂದು ಹೇಳಿಸಿದನು.


ಆದರೆ ನಮ್ಮನ್ನು ಪ್ರೀತಿಸಿದಾತನ ಮೂಲಕವಾಗಿ ನಾವು ಈ ಎಲ್ಲಾ ವಿಷಯಗಳಲ್ಲಿ ಪೂರ್ಣ ಜಯಶಾಲಿಗಳಾಗುತ್ತೇವೆ.


ಇವನು ಇಂಥವನಾಗಿರುವದರಿಂದ ನಾನು ಇವನಿಗೆ ದೊಡ್ಡವರ ಸಂಗಡ ಪಾಲು ಕೊಡುವೆನು, ಇವನು ಬಲಿಷ್ಠರೊಡನೆ ಸೂರೆಯನ್ನು ಹಂಚಿಕೊಳ್ಳುವನು; ತನ್ನ ಪ್ರಾಣವನ್ನು ಧಾರೆಯೆರೆದು ಮರಣಹೊಂದಿ ದ್ರೋಹಿಗಳೊಂದಿಗೆ ತನ್ನನ್ನೂ ಎಣಿಸಿಕೊಂಡು ಬಹುಜನ ದ್ರೋಹಿಗಳ ಪಾಪವನ್ನು ಹೊರುತ್ತಾ ಅವರಿಗಾಗಿ ವಿಜ್ಞಾಪನೆಮಾಡಿದನಲ್ಲಾ.


ಯೆಹೋಷಾಫಾಟನೂ ಅವನ ಜನರೂ ಸುಲಿಗೆಮಾಡುವದಕ್ಕೋಸ್ಕರ ಅಲ್ಲಿಗೆ ಹೋಗಲು ಅವರಿಗೆ ದ್ರವ್ಯ ವಸ್ತ್ರ ಶ್ರೇಷ್ಠಾಯುಧ ಇವುಗಳು ರಾಶಿರಾಶಿಯಾಗಿ ಸಿಕ್ಕಿದವು. ಅವರು ಹೊರಲಾರದಷ್ಟು ಸುಲುಕೊಂಡರು. ಕೊಳ್ಳೆಯು ಬಲುಹೆಚ್ಚಾಗಿದ್ದದರಿಂದ ಅವರು ಮೂರು ದಿನಗಳವರೆಗೂ ಕೂಡಿಸುತ್ತಿದ್ದರು.


ಅನಂತರ ದಾವೀದನು ಮೊದಲು ಆಯಾಸದಿಂದ ತನ್ನ ಹಿಂದೆ ಬರಲಾರದೆ ಬೆಸೋರ್ ಹಳ್ಳದ ಹತ್ತಿರ ಇಳಿದಿದ್ದ ಇನ್ನೂರು ಜನರ ಬಳಿಗೆ ಹೋಗುತ್ತಿರುವಾಗ ಅವರು ಅವನನ್ನೂ ಅವನೊಂದಿಗಿದ್ದ ಜನರನ್ನೂ ಎದುರುಗೊಳ್ಳಬಂದರು. ದಾವೀದನು ಅವರನ್ನು ಸಂಧಿಸಿ ಅವರ ಕ್ಷೇಮಸಮಾಚಾರವನ್ನು ವಿಚಾರಿಸಿದನು.


ದನಕಾಯುವವರ ಗುಡಾರಗಳ ಮೇಲೆ ಬಿದ್ದು ಎಷ್ಟೋ ಒಂಟೆ ಕುರಿಗಳನ್ನು ಯೆರೂಸಲೇವಿುಗೆ ಹೊಡೆದುಕೊಂಡು ಬಂದರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು