Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಸಮುಯೇಲ 2:31 - ಕನ್ನಡ ಸತ್ಯವೇದವು J.V. (BSI)

31 ನಾನು ನಿನ್ನ ಮತ್ತು ನಿನ್ನ ಮನೆಯವರ ಬಾಹುಬಲವನ್ನು ಮುರಿಯುವ ದಿನಗಳು ಬರುವವು. ನಿನ್ನ ಮನೆಯಲ್ಲಿ ಯಾರೂ ಪೂರ್ಣಾಯುಷ್ಯವನ್ನು ಮುಟ್ಟುವದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

31 ಇಗೋ, ನಾನು ನಿನ್ನ ಮತ್ತು ನಿನ್ನ ಮನೆಯವರ ಭುಜಬಲವನ್ನು ಮುರಿಯುವ ದಿನಗಳು ಬರುವವು. ನಿನ್ನ ಮನೆಯಲ್ಲಿ ಯಾರೂ ಪೂರ್ಣಾಯುಷ್ಯವನ್ನು ಮುಟ್ಟುವುದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

31 ನಿನ್ನ ಮತ್ತು ನಿನ್ನ ಮನೆಯವರ ಭುಜಬಲವನ್ನು ಮುರಿಯುವ ದಿನಗಳು ಬರಲಿವೆ. ನಿನ್ನ ಮನೆಯಲ್ಲಿ ಯಾರೂ ಪೂರ್ಣಾಯುಷ್ಯವನ್ನು ಮುಟ್ಟುವುದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

31 ನಿನ್ನ ಸಂತತಿಯವರನ್ನೆಲ್ಲಾ ನಾಶಮಾಡುವ ಕಾಲವು ಬರುತ್ತಿದೆ. ನಿನ್ನ ಮನೆಯಲ್ಲಿ ಯಾರೂ ವೃದ್ಧಾಪ್ಯದವರೆಗೆ ಬದುಕುವುದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

31 ನಿನ್ನ ಮನೆಯಲ್ಲಿ ಯಾರೂ ಪೂರ್ಣಾಯುಷ್ಯವನ್ನು ಮುಟ್ಟದಹಾಗೆ, ನಿನ್ನ ತೋಳನ್ನೂ ನಿನ್ನ ತಂದೆಯ ಮನೆಯವರ ತೋಳನ್ನೂ ನಾನು ಛೇದಿಸುವ ದಿನಗಳು ಬರುವುವು.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಸಮುಯೇಲ 2:31
11 ತಿಳಿವುಗಳ ಹೋಲಿಕೆ  

ಇಸ್ರಾಯೇಲ್ಯರು ನನ್ನನ್ನು ತೊರೆದಾಗ ನನ್ನಿಂದಗಲಿ ತಮ್ಮ ಬೊಂಬೆಗಳ ಕಡೆಗೆ ತಿರುಗಿಕೊಂಡು ನನಗೆ ದೂರವಾಗಿ ಹೋದ ಲೇವಿಯರು ತಮ್ಮ ದೋಷಫಲವನ್ನು ಅನುಭವಿಸುವರು.


ದುಷ್ಟರ ತೋಳುಗಳು ಮುರಿದುಹೋಗುವವು; ನೀತಿವಂತರನ್ನು ಯೆಹೋವನೇ ಉದ್ಧರಿಸುವನು.


ನೀನು ವಿಧವೆಯರನ್ನು ಬರಿಗೈಯಾಗಿ ಕಳುಹಿಸಿಬಿಟ್ಟು, ಅನಾಥರ ಕೈಗಳನ್ನು ಮುರಿದಿದ್ದೀ.


ಅರಸನು ಯೋವಾಬನಿಗೆ ಬದಲಾಗಿ ಯೆಹೋಯಾದಾವನ ಮಗನಾದ ಬೆನಾಯನನ್ನು ಸೈನ್ಯಾಧಿಪತಿಯನ್ನಾಗಿಯೂ ಎಬ್ಯಾತಾರನಿಗೆ ಬದಲಾಗಿ ಚಾದೋಕನನ್ನು ಯಾಜಕನನ್ನಾಗಿಯೂ ನೇವಿುಸಿದನು.


ಏಫೋದನ್ನು ಧರಿಸಿಕೊಂಡಿದ್ದ ಅಹೀಯನೂ ಇದ್ದರು. ಈ ಅಹೀಯನು ಶೀಲೋವಿನಲ್ಲಿ ಯೆಹೋವನ ಯಾಜಕನಾಗಿದ್ದ ಏಲಿಯ ಮರಿ ಮಗನೂ ಫೀನೆಹಾಸನ ಮೊಮ್ಮಗನೂ ಈಕಾಬೋದನ ಅಣ್ಣನಾದ ಅಹೀಟೂಬನ ಮಗನೂ ಆಗಿದ್ದನು. ಯೋನಾತಾನನು ಹೋದದ್ದು ಜನರಿಗೂ ಗೊತ್ತಿರಲಿಲ್ಲ.


ಇವರು ಇಸ್ರಾಯೇಲ್ಯರಿಗೆ ಎದುರಾಗಿ ವ್ಯೂಹಕಟ್ಟಿ ಯುದ್ಧಮಾಡಲು ಇಸ್ರಾಯೇಲ್ಯರು ಸೋತರು; ಫಿಲಿಷ್ಟಿಯರು ರಣರಂಗದಲ್ಲಿ ಸುಮಾರು ನಾಲ್ಕು ಸಾವಿರ ಮಂದಿ ಇಸ್ರಾಯೇಲ್ಯರನ್ನು ಸಂಹರಿಸಿದರು.


ಏಲಿಯ ಮನೆಯನ್ನು ಕುರಿತು ತಿಳಿಸಿದ್ದೆಲ್ಲವನ್ನೂ ಆ ದಿನದಲ್ಲಿ ತಪ್ಪದೆ ನೆರವೇರಿಸುವೆನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು