Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಪೂರ್ವಕಾಲ ವೃತ್ತಾಂತ 9:2 - ಕನ್ನಡ ಸತ್ಯವೇದವು J.V. (BSI)

2 ಆಗ ಅವರ ಪಟ್ಟಣಗಳನ್ನೂ ಸ್ವಾಸ್ತ್ಯವನ್ನೂ ಮೊದಲು ಸ್ವಾಧೀನಮಾಡಿಕೊಂಡವರು ಇಸ್ರಾಯೇಲ್ಯರು, ಯಾಜಕರು, ಲೇವಿಯರು, ದೇವಸ್ಥಾನದಾಸರು ಇವರೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

2 ಆಗ ಅವರ ಪಟ್ಟಣಗಳನ್ನೂ, ಸ್ವಾಸ್ತ್ಯವನ್ನೂ ಮೊದಲು ಸ್ವಾಧೀನಮಾಡಿಕೊಂಡವರು ಇಸ್ರಾಯೇಲ್ಯರು, ಯಾಜಕರು ಲೇವಿಯರು ಮತ್ತು ದೇವಾಲಯದ ಸೇವಕರು ಇವರೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

2 ಪಟ್ಟಣಗಳಲ್ಲಿದ್ದ ತಮ್ಮ ಸೊತ್ತುಗಳಿಗೆ ಹಿಂದಿರುಗಿ ಬಂದವರಲ್ಲಿ ಇಸ್ರಯೇಲಿನ ಜನಸಾಮಾನ್ಯರೂ ಯಾಜಕರೂ ಲೇವಿಯರೂ ದೇವಾಲಯದ ಕೆಲಸದವರೂ ಸೇರಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

2 ಅಲ್ಲಿಂದ ಹಿಂತಿರುಗಿಬಂದು ತಮ್ಮ ಸ್ವನಾಡಿನಲ್ಲಿ ನೆಲೆಸಿದವರಲ್ಲಿ ಮೊದಲನೆಯವರು ಯಾರೆಂದರೆ: ಕೆಲವು ಇಸ್ರೇಲರು, ಯಾಜಕರು, ಲೇವಿಯರು ಮತ್ತು ದೇವಾಲಯದ ಸೇವಕರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

2 ತಮ್ಮ ಸ್ವಾಸ್ತ್ಯಗಳಲ್ಲಿ, ತಮ್ಮ ಪಟ್ಟಣಗಳಲ್ಲಿ ಮೊದಲು ವಾಸವಾಗಿದ್ದವರಲ್ಲಿ ಕೆಲವರು ಇಸ್ರಾಯೇಲರೂ, ಯಾಜಕರೂ, ಲೇವಿಯರೂ ಮತ್ತು ದೇವಾಲಯದ ಸೇವಕರೂ ಆಗಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಪೂರ್ವಕಾಲ ವೃತ್ತಾಂತ 9:2
11 ತಿಳಿವುಗಳ ಹೋಲಿಕೆ  

ಯಾಜಕರು, ಲೇವಿಯರು, ದ್ವಾರಪಾಲಕರು, ಗಾಯಕರು, ಸಾಧಾರಣಜನರಿಗೆ ಸೇರಿದವರು, ದೇವಸ್ಥಾನದಾಸರು ಅಂತೂ ಇಸ್ರಾಯೇಲ್ಯರೆಲ್ಲರೂ ತಮ್ಮ ತಮ್ಮ ಪಟ್ಟಣಗಳಲ್ಲಿ ವಾಸಿಸುತ್ತಿದ್ದರು.


ಲೇವಿಯರ ಸಹಾಯಕ್ಕಾಗಿ ಕೊಟ್ಟ ದೇವಸ್ಥಾನದಾಸರಲ್ಲಿ ಇನ್ನೂರಿಪ್ಪತ್ತು ಮಂದಿಯನ್ನೂ ನಮ್ಮ ಬಳಿಗೆ ಕರಕೊಂಡು ಬಂದರು. ಇವರೆಲ್ಲರ ಹೆಸರುಗಳು ಪಟ್ಟಿಯಲ್ಲಿದ್ದವು.


ಯಾಜಕ, ಲೇವಿಯ, ಗಾಯಕ, ದ್ವಾರಪಾಲಕ, ದೇವಸ್ಥಾನದಾಸ ಇವರೂ ಸಾಧಾರಣ ಜನರಲ್ಲಿ ಕೆಲವರೂ ತಮತಮಗೆ ನೇಮಕವಾದ ಪಟ್ಟಣಗಳಲ್ಲಿ ವಾಸಿಸಿದರು; ಬೇರೆ ಎಲ್ಲಾ ಇಸ್ರಾಯೇಲ್ಯರು ತಮ್ಮ ತಮ್ಮ ಪಟ್ಟಣಗಳಲ್ಲಿ ವಾಸಿಸಿದರು.


ಎಲ್ಲಾ ದೇವಸ್ಥಾನದಾಸರೂ ಸೊಲೊಮೋನನ ದಾಸರೂ ಒಟ್ಟು 392.


ದೇವಸ್ಥಾನದಾಸರಲ್ಲಿ - ಜೀಹ, ಹಸೂಫ,


ಎಲ್ಲಾ ದೇವಸ್ಥಾನದಾಸರೂ ಸೊಲೊಮೋನನ ದಾಸರೂ ಒಟ್ಟು 392 ಮಂದಿ.


ಸೆರೆಯಿಂದ ತಿರಿಗಿ ಬಂದ [ಯೆಹೂದ] ಸಂಸ್ಥಾನದವರ ಖಾನೇಷುಮಾರಿ. ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನಿಂದ ಬಾಬೆಲಿಗೆ ಸೆರೆಯೊಯ್ಯಲ್ಪಟ್ಟವರಲ್ಲಿ


ತಾವು ದೇವರ ಸೇವಕನಾದ ಮೋಶೆಯ ಮುಖಾಂತರ ಕೊಡಲ್ಪಟ್ಟ ದೇವರ ಧರ್ಮೋಪದೇಶವನ್ನು ಅನುಸರಿಸಿ ತಮ್ಮ ಕರ್ತನಾದ ಯೆಹೋವನ ಎಲ್ಲಾ ಆಜ್ಞಾನಿಯಮವಿಧಿಗಳನ್ನು ಕೈಕೊಂಡು ನಡೆಯುವದಾಗಿ ಆಣೆಯಿಟ್ಟು ಪ್ರಮಾಣಮಾಡಿದರು. ಹೇಗಂದರೆ -


ಇಸ್ರಾಯೇಲ್ಯರ ಪ್ರಭುಗಳು ಮಾತ್ರ ಯೆರೂಸಲೇವಿುನಲ್ಲಿ ವಾಸಿಸುತ್ತಿದ್ದರು. ಉಳಿದ ಜನರೊಳಗೆ ಹತ್ತತ್ತು ಮಂದಿಯಲ್ಲಿ ಒಂಭತ್ತು ಮಂದಿ ತಮ್ಮ ತಮ್ಮ ಊರುಗಳಲ್ಲಿದ್ದುಕೊಂಡು ಒಬ್ಬನು ಪವಿತ್ರನಗರವಾಗಿರುವ ಯೆರೂಸಲೇವಿುನಲ್ಲಿ ವಾಸಿಸುವದಕ್ಕಾಗಿ ಅಲ್ಲಿಗೆ ಬರುವಂತೆ ಚೀಟುಹಾಕಿ ಗೊತ್ತು ಮಾಡಿದರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು