1 ಸಮುಯೇಲ 1:15 - ಕನ್ನಡ ಸತ್ಯವೇದವು J.V. (BSI)15 ಅದಕ್ಕೆ ಹನ್ನಳು - ಸ್ವಾಮೀ, ಹಾಗಲ್ಲ; ನಾನು ಬಹುದುಃಖಪೀಡಿತಳು; ದ್ರಾಕ್ಷಾರಸವನ್ನಾದರೂ ಬೇರೆ ಯಾವ ಮದ್ಯವನ್ನಾದರೂ ಕುಡಿದವಳಲ್ಲ. ನನ್ನ ಮನೋವೇದನೆಯನ್ನು ಯೆಹೋವನ ಮುಂದೆ ಹೊಯ್ದಿದ್ದೇನೆ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201915 ಅದಕ್ಕೆ ಹನ್ನಳು “ಸ್ವಾಮೀ, ಹಾಗಲ್ಲ; ನಾನು ಬಹು ದುಃಖಪೀಡಿತಳು; ದ್ರಾಕ್ಷಾರಸವನ್ನಾದರೂ ಬೇರೆ ಯಾವ ಮದ್ಯವನ್ನಾದರೂ ಕುಡಿದವಳಲ್ಲ. ನನ್ನ ಮನೋವೇದನೆಯನ್ನು ಯೆಹೋವನ ಮುಂದೆ ತೋಡಿಕೊಳ್ಳುತ್ತಾ ಇದ್ದೇನೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)15 ಆಕೆ, “ಇಲ್ಲ ಸ್ವಾಮಿ, ನಾನು ಕುಡಿದಿಲ್ಲ, ನಾನು ಬಹಳ ದುಃಖಪೀಡಿತಳು; ದ್ರಾಕ್ಷಾರಸವನ್ನಾಗಲಿ ಬೇರೆ ಯಾವ ಮದ್ಯವನ್ನಾಗಲಿ ಕುಡಿದವಳಲ್ಲ. ನನ್ನ ಮನೋವೇದನೆಯನ್ನು ಸರ್ವೇಶ್ವರನ ಮುಂದೆ ತೋಡಿಕೊಳ್ಳುತ್ತಾ ಇದ್ದೇನೆ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್15 ಹನ್ನಳು “ಸ್ವಾಮೀ, ನಾನು ಯಾವುದೇ ದ್ರಾಕ್ಷಾರಸವನ್ನಾಗಲಿ ಮದ್ಯವನ್ನಾಗಲಿ ಕುಡಿದಿಲ್ಲ. ನಾನು ಬಹುದುಃಖಿತಳು. ನಾನು ಯೆಹೋವನಲ್ಲಿ ನನ್ನ ಎಲ್ಲ ತೊಂದರೆಗಳನ್ನು ನಿವೇದಿಸಿಕೊಳ್ಳುತ್ತಿದ್ದೆನು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ15 ಅದಕ್ಕೆ ಹನ್ನಳು ಅವನಿಗೆ ಉತ್ತರವಾಗಿ, “ನನ್ನ ಒಡೆಯನೇ, ಹಾಗಲ್ಲ. ನಾನು ದುಃಖದ ಆತ್ಮವುಳ್ಳ ಸ್ತ್ರೀಯಾಗಿದ್ದೇನೆ. ನಾನು ದ್ರಾಕ್ಷಾರಸವನ್ನಾದರೂ ಮದ್ಯಪಾನವನ್ನಾದರೂ ಕುಡಿದವಳಲ್ಲ. ನಾನು ಯೆಹೋವ ದೇವರ ಮುಂದೆ ನನ್ನ ಮನೋವೇದನೆಯನ್ನೆಲ್ಲಾ ತೋಡಿಕೊಳ್ಳುತ್ತಾ ಇದ್ದೇನೆ. ಅಧ್ಯಾಯವನ್ನು ನೋಡಿ |