Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಸಮುಯೇಲ 17:55 - ಕನ್ನಡ ಸತ್ಯವೇದವು J.V. (BSI)

55 ದಾವೀದನು ಫಿಲಿಷ್ಟಿಯನೊಡನೆ ಯುದ್ಧಮಾಡುವದಕ್ಕೆ ಹೊರಟದ್ದನ್ನು ಸೌಲನು ಕಂಡು ತನ್ನ ಸೇನಾಪತಿಯಾದ ಅಬ್ನೇರನನ್ನು - ಅಬ್ನೇರನೇ, ಈ ಹುಡುಗನು ಯಾರ ಮಗನು ಎಂದು ಕೇಳಿದ್ದಕ್ಕೆ ಅವನು ಸೌಲನಿಗೆ - ಅರಸನೇ, ನಿನ್ನ ಜೀವದಾಣೆ ನನಗೆ ಗೊತ್ತಿಲ್ಲ ಎಂದು ಉತ್ತರಕೊಟ್ಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

55 ದಾವೀದನು ಫಿಲಿಷ್ಟಿಯರೊಡನೆ ಯುದ್ಧಮಾಡುವುದಕ್ಕೆ ಹೊರಟದ್ದನ್ನು ಸೌಲನು ಕಂಡು ತನ್ನ ಸೇನಾಪತಿಯಾದ ಅಬ್ನೇರನನ್ನು, “ಅಬ್ನೇರನೇ ಈ ಹುಡುಗನು ಯಾರ ಮಗನು?” ಎಂದು ಕೇಳಿದ್ದಕ್ಕೆ ಅವನು ಸೌಲನಿಗೆ, “ಅರಸನೇ ನಿನ್ನ ಜೀವದಾಣೆ ನನಗೆ ಗೊತ್ತಿಲ್ಲ” ಎಂದು ಉತ್ತರಕೊಟ್ಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

55 ದಾವೀದನು ಆ ಫಿಲಿಷ್ಟಿಯನೊಡನೆ ಯುದ್ಧಮಾಡಲು ಹೊರಟಿದ್ದನ್ನು ಸೌಲನು ನೋಡಿದನು. ತನ್ನ ಸೇನಾಪತಿಯಾದ ಅಬ್ನೇರನನ್ನು ಉದ್ದೇಶಿಸಿ, “ಅಬ್ನೇರನೇ, ಈ ತರುಣ ಯಾರ ಮಗ?” ಎಂದು ವಿಚಾರಿಸಿದನು. ಅದಕ್ಕೆ ಅಬ್ನೇರನು, “ಅರಸರೇ, ತಮ್ಮ ಜೀವದಾಣೆ, ನನಗೆ ಗೊತ್ತಿಲ್ಲ,” ಎಂದು ಉತ್ತರಕೊಟ್ಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

55 ದಾವೀದನು ಗೊಲ್ಯಾತನೊಂದಿಗೆ ಯುದ್ಧಕ್ಕೆ ಹೊರಟಿದ್ದನ್ನು ಸೌಲನು ಗಮನಿಸುತ್ತಿದ್ದನು. ಸೌಲನು ತನ್ನ ಸೇನಾಧಿಪತಿಯಾದ ಅಬ್ನೇರನನ್ನು, “ಆ ಯುವಕನ ತಂದೆ ಯಾರು?” ಎಂದು ಪ್ರಶ್ನಿಸಿದನು. ಅಬ್ನೇರನು, “ಅರಸನೇ, ನಿನ್ನ ಜೀವದಾಣೆ, ಅವನು ಯಾರೋ ನನಗೆ ಗೊತ್ತಿಲ್ಲ” ಎಂದು ಉತ್ತರಕೊಟ್ಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

55 ದಾವೀದನು ಫಿಲಿಷ್ಟಿಯನಿಗೆ ಎದುರಾಗಿ ಹೊರಟು ಹೋಗುವುದನ್ನು ಸೌಲನು ಕಂಡಾಗ, ತನ್ನ ಸೈನ್ಯಾಧಿಪತಿಯಾದ ಅಬ್ನೇರನಿಗೆ, “ಅಬ್ನೇರನೇ, ಈ ಯುವಕನು ಯಾರ ಮಗನು?” ಎಂದನು. ಅದಕ್ಕೆ ಅಬ್ನೇರನು, “ಅರಸನೇ, ನಿನ್ನ ಪ್ರಾಣದಾಣೆ ನಾನರಿಯೆ,” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಸಮುಯೇಲ 17:55
9 ತಿಳಿವುಗಳ ಹೋಲಿಕೆ  

ಸೌಲನು ಅವನನ್ನು - ಹುಡುಗನೇ, ನೀನು ಯಾರ ಮಗನೆಂದು ಕೇಳಿದ್ದಕ್ಕೆ ಅವನು - ನಾನು ಬೇತ್ಲೆಹೇವಿುನವನೂ ನಿನ್ನ ಸೇವಕನೂ ಆದ ಇಷಯನ ಮಗನು ಎಂದು ಉತ್ತರಕೊಟ್ಟನು.


ಅದು ಹೌದೋ ಅಲ್ಲವೋ ಗೊತ್ತಾಗುವದಕ್ಕಾಗಿ ನಿಮ್ಮ ತಮ್ಮನು ಬರಬೇಕು; ಅವನು ಬಂದ ಹೊರತು ಫರೋಹನ ಜೀವದಾಣೆ ನೀವು ಇಲ್ಲಿಂದ ಹೊರಟು ಹೋಗಕೂಡದು.


ಅವನು ಕೆಂಬಣ್ಣದವನೂ ಸುಂದರನೇತ್ರನೂ ನೋಟಕ್ಕೆ ರಮಣೀಯನೂ ಆಗಿದ್ದನು. ಯೆಹೋವನು ಸಮುವೇಲನಿಗೆ - ಎದ್ದು ಇವನನ್ನು ಅಭಿಷೇಕಿಸು; ನಾನು ಆರಿಸಿಕೊಂಡವನು ಇವನೇ ಎಂದು ಆಜ್ಞಾಪಿಸಲು


ದಾವೀದನು ಆ ಫಿಲಿಷ್ಟಿಯನ ತಲೆಯನ್ನು ಯೆರೂಸಲೇವಿುಗೆ ಒಯ್ದನು; ಅವನ ಆಯುಧಗಳನ್ನು ತನ್ನ ಗುಡಾರದಲ್ಲಿಟ್ಟುಕೊಂಡನು.


ಆಗ ಅರಸನು ಅವನಿಗೆ - ಆ ಪ್ರಾಯಸ್ಥನು ಯಾರ ಮಗನೆಂದು ವಿಚಾರಿಸು ಎಂದು ಆಜ್ಞಾಪಿಸಿದನು.


ಅನಂತರ ತಾನಾಗಿಯೇ ಸೌಲನ ಪಾಳೆಯದ ಹತ್ತಿರ ಹೋಗಿ ಸೌಲನೂ ನೇರನ ಮಗನಾದ ಅವನ ಸೇನಾಪತಿ ಅಬ್ನೇರನೂ ಮಲಗಿದ್ದ ಸ್ಥಳಗಳನ್ನು ಕಂಡುಹಿಡಿದನು. ಸೌಲನು ಬಂಡಿಗಳನ್ನು ಬಿಟ್ಟಿರುವ ಸ್ಥಳಮಧ್ಯದಲ್ಲಿ ಮಲಗಿದ್ದನು; ಅವನ ಸುತ್ತಲೂ ಸೈನಿಕರು ಇದ್ದರು.


ಹನ್ನಳು ಏಲಿಗೆ - ಸ್ವಾಮೀ, ನಿನ್ನ ಜೀವದಾಣೆ; ಮೊದಲು ಯೆಹೋವನ ಸನ್ನಿಧಿಯಲ್ಲಿ ಪ್ರಾರ್ಥನೆಮಾಡುತ್ತಾ ಇಲ್ಲಿ ನಿನ್ನ ಹತ್ತಿರ ನಿಂತಿದ್ದ ಸ್ತ್ರೀಯು ನಾನೇ.


ಅಹೀಮಾಚನ ಮಗಳಾದ ಅಹೀನೋವಮಳು ಅವನ ಹೆಂಡತಿ; ನೇರನ ಮಗನಾದ ಅಬ್ನೇರನು ಅವನ ಸೇನಾಪತಿಯು; ನೇರನು ಸೌಲನ ಚಿಕ್ಕಪ್ಪನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು