Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಪೂರ್ವಕಾಲ ವೃತ್ತಾಂತ 9:16 - ಕನ್ನಡ ಸತ್ಯವೇದವು J.V. (BSI)

16 ಶೆಮಾಯನ ಮಗನೂ ಗಾಲಾಲನ ಮೊಮ್ಮಗನೂ ಯೆದೂತೂನನ ಮರಿಮಗನೂ ಆದ ಓಬದ್ಯ, ನೆಟೋಫಾತ್ಯರ ಗ್ರಾಮಗಳಲ್ಲಿ ವಾಸವಾಗಿದ್ದ ಎಲ್ಕಾನನ ಮೊಮ್ಮಗನೂ ಆಸನ ಮಗನೂ ಆದ ಬೆರೆಕ್ಯ ಇವರೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

16 ಶೆಮಾಯನ ಮಗನೂ ಯೆದೂತೂನನ ಮರಿಮಗನೂ ಆದ ಓಬದ್ಯ. ನೆಟೋಫಾತ್ಯರ ಗ್ರಾಮಗಳಲ್ಲಿ ವಾಸವಾಗಿದ್ದ ಎಲ್ಕಾನನ ಮೊಮ್ಮಗನೂ ಆಸನ ಮಗನೂ ಆದ ಬೆರೆಕ್ಯ ಇವರೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

16 ಓಬದ್ಯನು ಶೆಮಾಯನ ಮಗ. ಶೆಮಾಯನು ಗಾಲಾಲನ ಮಗ. ಗಾಲಾಲನು ಯೆದೂತೂನನ ಮಗ. ಆಸನ ಮಗನಾದ ಬೆರೆಕ್ಯನು ಜೆರುಸಲೇಮಿನಲ್ಲಿ ವಾಸಿಸುತ್ತಿದ್ದನು. ಆಸನು ಎಲ್ಕಾನನ ಮಗ. ಎಲ್ಕಾನನು ನೆಟೋಫ ಜನರ ಸಮೀಪದ ಗ್ರಾಮದಲ್ಲಿ ವಾಸಿಸುತ್ತಿದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

16 ಯೆದುತೂನನ ಮಗ, ಗಲಾಲನ ಮಗ, ಶೆಮಾಯನ ಮಗ, ಓಬದ್ಯನೂ; ಎಲ್ಕಾನನ ಮಗ ಆಸನ ಮಗ ಬೆರೆಕ್ಯನೂ ಇವರು ನೆಟೋಫದವರ ಊರುಗಳಲ್ಲಿ ವಾಸವಾಗಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಪೂರ್ವಕಾಲ ವೃತ್ತಾಂತ 9:16
11 ತಿಳಿವುಗಳ ಹೋಲಿಕೆ  

ಮೀಕನ ಮಗನೂ ಜಬ್ದೀಯ ಮೊಮ್ಮಗನೂ ಆಸಾಫನ ಮರಿಮಗನೂ ಪ್ರಾರ್ಥನಾಸಮಯದಲ್ಲಿ - ಕೃತಜ್ಞತಾಸ್ತುತಿಮಾಡಿರಿ ಎಂದು ಹೇಳಿ ಭಜಕರನ್ನು ನಡಿಸುತ್ತಿದ್ದ ಮತ್ತನ್ಯ, ತನ್ನ ಬಂಧುಗಳಲ್ಲಿ ದ್ವಿತೀಯ ಸ್ಥಾನದವನಾದ ಬಕ್ಬುಕ್ಯ, ಶಮ್ಮೂವನ ಮಗನೂ ಗಾಲಾಲನ ಮೊಮ್ಮಗನೂ ಯೆದೂತೂನನ ಮರಿಮಗನೂ ಆದ ಅಬ್ದ ಎಂಬವರೂ.


ಬೇತ್ಲೆಹೇಮ್ ನೆಟೋಫ ಊರುಗಳವರು 188


ಆಸಾಫ್ಯರಾದ ಗಾಯಕರು ಅರಸನಾದ ದಾವೀದನ ಮತ್ತು ಆಸಾಫ್, ಹೇಮಾನ್, ಅರಸನ ದರ್ಶಿಯಾದ ಯೆದುತೂನ್ ಇವರ ಆಜ್ಞಾನುಸಾರ ತಮ್ಮ ಸ್ಥಳದಲ್ಲಿ ನಿಂತಿದ್ದರು; ದ್ವಾರಪಾಲಕರು ಆಯಾ ಬಾಗಲುಗಳನ್ನು ಕಾಯುತ್ತಿದ್ದರು. ಅವರ ಸಹೋದರರಾದ ಲೇವಿಯರು ಅವರ ಭೋಜನಕ್ಕೆ ಸಿದ್ಧಮಾಡುತ್ತಿದ್ದದರಿಂದ ಅವರು ತಮ್ಮ ತಮ್ಮ ಸೇವೆಯನ್ನು ಬಿಡುವದಕ್ಕೆ ಕಾರಣವಿರಲಿಲ್ಲ.


ದೇವರಾದ ಯೆಹೋವನ ಆಲಯದಲ್ಲಿ ಆರಾಧನೆ ನಡೆಯುತ್ತಿರುವಾಗ ಇವರೆಲ್ಲರೂ ತಮ್ಮ ತಂದೆಯ ಕೈಕೆಳಗಿದ್ದುಕೊಂಡು ತಾಳ, ಸ್ವರಮಂಡಲ, ಕಿನ್ನರಿ ಇವುಗಳಿಂದ ಗಾಯನಮಾಡುತ್ತಿದ್ದರು. ಆಸಾಫ್ ಯೆದುತೂನ್ ಹೇಮಾನರು ಅರಸನ ಸೇವೆಯಲ್ಲಿದ್ದರು.


ಯೆದುತೂನ್ಯರಲ್ಲಿ - ಗೆದಲ್ಯ, ಚೆರೀ, ಯೆಶಾಯ, [ಶಿಮ್ಮೀ] ಹಷಬ್ಯ, ಮತ್ತಿತ್ಯ ಇವರೇ. ಕಿನ್ನರಿಯನ್ನು ಬಾರಿಸುತ್ತಾ ಪರವಶರಾಗಿ ಯೆಹೋವ ಕೀರ್ತನೆಮಾಡುವ ತಮ್ಮ ತಂದೆಯಾದ ಯೆದುತೂನನಿಗೆ ಈ ಆರು ಮಂದಿಯೂ ಸಹಾಯಕರು.


ಆಮೇಲೆ ದಾವೀದನೂ ಆರಾಧಕಮಂಡಲಿಯವರ ಪ್ರಧಾನರೂ ಕಿನ್ನರಿ ಸ್ವರಮಂಡಲ ತಾಳ ಇವುಗಳನ್ನು ಬಾರಿಸುತ್ತಾ ಪರವಶರಾಗಿ ಗಾಯನ ಸೇವೆಮಾಡುವದಕ್ಕೋಸ್ಕರ ಆಸಾಫ್ಯರನ್ನೂ ಹೇಮಾನ್ಯರನ್ನೂ ಯೆದುತೂನ್ಯರನ್ನೂ ಆರಿಸಿದರು. ಈ ಸೇವೆಯನ್ನು ಮಾಡತಕ್ಕ ಪುರುಷರ ಪಟ್ಟಿ -


ಸಿಮೆಯೋನ್ಯರಿಂದ ಏಳು ಸಾವಿರದ ನೂರು ಮಂದಿ ರಣವೀರರು;


ಸಲ್ಮನಿಂದ ಬೇತ್ಲೆಹೇಮ್ ನೆಟೋಫಾ ಅಟರೋತ್ ಬೇತ್ಯೋವಾಬ್ ಊರುಗಳವರೂ ಚೊರ್ಗದಲ್ಲಿ ವಾಸಿಸುವ ಮಾನಹತಿಯರಲ್ಲಿ ಅರ್ಧಜನರೂ ಉತ್ಪತ್ತಿಯಾದರು.


ಬಕ್ಬಕ್ಕರ್, ಹೆರೆಷ್, ಗಾಲಾಲ್, ಮೀಕನ ಮಗನೂ ಜಿಕ್ರೀಯ ಮೊಮ್ಮಗನೂ ಆಸಾಫನ ಮರಿಮಗನೂ ಆದ ಮತ್ತನ್ಯ,


ದ್ವಾರಪಾಲಕರಲ್ಲಿ ಶಲ್ಲೂಮ್, ಅಕ್ಕೂಬ್, ಟಲ್ಮೋನ್, ಅಹೀಮಾನ್ ಇವರೂ ಇವರ ಸಹೋದರರೂ. ಇವರಲ್ಲಿ ಶಲ್ಲೂಮನು ಪ್ರಮುಖನಾಗಿದ್ದನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು