Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಪೂರ್ವಕಾಲ ವೃತ್ತಾಂತ 7:24 - ಕನ್ನಡ ಸತ್ಯವೇದವು J.V. (BSI)

24 ಶೇರ ಎಂಬವಳು ಅವನ ಮಗಳು; ಈಕೆಯು ಮೇಲಣ ಮತ್ತು ಕೆಳಗಣ ಬೇತ್‍ಹೋರೋನ್ ಎಂಬ ಪಟ್ಟಣಗಳನ್ನೂ ಉಜ್ಜೇನ್‍ಶೇರ ಎಂಬ ಪಟ್ಟಣವನ್ನೂ ಕಟ್ಟಿಸಿದಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

24 ಶೇರ ಎಂಬವಳು ಅವನ ಮಗಳು. ಈಕೆಯು ಮೇಲಣ ಮತ್ತು ಕೆಳಗಣ ಬೇತ್ ಹೊರೋನ್ ಎಂಬ ಪಟ್ಟಣಗಳನ್ನು ಮತ್ತು ಉಜ್ಜೀನ್ ಶೇರ ಎಂಬ ಪಟ್ಟಣಗಳನ್ನೂ ಕಟ್ಟಿಸಿದಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

24 ಎಫ್ರಯಿಮನಿಗೆ ಶೇರ ಎಂಬ ಮಗಳು ಇದ್ದಳು. ಈಕೆ ಮೇಲಿನ ಹಾಗು ಕೆಳಗಿನ ಬೇತ್ ಹೋರೋನ್ ಪಟ್ಟಣಗಳನ್ನೂ ಉಜ್ಜೇನ್ ಶೇರ ಎಂಬ ಪಟ್ಟಣವನ್ನೂ ಕಟ್ಟಿಸಿದಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

24 ಎಫ್ರಾಯೀಮನ ಮಗಳ ಹೆಸರು ಶೇರ. ಅವಳು ಕೆಳಗಿನ ಬೇತ್‌ಹೋರೋನ್ ಮತ್ತು ಮೇಲಿನ ಬೇತ್‌ಹೋರೋನ್ ಮತ್ತು ಕೆಳಗಿನ ಉಜ್ಜೇನ್‌ಶೇರ ಮತ್ತು ಮೇಲಿನ ಉಜ್ಜೇನ್‌ಶೇರ ಪಟ್ಟಣಗಳನ್ನು ಕಟ್ಟಿಸಿದಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

24 ಇವನ ಪುತ್ರಿಯ ಹೆಸರು ಶೇರಳು. ಇವಳು ಕೆಳಗಿನ ಬೇತ್ ಹೋರೋನ್, ಮೇಲಿನ ಬೇತ್ ಹೋರೋನ್ ಮತ್ತು ಉಜ್ಜೇನ್ ಶೇರವನ್ನೂ ಕಟ್ಟಿಸಿದಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಪೂರ್ವಕಾಲ ವೃತ್ತಾಂತ 7:24
7 ತಿಳಿವುಗಳ ಹೋಲಿಕೆ  

ಎಫ್ರಾಯೀಮ್ ಗೋತ್ರಗಳ ದೇಶದ [ದಕ್ಷಿಣ ದಿಕ್ಕಿನ] ಮೇರೆಯು ಅಟಾರೋತದ್ದಾರಿನ ಪೂರ್ವದಿಕ್ಕಿನಿಂದ ತೊಡಗಿ ಮೇಲಿನ ಬೇತ್‍ಹೋರೋನಿನ ಮೇಲೆ ಸಮುದ್ರತೀರಕ್ಕೆ ಹೋಗಿ ಅಲ್ಲಿ ಮುಗಿಯುತ್ತದೆ.


ಅಲ್ಲಿಂದ ಇಳಿದು ಪಶ್ಚಿಮದಿಕ್ಕಿನಲ್ಲಿರುವ ಯಫ್ಲೇಟ್ಯರ ಪ್ರಾಂತವನ್ನು ಮುಟ್ಟಿ ಕೆಳಗಿನ ಬೇತ್‍ಹೋರೋನಿನ ಮೇಲೆ ಗೆಜೆರಿಗೆ ಹೋಗಿ ಸಮುದ್ರತೀರದಲ್ಲಿ ಮುಗಿಯುತ್ತದೆ.


ಇದಲ್ಲದೆ ಮೇಲಿನ ಮತ್ತು ಕೆಳಗಿನ ಬೇತ್ಹೋರೋನ್ ಎಂಬ ಊರುಗಳನ್ನು ಪೌಳಿಗೋಡೆ ಕದ ಅಗುಳಿ ಇವುಗಳನ್ನು ಏರ್ಪಡಿಸಿ ಕೋಟೆಗಳನ್ನಾಗಿ ಮಾಡಿದನು.


ಸೊಲೊಮೋನನು ಗೆಜೆರ್‍ಪಟ್ಟಣದ ಹೊರತಾಗಿ ಕೆಳಗಿನ ಬೇತ್‍ಹೋರೋನ್,


ಯೆಹೋವನು ಇಸ್ರಾಯೇಲ್ಯರ ಮುಂದೆ ಅವರನ್ನು ಕಳವಳಗೊಳಿಸಿದ್ದರಿಂದ ಯೆಹೋಶುವನು ಅವರನ್ನು ಗಿಬ್ಯೋನಿನ ಹತ್ತಿರ ಪೂರ್ಣವಾಗಿ ಸೋಲಿಸಿ ಬೇತ್‍ಹೋರೋನ್ ಎಂಬ ಗಟ್ಟದ ದಾರಿಯಲ್ಲಿ ಅಜೇಕ, ಮಕ್ಕೇದ ಎಂಬ ಊರುಗಳವರೆಗೂ ಅವರನ್ನು ಹಿಂದಟ್ಟಿ ಸಂಹರಿಸಿದನು.


ಅವನು ತನ್ನ ಹೆಂಡತಿಯನ್ನು ಕೂಡಲು ಆಕೆಯು ಗರ್ಭಿಣಿಯಾಗಿ ಮಗನನ್ನು ಹೆತ್ತಳು. ಇದು ಅವನ ಕುಟುಂಬಕ್ಕೊದಗಿದ ಆಪತ್ತಿನಲ್ಲಿ ಸಂಭವಿಸಿದದರಿಂದ ಆ ಮಗನಿಗೆ ಬೆರೀಯ ಎಂದು ಹೆಸರಿಟ್ಟನು.


ಬೆರೀಯ ಮಗನು ರೆಫಹ; [ಇವನ ಮಗನು] ರೆಷೆಫ್; ಇವನ ಮಗನು ತೆಲಹ; ಇವನ ಮಗನು ತಹನ್;


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು