Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಸಮುಯೇಲ 30:1 - ಕನ್ನಡ ಸತ್ಯವೇದವು J.V. (BSI)

1 ದಾವೀದನೂ ಅವನ ಜನರೂ ಮೂರನೆಯ ದಿನ ಚಿಕ್ಲಗ್ ಊರನ್ನು ಮುಟ್ಟಿದರು. ಅಷ್ಟರೊಳಗೆ ಅಮಾಲೇಕ್ಯರು ದಂಡೆತ್ತಿ ದಕ್ಷಿಣಪ್ರಾಂತಕ್ಕೂ ಚಿಕ್ಲಗ್ ಊರಿಗೂ ಬಂದು ಚಿಕ್ಲಗ್ ಊರನ್ನು ಸುಟ್ಟು ಹಾಳುಮಾಡಿ

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

1 ದಾವೀದನೂ ಅವನ ಜನರೂ ಮೂರನೆಯ ದಿನ ಚಿಕ್ಲಗ್ ಊರನ್ನು ಮುಟ್ಟಿದರು. ಅಷ್ಟರೊಳಗೆ ಅಮಾಲೇಕ್ಯರು ದಂಡೆತ್ತಿ ದಕ್ಷಿಣ ಪ್ರಾಂತ್ಯಕ್ಕೂ ಚಿಕ್ಲಗ್ ಊರಿಗೂ ಬಂದು ಚಿಕ್ಲಗ್ ಊರನ್ನು ಸುಟ್ಟು ಹಾಳುಮಾಡಿ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

1 ದಾವೀದನೂ ಅವನ ಜನರೂ ಮಾರನೆಯ ದಿನ ಚಿಕ್ಲಗ್ ಊರನ್ನು ಸೇರಿದರು. ಅಷ್ಟರೊಳಗೆ ಅಮಾಲೇಕ್ಯರು ದಂಡೆತ್ತಿ ದಕ್ಷಿಣಪ್ರಾಂತ್ಯಕ್ಕೂ ಚಿಕ್ಲಗ್ ಊರಿಗೂ ಬಂದು ಚಿಕ್ಲಗ್ ಊರನ್ನು ಸುಟ್ಟು ಹಾಳುಮಾಡಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

1 ಮೂರನೆಯ ದಿನ ದಾವೀದನು ಮತ್ತು ಅವನ ಜನರು ಚಿಕ್ಲಗ್ ಊರಿಗೆ ಬಂದರು. ಅಮಾಲೇಕ್ಯರು ಚಿಕ್ಲಗನ್ನು ಆಕ್ರಮಣ ಮಾಡಿರುವುದನ್ನು ಅವರು ನೋಡಿದರು. ಅಮಾಲೇಕ್ಯರು ನೆಗೆವ್ ಪ್ರದೇಶದ ಮೇಲೆ ದಾಳಿ ಮಾಡಿದರು. ಅವರು ಚಿಕ್ಲಗನ್ನು ಆಕ್ರಮಿಸಿದ್ದರು ಮತ್ತು ಆ ನಗರವನ್ನು ಸುಟ್ಟುಹಾಕಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

1 ದಾವೀದನೂ, ಅವನ ಜನರೂ ಮೂರನೆಯ ದಿವಸದಲ್ಲಿ ಚಿಕ್ಲಗ್ ಊರಿಗೆ ಬಂದು ಸೇರಿದರು. ಅಮಾಲೇಕ್ಯರು ದಕ್ಷಿಣ ಸೀಮೆಯ ಮೇಲೆಯೂ, ಚಿಕ್ಲಗಿನ ಮೇಲೆಯೂ ಆಕ್ರಮಿಸಿ ಅದನ್ನು ಬೆಂಕಿಯಿಂದ ಸುಟ್ಟುಬಿಟ್ಟರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಸಮುಯೇಲ 30:1
18 ತಿಳಿವುಗಳ ಹೋಲಿಕೆ  

ದಾವೀದನು ತನ್ನ ಜನರೊಡನೆ ಬೆಳಿಗ್ಗೆ ಎದ್ದು ಹಿಂದಿರುಗಿ ಫಿಲಿಷ್ಟಿಯರ ದೇಶಕ್ಕೆ ಹೊರಟನು. ಫಿಲಿಷ್ಟಿಯರು ಇಜ್ರೇಲಿಗೆ ಹೋದರು.


ಆಗ ಸೌಲನು ಅಮಾಲೇಕ್ಯರನ್ನು ಹವೀಲಾ ಪ್ರಾಂತದಿಂದ ಐಗುಪ್ತದ ಪೂರ್ವದಿಕ್ಕಿನಲ್ಲಿರುವ ಶೂರಿನವರೆಗೂ ಹೊಡೆಯುತ್ತಾ ಹೋದನು.


ಆದರೆ ಫಿಲಿಷ್ಟಿಯಪ್ರಭುಗಳು ಅವನ ಮೇಲೆ ಕೋಪಗೊಂಡು ಅವನಿಗೆ - ಈ ಮನುಷ್ಯನನ್ನು ಕಳುಹಿಸಿಬಿಡು, ಇವನು ಹಿಂದಿರುಗಿ ಹೋಗಿ ನೀನು ನೇವಿುಸಿದ ಸ್ಥಳದಲ್ಲೇ ವಾಸಿಸಲಿ; ನಮ್ಮ ಜೊತೆಯಲ್ಲಿ ಯುದ್ಧಕ್ಕೆ ಬರಬಾರದು. ಬಂದರೆ ನಮಗೆ ಶತ್ರುವಾಗಿ ನಿಂತಾನು. ಫಿಲಿಷ್ಟಿಯರ ತಲೆಗಳನ್ನು ಕಡಿಯುವದರಿಂದಲೇ ಇವನು ತನ್ನ ಯಜಮಾನನ ಮೆಚ್ಚಿಕೆಯನ್ನು ಪಡೆಯಬಹುದಲ್ಲವೇ!


ಆಗ ಯೆಹೋವನು ಯೆಹೋಶುವನಿಗೆ - ನೀನು ಅವರಿಗೆ ಹೆದರಬೇಡ; ನಾಳೆ ಇಷ್ಟೇ ಹೊತ್ತಿಗೆ ಅವರನ್ನು ಇಸ್ರಾಯೇಲ್ಯರಿಗೆ ಒಪ್ಪಿಸುವೆನು; ಅವರು ಅವರನ್ನು ಹತಿಸಿಬಿಡುವರು. ನೀನು ಅವರ ಕುದುರೆಗಳ ಹಿಂಗಾಲಿನ ನರಗಳನ್ನು ಕೊಯಿದು ರಥಗಳನ್ನು ಸುಟ್ಟುಬಿಡಬೇಕು ಅಂದನು.


ಮೂರನೆಯ ದಿನ ಸೌಲನ ಪಾಳೆಯದಿಂದ ಒಬ್ಬ ಮನುಷ್ಯನು ದಾವೀದನ ಬಳಿಗೆ ಬಂದು ನೆಲದ ಮಟ್ಟಿಗೆ ಬಾಗಿ ನಮಸ್ಕರಿಸಿದನು. ಅವನು ವಸ್ತ್ರಗಳನ್ನು ಹರಿದುಕೊಂಡು ತಲೆಯ ಮೇಲೆ ಮಣ್ಣು ಹಾಕಿಕೊಂಡಿದ್ದನು.


ಅಷ್ಟರಲ್ಲಿ ಇಸಾಕನು ಲಹೈರೋಯಿ ಬಾವಿಗೆ ಹೋಗಿ ಬಂದಿದ್ದನು; ಕಾನಾನ್ ದೇಶದ ದಕ್ಷಿಣ ಸೀಮೆಯಲ್ಲಿ ವಾಸವಾಗಿದ್ದನು.


ಕೆಸೀಲ್, ಹೊರ್ಮಾ, ಚಿಕ್ಲಗ್, ಮದ್ಮನ್ನಾ, ಸನ್ಸನ್ನಾ,


ಅವರ ಅರಸನಾದ ಅಗಾಗನನ್ನು ಸಜೀವಿಯಾಗಿ ಹಿಡಿದು ಎಲ್ಲಾ ಜನರನ್ನು ಕತ್ತಿಯಿಂದ ಸಂಹರಿಸಿದನು.


ಆಕೀಷನು ಕೂಡಲೆ ಅವನಿಗೆ ಚಿಕ್ಲಗ್ ಊರನ್ನು ಕೊಟ್ಟುಬಿಟ್ಟನು. ಆದದರಿಂದ ಚಿಕ್ಲಗ್ ಎಂಬದು ಇಂದಿನವರೆಗೂ ಯೆಹೂದರಾಜರಿಗೆ ಸೇರಿದೆ.


ನಾವು ಕೆರೇತ್ಯರೂ ಯೆಹೂದ್ಯರೂ ಕಾಲೇಬ್ಯರೂ ಇರುವ ದಕ್ಷಿಣಪ್ರಾಂತವನ್ನು ಸೂರೆಮಾಡಿ ಚಿಕ್ಲಗ್ ಊರನ್ನು ಸುಟ್ಟುಬಿಟ್ಟು ಬಂದೆವು ಎಂದು ಉತ್ತರಕೊಟ್ಟನು.


ಸೌಲನು ಸತ್ತನಂತರ ಸಂಭವಿಸಿದ್ದು. ದಾವೀದನು ಅಮಾಲೇಕ್ಯರನ್ನು ಹೊಡೆದು ಬಂದು ಚಿಕ್ಲಗಿನಲ್ಲಿ ಎರಡು ದಿವಸ ಇದ್ದನು.


ನಾನು - ಇಗೋ, ಬಂದೆನು ಎಂದು ಹೇಳಿ ಹೋದಾಗ ಅವನು - ನೀನಾರು ಎಂದು ಕೇಳಿದ್ದಕ್ಕೆ - ಅಮಾಲೇಕ್ಯನೆಂದು ಉತ್ತರ ಕೊಟ್ಟೆನು.


ದಾವೀದನ ಎಲ್ಲಾ ಸೇವಕರೂ ಕೆರೇತ್ಯ, ಪೆಲೇತ್ಯ ಎಂಬ ಕಾವಲುದಂಡುಗಳೂ ಗತ್ಊರಿನಿಂದ ಅರಸನ ಜೊತೆಯಲ್ಲಿ ಬಂದಿದ್ದ ಆರುನೂರು ಮಂದಿ ಗಿತ್ತೀಯರೂ ಅರಸನ ಮುಂದೆ ಹೋದರು.


ರಣವೀರರೂ ಸೇನಾಧಿಪತಿಗಳೂ ಆದ ಇವರೆಲ್ಲರೂ ಸುಲಿಗೆಗುಂಪುಗಳಿಗೆ ವಿರೋಧವಾಗಿ ದಾವೀದನಿಗೆ ಸಹಾಯಮಾಡುವವರಾದರು.


ತಮ್ಮ ಸೈನಿಕರನ್ನೆಲ್ಲಾ ಕರಕೊಂಡು ನೆತನ್ಯನ ಮಗನಾದ ಇಷ್ಮಾಯೇಲನ ಮೇಲೆ ಯುದ್ಧಕ್ಕೆ ಹೊರಟು ಗಿಬ್ಯೋನಿನ ದೊಡ್ಡ ಕೆರೆಯ ಹತ್ತಿರ ಅವನನ್ನು ಕಂಡರು.


ಆದದರಿಂದ ನೀನೂ ನಿನ್ನ ಸಂಗಡ ಬಂದ ನಿನ್ನ ಒಡೆಯನ ಸೇವಕರೂ ನಾಳೆ ಬೆಳಿಗ್ಗೆ ಎದ್ದು ಹೊತ್ತುಮೂಡಿದ ಕೂಡಲೆ ಹಿಂದಿರುಗಿಹೋಗಿರಿ ಎಂದು ಹೇಳಿದನು.


ದಾವೀದನ ಸಹಾಯಕ್ಕೆ ಪ್ರತಿದಿನವೂ ಹೊಸ ಗುಂಪುಗಳು ಬರುತ್ತಿದ್ದವು; ಅವನ ಸೈನ್ಯವು ದೇವಸೈನ್ಯದಷ್ಟು ದೊಡ್ಡದಾಯಿತು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು