Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಸಮುಯೇಲ 17:28 - ಕನ್ನಡ ಸತ್ಯವೇದವು J.V. (BSI)

28 ದಾವೀದನು ಜನರ ಸಂಗಡ ಹೀಗೆ ಮಾತಾಡುತ್ತಿರುವದನ್ನು ಅವನ ಹಿರೀ ಅಣ್ಣನಾದ ಎಲೀಯಾಬನು ಕೇಳಿ ಕೋಪಗೊಂಡು - ನೀನು ಇಲ್ಲಿಗೆ ಬಂದದ್ದೇಕೆ? ಅಡವಿಯಲ್ಲಿರುವ ನಾಲ್ಕಾರು ಕುರಿಗಳನ್ನು ಯಾರಿಗೊಪ್ಪಿಸಿ ಬಂದಿ? ನಿನ್ನ ಸೊಕ್ಕೂ ತುಂಟತನವೂ ನನಗೆ ಗೊತ್ತದೆ; ನೀನು ಯುದ್ಧವನ್ನು ನೋಡುವದಕ್ಕೆ ಬಂದಿದ್ದೀ ಎಂದು ಅವನನ್ನು ಗದರಿಸಲು

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

28 ದಾವೀದನು ಜನರ ಸಂಗಡ ಹೀಗೆ ಮಾತನಾಡುತ್ತಿರುವುದನ್ನು ಅವನ ಹಿರಿಯ ಅಣ್ಣನಾದ ಎಲೀಯಾಬನು ಕೇಳಿ ಕೋಪಗೊಂಡು, “ನೀನು ಇಲ್ಲಿಗೆ ಬಂದದ್ದೇಕೆ? ಅಡವಿಯಲ್ಲಿರುವ ನಾಲ್ಕಾರು ಕುರಿಗಳನ್ನು ಯಾರಿಗೊಪ್ಪಿಸಿ ಬಂದಿರುವೆ. ನಿನ್ನ ಸೊಕ್ಕು, ತುಂಟತನವು ನನಗೆ ಗೊತ್ತಿದೆ. ನೀನು ಯುದ್ಧವನ್ನು ನೋಡುವುದಕ್ಕೆ ಬಂದಿದ್ದೀ” ಎಂದು ಅವನನ್ನು ಗದರಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

28 ದಾವೀದನು ಜನರ ಸಂಗಡ ಹೀಗೆ ಮಾತಾಡುವುದನ್ನು ಅವನ ಹಿರಿಯ ಅಣ್ಣ ಎಲೀಯಾಬನು ಕೇಳಿದನು. ದಾವೀದನ ಮೇಲೆ ಅವನು ಸಿಟ್ಟುಗೊಂಡು, “ನೀನು ಇಲ್ಲಿಗೆ ಬಂದುದೇಕೆ? ಅಡವಿಯಲ್ಲಿರುವ ನಾಲ್ಕಾರು ಕುರಿಗಳನ್ನು ಯಾರಿಗೊಪ್ಪಿಸಿ ಬಂದೆ? ನಿನ್ನ ಸೊಕ್ಕು, ತುಂಟತನ ನನಗೆ ಗೊತ್ತಿದೆ. ನೀನು ಕದನ-ಕುಚೇಷ್ಟೆ ನೋಡಬಂದಿರುವೆಯಷ್ಟೇ,” ಎಂದು ಗದರಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

28 ದಾವೀದನು ಸೈನಿಕರೊಡನೆ ಮಾತಾಡುತ್ತಿರುವುದನ್ನು ಅವನ ಹಿರಿಯ ಅಣ್ಣ ಎಲೀಯಾಬನು ಕೇಳಿಸಿಕೊಂಡನು. ಎಲೀಯಾಬನು ದಾವೀದನ ಮೇಲೆ ಕೋಪಗೊಂಡು ಅವನಿಗೆ, “ನೀನು ಇಲ್ಲಿಗೆ ಬಂದದ್ದೇಕೆ? ಅಲ್ಲಿದ್ದ ಕೆಲವು ಕುರಿಗಳನ್ನು ಯಾರ ಬಳಿ ಬಿಟ್ಟಿರುವೆ? ನೀನು ಇಲ್ಲಿಗೆ ಏಕೆ ಬಂದಿರುವೆಯೆಂಬುದು ನನಗೆ ಗೊತ್ತು. ನಿನಗೆ ಹೇಳಿದ್ದನ್ನು ನೀನು ಮಾಡುವುದಿಲ್ಲ. ನೀನು ಕೇವಲ ಯುದ್ಧವನ್ನು ನೋಡುವುದಕ್ಕಾಗಿಯೇ ಇಲ್ಲಿಗೆ ಬಂದಿರುವೆ” ಎಂದು ಗದರಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

