1 ಸಮುಯೇಲ 14:34 - ಕನ್ನಡ ಸತ್ಯವೇದವು J.V. (BSI)34 ಜನರ ಬಳಿಗೆ ಹೋಗಿ ಅವರಿಗೆ - ರಕ್ತವನ್ನು ಭುಜಿಸಿ ಯೆಹೋವನಿಗೆ ವಿರುದ್ಧವಾಗಿ ಪಾಪಮಾಡಬೇಡಿರಿ; ನಿಮ್ಮ ನಿಮ್ಮ ಎತ್ತು ಕುರಿಗಳನ್ನು ಇಲ್ಲಿ ತಂದು ಕೊಂದು ತಿನ್ನಬೇಕೆಂದು ಹೇಳಿರಿ ಅಂದನು. ಹಾಗೆಯೇ ಜನರೆಲ್ಲರೂ ತಮ್ಮ ತಮ್ಮ ಎತ್ತು ಕುರಿಗಳನ್ನು ಅದೇ ರಾತ್ರಿ ಅಲ್ಲಿಗೆ ತಂದು ಕೊಂದು ತಿಂದರು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201934 ಜನರ ಬಳಿಗೆ ಹೋಗಿ ಅವರಿಗೆ, ‘ರಕ್ತದೊಂದಿಗೆ ಭೋಜನ ಮಾಡಿ ಯೆಹೋವನಿಗೆ ವಿರುದ್ಧವಾಗಿ ಪಾಪಮಾಡಬೇಡಿರಿ; ನಿಮ್ಮ ನಿಮ್ಮ ಎತ್ತು ಕುರಿಗಳನ್ನು ಇಲ್ಲಿ ತಂದು, ಕೊಂದು ತಿನ್ನಬೇಕೆಂದು ಹೇಳಿರಿ’” ಅಂದನು. ಹಾಗೆಯೇ ಜನರೆಲ್ಲರೂ ತಮ್ಮ ತಮ್ಮ ಎತ್ತು ಕುರಿಗಳನ್ನು ಅದೇ ರಾತ್ರಿ ಅಲ್ಲಿಗೆ ತಂದು ಕೊಂದು ತಿಂದರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)34 ಬಳಿಕ ಜನರ ಬಳಿಗೆ ಹೋಗಿ ಅವರಿಗೆ, ‘ರಕ್ತವನ್ನು ಭುಜಿಸಿ ಸರ್ವೇಶ್ವರನಿಗೆ ವಿರುದ್ಧ ಪಾಪಮಾಡಬೇಡಿ, ನಿಮ್ಮ ನಿಮ್ಮ ಎತ್ತು ಕುರಿಗಳನ್ನು ಇಲ್ಲಿಗೆ ತಂದು ಕೊಂದು ತಿನ್ನಿ,’ ಎಂದು ಹೇಳಿ,” ಎಂದನು. ಹಾಗೆಯೇ ಜನರೆಲ್ಲರು ತಮ್ಮ ತಮ್ಮ ಎತ್ತು ಕುರಿಗಳನ್ನು ಅದೇ ರಾತ್ರಿ ಅಲ್ಲಿಗೆ ತಂದು ಕೊಂದು ತಿಂದರು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್34 ಜನರ ಹತ್ತಿರಕ್ಕೆ ಹೋಗಿ, ‘ನಿಮ್ಮ ದನಕುರಿಗಳನ್ನು ಇಲ್ಲಿಗೆ ತಂದು ಕೊಯ್ದು ತಿನ್ನಬೇಕೆಂದೂ ಮಾಂಸವನ್ನು ರಕ್ತ ಸಮೇತವಾಗಿ ತಿಂದು ಯೆಹೋವನಿಗೆ ವಿರೋಧವಾಗಿ ಪಾಪಮಾಡಬಾರದೆಂದೂ ತಿಳಿಸು’” ಎಂದು ಹೇಳಿ ಕಳುಹಿಸಿದನು. ಆ ರಾತ್ರಿ ಎಲ್ಲರೂ ಅವರವರ ಪಶುಗಳನ್ನು ಅಲ್ಲಿಗೆ ತಂದು ಕೊಯ್ದು ತಿಂದರು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ34 ಸೌಲನು ಅವರಿಗೆ, “ನೀವು ಜನರಲ್ಲಿ ಚದರಿಹೋಗಿ, ರಕ್ತ ಸಹಿತವಾಗಿ ತಿಂದು ಯೆಹೋವ ದೇವರಿಗೆ ವಿರೋಧವಾಗಿ ಪಾಪಮಾಡದೆ, ಪ್ರತಿಯೊಬ್ಬನು ತನ್ನ ಎತ್ತನ್ನೂ, ತನ್ನ ಕುರಿಯನ್ನೂ ನನ್ನ ಬಳಿಗೆ ತಂದು, ಇಲ್ಲಿ ಕೊಯ್ದು ತಿನ್ನಿರಿ ಎಂಬದಾಗಿ ಹೇಳಿರಿ,” ಎಂದನು. ಆದ್ದರಿಂದ ಜನರಲ್ಲಿ ಪ್ರತಿಯೊಬ್ಬನು ತನ್ನ ಎತ್ತನ್ನು ಆ ರಾತ್ರಿಯಲ್ಲಿ ತನ್ನ ಸಂಗಡ ತೆಗೆದುಕೊಂಡು ಬಂದು, ಅಲ್ಲಿ ಕೊಯ್ದನು. ಅಧ್ಯಾಯವನ್ನು ನೋಡಿ |