1 ಸಮುಯೇಲ 18:22 - ಕನ್ನಡ ಸತ್ಯವೇದವು J.V. (BSI)22 ಅವನು ತನ್ನ ಸೇವಕರಿಗೆ - ನೀವು ದಾವೀದನಿಗೆ ಗುಪ್ತವಾಗಿ - ಅರಸನು ನಿನಗೆ ಒಲಿಯುತ್ತಾನೆ; ಅವನ ಎಲ್ಲಾ ಸೇವಕರು ನಿನ್ನನ್ನು ಪ್ರೀತಿಸುತ್ತಾರೆ; ನೀನು ಅರಸನ ಅಳಿಯನಾಗು ಎಂದು ಪುಸಲಾಯಿಸಿರಿ ಅಂದನು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201922 ಅವನು ತನ್ನ ಸೇವಕರಿಗೆ, “ನೀವು ದಾವೀದನಿಗೆ ಗುಪ್ತವಾಗಿ, ‘ಅರಸನಿಗೆ ನಿನ್ನನ್ನು ಒಲಿಯುತ್ತಾನೆ, ಅವನ ಸೇವಕರು ನಿನ್ನನ್ನು ಪ್ರೀತಿಸುತ್ತಾರೆ. ನೀನು ಅರಸನ ಅಳಿಯನಾಗು’ ಎಂದು ಹೇಳಿರಿ” ಅಂದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)22 ಅಲ್ಲದೆ ತನ್ನ ಸೈನಿಕರಿಗೆ, "ನೀವು ದಾವೀದನಿಗೆ, 'ಅರಸರು ನಿಮ್ಮನ್ನು ಮೆಚ್ಚಿಕೊಂಡಿದ್ದಾರೆ; ಅವರ ಎಲ್ಲ ಸೇವಕರಿಗೂ ನಿಮ್ಮ ಮೇಲೆ ಪ್ರೀತಿಯಿದೆ; ನೀವು ಅರಸರ ಅಳಿಯರಾಗಲೇಬೇಕು,” ಎಂದು ಪುಸಲಾಯಿಸಿರಿ,” ಎಂದು ಗುಟ್ಟಾಗಿ ತಿಳಿಸಿದನು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್22 ಸೌಲನು ತನ್ನ ಅಧಿಕಾರಿಗಳಿಗೆ ಅಪ್ಪಣೆ ಮಾಡಿದನು. ಸೌಲನು ಅವರಿಗೆ, “ದಾವೀದನೊಂದಿಗೆ ಪ್ರತ್ಯೇಕವಾಗಿ ಮಾತನಾಡಿ. ‘ರಾಜನು ನಿನ್ನನ್ನು ಇಷ್ಟಪಟ್ಟಿದ್ದಾನೆ. ಅವನ ಅಧಿಕಾರಿಗಳೂ ನಿನ್ನನ್ನು ಇಷ್ಟಪಡುತ್ತಾರೆ. ನೀನು ಅವನ ಮಗಳನ್ನು ಮದುವೆಯಾಗಬೇಕು’ ಎಂದು ಹೇಳಿರಿ” ಎಂಬುದಾಗಿ ತಿಳಿಸಿದನು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ22 ಸೌಲನು ತನ್ನ ಸೇವಕರಿಗೆ, “ನೀವು ದಾವೀದನ ಸಂಗಡ ಅಂತರಂಗವಾಗಿ ಮಾತನಾಡಿ, ಇಗೋ, ಅರಸನು ನಿನ್ನ ಮೇಲೆ ಪ್ರೀತಿಯುಳ್ಳವನಾಗಿದ್ದಾನೆ; ಈಗ ನೀನು ಅರಸನಿಗೆ ಅಳಿಯನಾಗೆಂದು, ಹೇಳಿರಿ,” ಎಂದು ಆಜ್ಞಾಪಿಸಿದನು. ಅಧ್ಯಾಯವನ್ನು ನೋಡಿ |