28 ದಾವೀದನು ಆ ಮನುಷ್ಯರ ಸಂಗಡ ಮಾತನಾಡುತ್ತಿರುವುದನ್ನು ಅವನ ಹಿರಿಯ ಸಹೋದರನಾದ ಎಲೀಯಾಬನು ಕೇಳಿ, ಅವನ ಮೇಲೆ ಕೋಪಗೊಂಡು, “ನೀನು ಇಲ್ಲಿಗೆ ಬಂದದ್ದೇನು? ಅಡವಿಯಲ್ಲಿರುವ ಆ ಸ್ವಲ್ಪ ಕುರಿಗಳನ್ನು ಯಾರ ವಶಕ್ಕೆ ಒಪ್ಪಿಸಿ ಬಂದೆ? ನಿನ್ನ ಗರ್ವವನ್ನೂ, ನಿನ್ನ ಹೃದಯದ ಅಹಂಕಾರವನ್ನೂ ನಾನು ಬಲ್ಲೆನು. ಏಕೆಂದರೆ ಯುದ್ಧವನ್ನು ನೋಡಲು ಇಳಿದು ಬಂದಿದ್ದೀ,” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಸಮುಯೇಲ 17:28
15 ತಿಳಿವುಗಳ ಹೋಲಿಕೆ  

ಹೀಗೆ ಒಬ್ಬ ಮನುಷ್ಯನಿಗೆ ಅವನ ಮನೆಯವರೇ ವೈರಿಗಳಾಗುವರು.


ಅನ್ಯಾಯಹೊಂದಿದ ಸಹೋದರನು ಬಲವಾದ ಪಟ್ಟಣಕ್ಕಿಂತಲೂ ಅಸಾಧ್ಯ; ಕೋಟೆಯ ಅಗುಳಿಗಳಂತೆ ಜಗಳಗಳು ಜನರನ್ನು ಅಗಲಿಸುತ್ತವೆ.


ಯೋಸೇಫನ ಅಣ್ಣಂದಿರು ಅವನ ಮೇಲೆ ಹೊಟ್ಟೆಕಿಚ್ಚುಪಟ್ಟರು; ಆದರೆ ಅವನ ತಂದೆಯು ಅವನ ಮಾತನ್ನು ಮನಸ್ಸಿನಲ್ಲಿಟ್ಟುಕೊಂಡನು.


ಅದಕ್ಕೆ ಅವನ ಅಣ್ಣಂದಿರು - ನೀನು ನಿಜವಾಗಿ ನಮ್ಮನ್ನು ಆಳುವಿಯಾ? ನೀನು ನಮ್ಮ ಮೇಲೆ ದೊರೆತನಮಾಡುವಿಯಾ ಎಂದು ಅವನಿಗೆ ಹೇಳಿ ಅವನ ಕನಸುಗಳಿಗಾಗಿಯೂ ಮಾತುಗಳಿಗಾಗಿಯೂ ಮತ್ತಷ್ಟು ಹಗೆಮಾಡಿದರು.


ಅವನ ಅಣ್ಣತಮ್ಮಂದಿರು - ನಮ್ಮ ತಂದೆ ತನ್ನ ಎಲ್ಲಾ ಮಕ್ಕಳಿಗಿಂತಲೂ ಇವನನ್ನೇ ಹೆಚ್ಚಾಗಿ ಪ್ರೀತಿಸುತ್ತಾನೆಂದು ನೋಡಿ ಯೋಸೇಫನನ್ನು ಹಗೆಮಾಡಿ ಅವನೊಡನೆ ಸ್ನೇಹಭಾವದಿಂದ ಮಾತಾಡಲಾರದೆ ಹೋದರು.


ಇದನ್ನು ಕೇಳಿ ಆತನ ಬಂಧುಗಳು ಅವನಿಗೆ ಹುಚ್ಚುಹಿಡಿದದೆ ಎಂದು ಹೇಳಿ ಆತನನ್ನು ಹಿಡಿಯುವದಕ್ಕೆ ಹೊರಟರು.


ಆದರೆ ಈ ಜನರು ತಮಗೆ ಗೊತ್ತಿಲ್ಲದ ಎಲ್ಲವನ್ನೂ ದೂಷಿಸುತ್ತಾರೆ, ಮತ್ತು ತಾವು ವಿವೇಕಶೂನ್ಯಪಶುಗಳಂತೆ ಸ್ವಾಭಾವಿಕವಾಗಿ ಯಾವವುಗಳನ್ನು ತಿಳಿದುಕೊಳ್ಳುತ್ತಾರೋ ಅವುಗಳಲ್ಲಿ ತಮ್ಮನ್ನು ಕೆಡಿಸಿಕೊಳ್ಳುತ್ತಾರೆ.


ಮತ್ತು ಸಮಸ್ತಪ್ರಯಾಸವನ್ನೂ ಕೈಗೂಡುವ ಸಕಲ ಕಾರ್ಯವನ್ನೂ ನೋಡಿ ಇವು ಪರಸ್ಪರ ಮತ್ಸರಕ್ಕೆ ಆಸ್ಪದವೆಂದು ಗ್ರಹಿಸಿಕೊಂಡೆನು. ಇದೂ ಗಾಳಿಯನ್ನು ಹಿಂದಟ್ಟಿದ ಹಾಗೆ ವ್ಯರ್ಥ.


ಕೋಪವು ಕ್ರೂರ, ಕ್ರೋಧವು ಪ್ರವಾಹ; ಮಾತ್ಸರ್ಯಕ್ಕೆ ಎದುರಾಗಿ ಯಾರು ನಿಂತಾರು?


ನ್ಯಾಯವಿರುದ್ಧಸಾಕ್ಷಿಗಳು ನನಗೆ ವಿರೋಧವಾಗಿ ಎದ್ದಿದ್ದಾರೆ; ನಾನರಿಯದ ಸಂಗತಿಗಳ ವಿಷಯದಲ್ಲಿ ನನ್ನನ್ನು ವಿಚಾರಿಸುತ್ತಾರೆ.


ಸಮುವೇಲನು ಎಣ್ಣೆಯ ಕೊಂಬನ್ನು ತೆಗೆದುಕೊಂಡು ಅವನನ್ನು ಅವನ ಸಹೋದರರ ಮಧ್ಯದಲ್ಲೇ ಅಭಿಷೇಕಿಸಿದನು. ಕೂಡಲೆ ಯೆಹೋವನ ಆತ್ಮವು ದಾವೀದನ ಮೇಲೆ ಬಂದು ನೆಲೆಗೊಂಡಿತು. ಅನಂತರ ಸಮುವೇಲನು ರಾಮಕ್ಕೆ ಹೊರಟು ಹೋದನು.


ಆದರೆ ಯೆಹೋವನು ಸಮುವೇಲನಿಗೆ - ನೀನು ಅವನ ಚೆಲುವಿಕೆಯನ್ನೂ ನೀಳವನ್ನೂ ನೋಡಬೇಡ; ನಾನು ಅವನನ್ನು ತಳ್ಳಿಬಿಟ್ಟಿದ್ದೇನೆ. ಯೆಹೋವನು ಮನುಷ್ಯರಂತೆ ಹೊರಗಿನ ತೋರಿಕೆಯನ್ನು ನೋಡದೆ ಹೃದಯವನ್ನೇ ನೋಡುವವನಾಗಿದ್ದಾನೆ ಅಂದನು.


ದಾವೀದನು - ನಾನೇನು ತಪ್ಪು ಮಾಡಿದೆನು? ಬರೀ ಮಾತಾಡಿದೆನಷ್ಟೆ ಎಂದು ಹೇಳಿ ಅವನನ್ನು ಬಿಟ್ಟು ಬೇರೆ ಕಡೆಗೆ ಹೋಗಿ


ರೆಹಬ್ಬಾಮನು ದಾವೀದನ ಮಗನಾದ ಯೆರೀಮೋತನಿಗೆ ಇಷಯನ ಮೊಮ್ಮಗಳೂ ಎಲೀಯಾಬನ ಮಗಳೂ ಆದ ಅಬೀಹೈಲಳಲ್ಲಿ ಹುಟ್ಟಿದ ಮಹ್ಲತ್ ಎಂಬಾಕೆಯನ್ನು ಹೆಂಡತಿಯನ್ನಾಗಿ ತೆಗೆದುಕೊಂಡನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು