Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಸಮುಯೇಲ 14:38 - ಕನ್ನಡ ಸತ್ಯವೇದವು J.V. (BSI)

38 ಆಗ ಸೌಲನು ಪ್ರಜೆಯ ಮುಖಂಡರಿಗೆ - ನೀವೆಲ್ಲರೂ ಇಲ್ಲಿ ಬಂದು ಈ ಹೊತ್ತು ಪಾಪ ಯಾವದರಿಂದುಂಟಾಯಿತೋ ವಿಚಾರಿಸಿ ಗೊತ್ತುಮಾಡಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

38 ಆಗ ಸೌಲನು ಪ್ರಜೆಗಳ ಮುಖಂಡರಿಗೆ, “ನೀವೆಲ್ಲರೂ ಇಲ್ಲಿ ಬಂದು, ಈ ಹೊತ್ತು ಪಾಪ ಯಾವುದರಿಂದ ಉಂಟಾಯಿತು ಎಂದು ವಿಚಾರಿಸಿ ಗೊತ್ತುಮಾಡಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

38 ಆಗ ಸೌಲನು ಜನರ ಮುಖಂಡರಿಗೆ, “ನೀವೆಲ್ಲರೂ ಇಲ್ಲಿಗೆ ಬಂದು, ಈ ದಿನ ಎಲ್ಲಿ ಪಾಪಕೃತ್ಯ ನಡೆದಿದೆ ಎಂದು ವಿಚಾರಿಸಿ ಗುರುತು ಹಚ್ಚಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

38 ಸೌಲನು, “ಎಲ್ಲಾ ನಾಯಕರನ್ನೂ ನನ್ನ ಹತ್ತಿರಕ್ಕೆ ಕರೆದು ತನ್ನಿ. ಈ ದಿನ ಯಾರು ಪಾಪಮಾಡಿದ್ದಾರೆಂಬುದನ್ನು ಗುರುತಿಸೋಣ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

38 ಆಗ ಸೌಲನು, “ಜನರ ಎಲ್ಲಾ ಮುಖ್ಯಸ್ಥರೇ, ಇಲ್ಲಿ ಬನ್ನಿರಿ. ಈ ಹೊತ್ತು ಈ ಪಾಪ ಯಾವುದರಿಂದ ಉಂಟಾಯಿತೆಂದು ತಿಳಿದುಕೊಂಡು ನೋಡಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಸಮುಯೇಲ 14:38
11 ತಿಳಿವುಗಳ ಹೋಲಿಕೆ  

ಆ ವಂಶದಿಂದ ಮೂಲೆಗಲ್ಲು, ಆ ವಂಶದಿಂದ ಮೊಳೆ, ಆ ವಂಶದಿಂದ ಯುದ್ಧದ ಬಿಲ್ಲು, ಅಂತು ಆ ವಂಶದೊಳಗಿಂದ ಸಕಲ ಅಧಿಕಾರಿಗಳು ಉಂಟಾಗುವರು.


ಜನಾಂಗಗಳಲ್ಲಿ ಶ್ರೇಷ್ಠರಾದವರು ಅಬ್ರಹಾಮನ ದೇವರ ಪ್ರಜೆಯಾಗಿರುವದಕ್ಕೆ ಕೂಡಿಬರುತ್ತಾರೆ; ಯಾಕಂದರೆ ಭೂಪಾಲಕರೆಲ್ಲಾ ದೇವರಿಗೇ ಅಧೀನರಾಗಿದ್ದಾರೆ. ಆತನೇ ಸರ್ವೋನ್ನತನು.


ಆಗ ಸೈನ್ಯದವರು ಅವನಿಗೆ - ನೀನು ಬರಬಾರದು; ನಾವು ಸೋತು ಓಡಿ ಹೋದರೆ ಶತ್ರುಗಳು ಲಕ್ಷಿಸುವದಿಲ್ಲ; ನಮ್ಮಲ್ಲಿ ಅರ್ಧ ಜನರು ಸತ್ತರೂ ಅದು ಅವರಿಗೆ ದೊಡ್ಡ ಲಾಭವಲ್ಲ. ನಮ್ಮಂಥ ಹತ್ತು ಸಾವಿರ ಜನರ ಬೆಲೆ ನಿನ್ನೊಬ್ಬನಿಗೇ ಉಂಟು. ನೀನು ಊರಲ್ಲಿದ್ದುಕೊಂಡು ಅಲ್ಲಿಂದಲೇ ನಮಗೆ ಬೇಕಾದ ಸಹಾಯ ಮಾಡಬಹುದು ಅಂದರು.


ಆ ದೇವಪ್ರಜಾಸಭೆಯಲ್ಲಿ ಎಲ್ಲಾ ಕುಲಾಧಿಪತಿಗಳೂ ಯುದ್ಧಸನ್ನದ್ಧರಾದ ನಾಲ್ಕು ಲಕ್ಷ ಕಾಲಾಳುಗಳೂ ಇದ್ದರು.


ಇಸ್ರಾಯೇಲ್ಯರು ನನ್ನ ನಿಬಂಧನೆಯನ್ನು ಮೀರಿ ಪಾಪಿಷ್ಠರಾಗಿದ್ದಾರೆ. ಮೀಸಲಾದ ವಸ್ತುಗಳನ್ನು ತೆಗೆದುಕೊಂಡು ಕಳ್ಳರಾಗಿ ತಮ್ಮ ಸಾಮಾನುಗಳಲ್ಲಿ ಅಡಗಿಸಿಟ್ಟು ವಂಚಕರಾದರು.


ಒಬ್ಬಾತನನ್ನು ನೋಡುತ್ತಿದ್ದೇನೆ, ಆತನು ಈಗಿನವನಲ್ಲ; ಆತನು ಕಾಣಿಸುತ್ತಾನೆ, ಆದರೆ ಸಮೀಪದಲ್ಲಿ ಅಲ್ಲ. ಯಾಕೋಬವಂಶದವರಲ್ಲಿ ನಕ್ಷತ್ರಪ್ರಾಯನೊಬ್ಬನು ಉದಯಿಸಿದ್ದಾನೆ; ಇಸ್ರಾಯೇಲ್ಯರಲ್ಲಿ ರಾಜದಂಡ ಹಿಡಿದವನು ಕಂಡುಬಂದಿದ್ದಾನೆ. ಅವನು ಮೋವಾಬ್ಯರ ತಲೆಯನ್ನು ಸೀಳಿಹಾಕಿದ್ದಾನೆ; ಯುದ್ಧವೀರರೆಲ್ಲರನ್ನೂ ಕೆಡವಿ ಬಿಟ್ಟಿದ್ದಾನೆ.


ಅಪೊಸ್ತಲರೂ ಪ್ರವಾದಿಗಳೂ ಎಂಬ ಅಸ್ತಿವಾರದ ಮೇಲೆ ನೀವು ಮಂದಿರದೋಪಾದಿಯಲ್ಲಿ ಕಟ್ಟಲ್ಪಟ್ಟಿದ್ದೀರಿ.


ಯೇಸು ಅವರಿಗೆ - ಮನೆ ಕಟ್ಟುವವರು ಬೇಡವೆಂದು ಬಿಟ್ಟ ಕಲ್ಲೇ ಮುಖ್ಯವಾದ ಮೂಲೆಗಲ್ಲಾಯಿತು; ಇದು ಕರ್ತನಿಂದಲೇ ಆಯಿತು; ನಮಗೆ ಆಶ್ಚರ್ಯವಾಗಿ ತೋರುತ್ತದೆ ಎಂಬುವ ಮಾತನ್ನು ನೀವು ಶಾಸ್ತ್ರದಲ್ಲಿ ಎಂದಾದರೂ ಓದಲಿಲ್ಲವೋ?


ಆದದರಿಂದ ಇಸ್ರಾಯೇಲ್ಯರು ಶತ್ರುಗಳ ಮುಂದೆ ನಿಲ್ಲಲಾರದೆ ಅವರಿಗೆ ಬೆನ್ನು ತೋರಿಸುವರು. ಅವರು ಶಾಪಗ್ರಸ್ತರೇ. ಶಾಪಕ್ಕೆ ಕಾರಣವಾದದ್ದನ್ನು ನಿಮ್ಮ ಮಧ್ಯದಿಂದ ತೆಗೆದು ಹಾಕುವವರೆಗೆ ನಾನು ನಿಮ್ಮ ಸಂಗಡ ಬರುವದಿಲ್ಲ. ಎದ್ದು ಜನರನ್ನು ಶುದ್ಧಪಡಿಸು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು