Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಪೂರ್ವಕಾಲ ವೃತ್ತಾಂತ 6:81 - ಕನ್ನಡ ಸತ್ಯವೇದವು J.V. (BSI)

81 ಮಹನಯಿಮ್, ಹೆಷ್ಬೋನ್, ಯಗ್ಜೇರ್ ಎಂಬ ಗೋಮಾಳ ಸಹಿತವಾದ ಪಟ್ಟಣಗಳೂ ದೊರಕಿದವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

81 ಹೆಷ್ಬೋನ್ ಮತ್ತು ಅದರ ಗೋಮಾಳಗಳು, ಯಗ್ಜೇರ್ ಮತ್ತು ಅದರ ಗೋಮಾಳಗಳು ಸಹಿತವಾದ ಪಟ್ಟಣಗಳು ದೊರಕಿದವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

81 ಹೆಷ್ಬೋನ್ ಹಾಗು ಯಗ್ಜೇರ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

81 ಹೆಷ್ಬೋನ್, ಯಜ್ಜೇರ್ ಮತ್ತು ಅದರ ಉಪನಗರಗಳೂ ದೊರೆತವು.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಪೂರ್ವಕಾಲ ವೃತ್ತಾಂತ 6:81
13 ತಿಳಿವುಗಳ ಹೋಲಿಕೆ  

ಮಹನಯಿಮ್, ಹೆಷ್ಬೋನ್, ಯಗ್ಜೇರ್ ಎಂಬ ಗೋಮಾಳ ಸಹಿತವಾದ ನಾಲ್ಕು ಪಟ್ಟಣಗಳೂ ಸಿಕ್ಕಿದವು.


ನಿನ್ನ ಕಂಠವು ದಂತದ ಗೋಪುರ; ನಿನ್ನ ನೇತ್ರಗಳು ಹೆಷ್ಬೋನಿನಲ್ಲಿನ ಬತ್‍ರಬ್ಬೀಮ್ ಬಾಗಿಲ ಬಳಿಯ ಕೊಳಗಳಂತಿವೆ. ನಿನ್ನ ನಾಸಿಕವು ದಮಸ್ಕದ ಕಡೆಗಿರುವ ಲೆಬನೋನಿನ ಬುರುಜಿನ ಹಾಗಿದೆ.


ರಾಜ್ಯಜನಾಂಗಗಳನ್ನು ಅವರಿಗೆ ವಶಪಡಿಸಿ ಆ ರಾಜ್ಯಗಳನ್ನು ಅವರಿಗೆ ಸ್ವಾಸ್ತ್ಯವನ್ನಾಗಿ ಹಂಚಿಕೊಟ್ಟಿ. ಹೀಗೆ ಅವರು ಹೆಷ್ಬೋನಿನ ಅರಸನಾದ ಸೀಹೋನ್, ಬಾಷಾನಿನ ಅರಸನಾದ ಓಗ್ ಇವರ ಪ್ರಾಂತಗಳನ್ನು ಸ್ವಾಧೀನಪಡಿಸಿಕೊಂಡರು.


ಈಗ ನೀವು ಹೊರಟು ಅರ್ನೋನ್ ಹಳ್ಳವನ್ನು ದಾಟಿರಿ. ಅಮೋರಿಯನಾಗಿರುವ ಹೆಷ್ಬೋನಿನ ಅರಸನಾದ ಸೀಹೋನನು ನಿಮ್ಮಿಂದ ಸೋತು ಹೋಗಿ ಅವನ ರಾಜ್ಯವು ನಿಮಗೇ ವಶವಾಗಬೇಕೆಂದು ನಿಮಗೆ ಅನುಗ್ರಹಿಸಿದ್ದೇನೆ. ಅವನೊಡನೆ ಯುದ್ಧಮಾಡಿ ಆ ದೇಶವನ್ನು ಸ್ವಾಧೀನಮಾಡಿಕೊಳ್ಳುವದಕ್ಕೆ ಪ್ರಾರಂಭಿಸಿರಿ.


ರೂಬೇನ್ಯರು ಹೆಷ್ಬೋನ್, ಎಲೆಯಾಲೆ, ಕಿರ್ಯಾತಯಿಮ್, ಸಿಬ್ಮಾ ಎಂಬ ಊರುಗಳನ್ನೂ [ಬೇರೆ ಹೆಸರಿನಿಂದ ಉಚ್ಚರಿಸತಕ್ಕ] ನೆಬೋ, ಬಾಳ್ಮೆಯೋನ್ ಎಂಬಿವುಗಳನ್ನೂ ಹೊಸದಾಗಿ ಕಟ್ಟಿ ಅವುಗಳಿಗೆ ಬೇರೆ ಹೆಸರುಗಳನ್ನು ಇಟ್ಟರು.


ಯೆಹೋವನು ಇಸ್ರಾಯೇಲ್ಯರಿಗೆ ಅಧೀನಪಡಿಸಿದ ಈ ಪ್ರದೇಶವು ಅಂದರೆ ಅಟಾರೋತ್, ದೀಬೋನ್, ಯಗ್ಜೇರ್, ನಿಮ್ರಾ, ಹೆಷ್ಬೋನ್, ಎಲೆಯಾಲೆ, ಸೆಬಾಮ್, ನೆಬೋ, ಬೆಯೋನ್ ಎಂಬ ಪಟ್ಟಣಗಳ ಪ್ರದೇಶವು ದನಕುರಿಗಳ ಮೇವಿಗೆ ತಕ್ಕ ಪ್ರದೇಶ.


ರೂಬೇನ್ ಕುಲದವರಿಗೂ ಗಾದ್ ಕುಲದವರಿಗೂ ಬಹಳ ದನಕುರಿಗಳಿದ್ದವು. ಅವರು ಯಗ್ಜೇರ್, ಗಿಲ್ಯಾದ್ ಎಂಬ ಪ್ರದೇಶಗಳನ್ನು ನೋಡಿದಾಗ ಅವು ದನಕುರಿಗಳ ಮೇವಿಗೆ ತಕ್ಕ ಸ್ಥಳವೆಂದು ತಿಳಿದುಕೊಂಡು


ಅದಲ್ಲದೆ ಮೋಶೆ ಗೂಢಚಾರರ ಮೂಲಕ ಯಗ್ಜೇರನ್ನು ಪರೀಕ್ಷಿಸಿದ ಮೇಲೆ ಇಸ್ರಾಯೇಲ್ಯರು ಅದರ ಗ್ರಾಮಗಳನ್ನು ವಶಪಡಿಸಿಕೊಂಡು ಅಲ್ಲಿದ್ದ ಅಮೋರಿಯರನ್ನು ಹೊರಡಿಸಿಬಿಟ್ಟರು.


ಇಸ್ರಾಯೇಲ್ಯರು ಈ ಪಟ್ಟಣಗಳನ್ನೆಲ್ಲಾ ವಶಮಾಡಿಕೊಂಡರು. ಅವರು ಹೆಷ್ಬೋನಿನಲ್ಲಿಯೂ ಅದಕ್ಕೆ ಸೇರಿದ ಗ್ರಾಮಗಳಲ್ಲಿಯೂ ಅಮೋರಿಯರ ಬೇರೆ ಎಲ್ಲಾ ಊರುಗಳಲ್ಲಿಯೂ ವಾಸಿಸಿದರು.


ಗಾದ್‍ಕುಲದ ಸ್ವಾಸ್ತ್ಯದಿಂದ ಗಿಲ್ಯಾದಿನ ರಾಮೋತ್;


ಇಸ್ಸಾಕಾರನ ಮಕ್ಕಳು - ತೋಲ, ಪೂವ, ಯಾಶೂಬ್, ಶಿಮ್ರೋನ್ ಎಂಬ ನಾಲ್ಕು ಮಂದಿ.


ದಾವೀದನ ಆಳಿಕೆಯ ನಾಲ್ವತ್ತನೆಯ ವರುಷದಲ್ಲಿ ಹೆಬ್ರೋನ್ಯರಿಗೆ ಸೇರಿದವರು ಯಾರಾರೆಂದು ವಿಚಾರಣೆ ನಡೆದಾಗ ಗಿಲ್ಯಾದಿನ ಯಾಜೇರಿನ ಶ್ರೀಮಂತರಲ್ಲಿ ಅನೇಕರು ಅವರ ಗೋತ್ರದವರಾಗಿರುತ್ತಾರೆಂದು ಗೊತ್ತಾಯಿತು. ಈ ಹೆಬ್ರೋನ್ಯರಲ್ಲಿ ಯೆರೀಯನು ಪ್ರಧಾನನು;


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು