Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಪೂರ್ವಕಾಲ ವೃತ್ತಾಂತ 9:18 - ಕನ್ನಡ ಸತ್ಯವೇದವು J.V. (BSI)

18 ಶಲ್ಲೂಮ್ಯರು ಇಂದಿನವರೆಗೂ ಪೂರ್ವದಿಕ್ಕಿನಲ್ಲಿರುವ ಅರಸನ ಬಾಗಲನ್ನು ಕಾಯುತ್ತಿರುತ್ತಾರೆ. ಇವರು ಲೇವಿಯರ ಪಾಳೆಯಗಳ ದ್ವಾರಪಾಲಕರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

18 ಶಲ್ಲೂಮರು ಇಂದಿನವರೆಗೂ ಪೂರ್ವದಿಕ್ಕಿನಲ್ಲಿರುವ ಅರಸನ ಬಾಗಿಲನ್ನು ಕಾಯುತ್ತಿರುತ್ತಾರೆ. ಇವರು ಲೇವಿಯರ ಪಾಳೆಯಗಳ ದ್ವಾರಪಾಲಕರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

18 ಇದುವರೆಗೂ ಶಲ್ಲೂಮನ ಕುಟುಂಬಸ್ಥರು ಪೂರ್ವದಿಕ್ಕಿನಲ್ಲಿರುವ ಅರಸನ ಬಾಗಿಲನ್ನು ಕಾಯುತ್ತಿದ್ದಾರೆ. ಇದಕ್ಕೆ ಮೊದಲು ಅವರು ಲೇವಿಯರ ಪಾಳೆಯಗಳ ಕಾವಲುಗಾರರಾಗಿ ಇದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

18 ಇವರೆಲ್ಲರೂ ಪೂರ್ವದಿಕ್ಕಿನಲ್ಲಿರುವ ರಾಜನ ಹೆಬ್ಬಾಗಿಲನ್ನು ಕಾಯುತ್ತಿರುತ್ತಾರೆ. ಇವರೆಲ್ಲಾ ಲೇವಿ ಕುಲಕ್ಕೆ ಸೇರಿದವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

18 ಇವರು ಈವರೆಗೂ ಪೂರ್ವದಿಕ್ಕಿನಲ್ಲಿರುವ ಅರಸನ ಬಾಗಿಲಲ್ಲಿ ಕಾದುಕೊಂಡಿದ್ದರು. ಇವರು ಲೇವಿಯ ಮಕ್ಕಳ ದಂಡುಗಳಲ್ಲಿ ದ್ವಾರಪಾಲಕರಾಗಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಪೂರ್ವಕಾಲ ವೃತ್ತಾಂತ 9:18
11 ತಿಳಿವುಗಳ ಹೋಲಿಕೆ  

ಅವನು ಪೇತ್ರ ಯೋಹಾನರನ್ನು ಹಿಡುಕೊಂಡೇ ಇರುವಾಗ ಆಶ್ಚರ್ಯಪಡುತ್ತಿರುವ ಆ ಜನರೆಲ್ಲರು ಅವರ ಬಳಿಗೆ ಸೊಲೊಮೋನನದೆಂಬ ಹೆಸರುಳ್ಳ ಮಂಟಪಕ್ಕೆ ಗುಂಪು ಗುಂಪಾಗಿ ಓಡಿಬಂದರು.


ಯೆಹೋಯಾದಾವನು ದೇವಾಲಯಕ್ಕೆ ಕಾವಲಿಟ್ಟು ಶತಾಧಿಪತಿಗಳು, ಕಾರಿ ಎನಿಸಿಕೊಳ್ಳುವ ಸೈನ್ಯ, ಕಾವಲುದಂಡು, ಸಾಧಾರಣ ಜನರು ಇವರೊಡನೆ ಅರಸನನ್ನು ಯೆಹೋವನ ಆಲಯದಿಂದ ಕಾವಲುದಂಡಿನವರ ಬಾಗಲಿನ ಮಾರ್ಗವಾಗಿ ಅರಮನೆಗೆ ಕರಕೊಂಡು ಹೋಗಿ ರಾಜಸಿಂಹಾಸನದ ಮೇಲೆ ಕುಳ್ಳಿರಿಸಿದನು. ದೇಶದವರೆಲ್ಲರೂ ಬಹಳವಾಗಿ ಸಂತೋಷಪಟ್ಟರು;


ಅವನ ಭೋಜನಪೀಠದ ಆಹಾರ, ಆ ಪೀಠದ ಸುತ್ತಲಿರುವ ಉದ್ಯೋಗಸ್ಥರ ಆಸನಗಳು, ಅವನ ಪರಿಚಾರಕರ ಸೇವಾಕ್ರಮ, ಅವರ ಉಡುಪುಗಳು, ಅವನ ಪಾನಕಗಳು ಇವುಗಳನ್ನೂ ಅವನು ಯೆಹೋವನ ಆಲಯದಲ್ಲಿ ಸಮರ್ಪಿಸುತ್ತಿದ್ದ ಸರ್ವಾಂಗಹೋಮಗಳನ್ನೂ ನೋಡಿದಾಗ ವಿಸ್ಮಿತಳಾಗಿ ಅರಸನಿಗೆ -


ದ್ವಾರಪಾಲಕರಲ್ಲಿ ಶಲ್ಲೂಮ್, ಅಕ್ಕೂಬ್, ಟಲ್ಮೋನ್, ಅಹೀಮಾನ್ ಇವರೂ ಇವರ ಸಹೋದರರೂ. ಇವರಲ್ಲಿ ಶಲ್ಲೂಮನು ಪ್ರಮುಖನಾಗಿದ್ದನು.


ಕೋರೇಯನ ಮಗನೂ ಎಬ್ಯಾಸಾಫನ ಮೊಮ್ಮಗನೂ ಕೋರಹನ ಮರಿಮಗನೂ ಆದ ಶಲ್ಲೂಮನೂ ಅವನ ಗೋತ್ರ ಬಂಧುಗಳಾದ ವಿುಕ್ಕ ಕೋರಹಿಯರೂ ಗುಡಾರದ ದ್ವಾರಪಾಲಕಸೇವೆಗೆ ನೇವಿುಸಲ್ಪಟ್ಟರು. ಇವರ ಪೂರ್ವಿಕರು ಯೆಹೋವನ ಪಾಳೆಯದ ಪ್ರವೇಶಸ್ಥಳವನ್ನು ಕಾಯುವವರಾಗಿದ್ದರು.


ಯೆಹೋವನ ಆಲಯಕ್ಕೆ ಕರೆದು ಇಗ್ದಲ್ಯನ ಮಗನೂ ದೇವರ ಮನುಷ್ಯನೂ ಆದ ಹಾನಾನನ ಮಕ್ಕಳ ಕೋಣೆಯೊಳಕ್ಕೆ, ಅಂದರೆ ಸರದಾರರ ಕೋಣೆಯ ಪಕ್ಕದಲ್ಲಿ, ಶಲ್ಲೂಮನ ಮಗನೂ ದ್ವಾರಪಾಲಕನೂ ಆದ ಮಾಸೇಯನ ಕೋಣೆಯ ಮೇಲ್ಗಡೆ


ತರುವಾಯ ಆ ಪುರುಷನು ನನ್ನನ್ನು ಪವಿತ್ರಾಲಯದ ಮೂಡಣ ಹೊರಗಣ ಹೆಬ್ಬಾಗಿಲಿಗೆ ಪುನಃ ಕರತಂದನು; ಅದು ಮುಚ್ಚಿತ್ತು.


ಯೆಹೋವನ ಆಲಯದ ಪ್ರಾಕಾರದೊಳಗೆ ಸಬ್ಬತ್‍ದಿನದ ಆರಾಧನೆಗಾಗಿ ರಾಜರಿಗೆ ಕಟ್ಟಲ್ಪಟ್ಟಿದ್ದ ಮಂಟಪವನ್ನೂ ಅರಮನೆಯಿಂದ ದೇವಸ್ಥಾನಕ್ಕೆ ಹೋಗುವ ಹೊರಗಿನ ಬಾಗಲನ್ನೂ ಬದಲಾಯಿಸಿದನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು