Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಸಮುಯೇಲ 25:40 - ಕನ್ನಡ ಸತ್ಯವೇದವು J.V. (BSI)

40 ಅವರು ಕರ್ಮೆಲಿನಲ್ಲಿದ್ದ ಅಬೀಗೈಲಳ ಬಳಿಗೆ ಹೋಗಿ ಆಕೆಗೆ - ದಾವೀದನು ನಿನ್ನನ್ನು ತನಗೆ ಹೆಂಡತಿಯಾಗುವದಕ್ಕೆ ಕರಕೊಂಡು ಬರಬೇಕೆಂದು ನಮ್ಮನ್ನು ಕಳುಹಿಸಿದ್ದಾನೆ ಅಂದಾಗ

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

40 ಅವರು ಕರ್ಮೆಲಿನಲ್ಲಿದ್ದ ಅಬೀಗೈಲಳ ಬಳಿಗೆ ಹೋಗಿ ಆಕೆಗೆ, “ದಾವೀದನು ನಿನ್ನನ್ನು ತನಗೆ ಹೆಂಡತಿಯಾಗಿರುವುದಕ್ಕೆ ಕರೆದುಕೊಂಡು ಬರಬೇಕೆಂದು ನಮ್ಮನ್ನು ಕಳುಹಿಸಿದ್ದಾನೆ” ಅಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

40 ಅವರು ಕರ್ಮೆಲಿನಲ್ಲಿದ್ದ ಅಬೀಗೈಲಳ ಬಳಿಗೆ ಹೋಗಿ ಆಕೆಗೆ, “ದಾವೀದ ಅವರು ನಿನ್ನನ್ನು ತಮಗೆ ಹೆಂಡತಿಯಾಗುವುದಕ್ಕೆ ಕರೆದುಕೊಂಡು ಬರಬೇಕೆಂದು ನಮ್ಮನ್ನು ಕಳುಹಿಸಿದ್ದಾರೆ,” ಎಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

40 ದಾವೀದನ ಸೈನಿಕರು ಕರ್ಮೆಲಿಗೆ ಹೋಗಿ ಅಬೀಗೈಲಳಿಗೆ, “ದಾವೀದನು ನಿನ್ನನ್ನು ಕರೆತರಲು ಹೇಳಿದ್ದಾನೆ. ನಿನ್ನನ್ನು ತನ್ನ ಹೆಂಡತಿಯನ್ನಾಗಿ ಸ್ವೀಕರಿಸಿಕೊಳ್ಳಬೇಕೆಂಬುದು ದಾವೀದನ ಅಪೇಕ್ಷೆ” ಎಂದು ಹೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

40 ದಾವೀದನ ಸೇವಕರು ಕರ್ಮೆಲಿನಲ್ಲಿರುವ ಅಬೀಗೈಲಳ ಬಳಿಗೆ ಬಂದಾಗ ಅವಳಿಗೆ, “ದಾವೀದನು ನಿನ್ನನ್ನು ತನಗೆ ಹೆಂಡತಿಯಾಗಿ ತೆಗೆದುಕೊಳ್ಳುವುದಕ್ಕಾಗಿ ನಮ್ಮನ್ನು ನಿನ್ನ ಬಳಿಗೆ ಕಳುಹಿಸಿದನು,” ಎಂದು ಹೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಸಮುಯೇಲ 25:40
5 ತಿಳಿವುಗಳ ಹೋಲಿಕೆ  

ರೆಬೆಕ್ಕಳನ್ನು ನಿನ್ನ ವಶಕ್ಕೆ ಕೊಡುತ್ತೇವೆ; ಕರೆದುಕೊಂಡು ಹೋಗಬಹುದು; ಯೆಹೋವನು ಹೇಳಿದಂತೆಯೇ ಆಕೆ ನಿನ್ನ ದಣಿಯ ಮಗನಿಗೆ ಹೆಂಡತಿಯಾಗಲಿ ಅಂದರು.


ನಾಬಾಲನು ಸತ್ತನೆಂಬ ವರ್ತಮಾನವನ್ನು ದಾವೀದನು ಕೇಳಿ - ನನಗೆ ಅಪಮಾನ ಮಾಡಿದ ನಾಬಾಲನಿಗೆ ಮುಯ್ಯಿತೀರಿಸಿದಂಥ ಯೆಹೋವನಿಗೆ ಸ್ತೋತ್ರವಾಗಲಿ. ಆತನು ನನ್ನನ್ನು ಕೆಟ್ಟತನಕ್ಕೆ ದೂರಮಾಡಿ ನಾಬಾಲನ ಕೆಟ್ಟತನವನ್ನು ಅವನ ತಲೆಯ ಮೇಲೆಯೇ ಹೊರಿಸಿದನಲ್ಲಾ ಅಂದನು. ಅನಂತರ ಅವನು ಅಬೀಗೈಲಳು ತನಗೆ ಹೆಂಡತಿಯಾಗಬೇಕೆಂದು ದೂತರನ್ನು ಕಳುಹಿಸಿದನು;


ಆಕೆ ಎದ್ದು ನಮಸ್ಕಾರಮಾಡಿ ಮಾತಾಡಿಸಿದವನಿಗೆ - ನಿನ್ನ ದಾಸಿಯಾದ ನಾನು ನನ್ನ ಸ್ವಾವಿುಯ ಸೇವಕರ ಪಾದಗಳನ್ನು ತೊಳೆಯುವ ಸೇವಕಿಯಾಗುವದಕ್ಕೆ ಸಿದ್ಧಳಾಗಿದ್ದೇನೆ ಎಂದು ಉತ್ತರಕೊಟ್ಟು


ದಯಾಳುವಾದ ಹೆಂಗಸು ಮಾನವನ್ನು ಪಡೆಯುವಳು; ಬಲಾತ್ಕಾರಿಗಳು ಧನವನ್ನು ಮಾತ್ರ ಆರ್ಜಿಸುವರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು