Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಪೂರ್ವಕಾಲ ವೃತ್ತಾಂತ 6:4 - ಕನ್ನಡ ಸತ್ಯವೇದವು J.V. (BSI)

4 ಎಲ್ಲಾಜಾರನು ಫೀನೆಹಾಸನನ್ನು ಪಡೆದನು; ಫೀನೆಹಾಸನು ಅಬೀಷೂವನನ್ನು ಪಡೆದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

4 ಎಲ್ಲಾಜಾರನು ಫೀನೆಹಾಸನನ್ನು ಪಡೆದನು; ಫೀನೆಹಾಸನು ಅಬೀಷೂವನನ್ನು ಪಡೆದನು;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

4 ಆರೋನನಿಗೆ ನಾದಾಬ್, ಅಬೀಹೂ, ಎಲ್ಲಾಜಾರ್, ಈತಾಮಾರ್ ಎಂಬ ನಾಲ್ಕು ಜನ ಮಕ್ಕಳಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

4 ಎಲ್ಲಾಜಾರನ ಮಗನು ಫೀನೆಹಾಸ. ಫೀನೆಹಾಸನ ಮಗನು ಅಬೀಷೂವ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

4 ಎಲಿಯಾಜರನು ಫೀನೆಹಾಸನನ್ನು ಪಡೆದನು, ಫೀನೆಹಾಸನು ಅಬೀಷೂವನನ್ನು ಪಡೆದನು,

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಪೂರ್ವಕಾಲ ವೃತ್ತಾಂತ 6:4
21 ತಿಳಿವುಗಳ ಹೋಲಿಕೆ  

ಆರೋನನ ಸಂತಾನದವರು - ಆರೋನನ ಮಗನು ಎಲ್ಲಾಜಾರ್; ಇವನ ಮಗನು ಫೀನೆಹಾಸ್; ಇವನ ಮಗನು ಅಬೀಷೂವ;


ಆರೋನನ ಮಗನಾದ ಎಲ್ಲಾಜಾರನು ಪೂಟಿಯೇಲನ ಹೆಣ್ಣು ಮಕ್ಕಳೊಳಗೆ ಒಬ್ಬಾಕೆಯನ್ನು ಮದುವೆ ಮಾಡಿಕೊಂಡನು. ಆಕೆ ಅವನಿಗೆ ಫೀನೆಹಾಸನನ್ನು ಹೆತ್ತಳು. ಅವರವರ ಗೋತ್ರದ ಮೇರೆಗೆ ಇವರೇ ಲೇವಿಯರ ಪೂರ್ವಿಕರು.


ಫೀನೆಹಾಸನ ಸಂತಾನದವರಲ್ಲಿ ಗೇರ್ಷೋಮ್; ಈತಾಮಾರನ ಸಂತಾನದವರಲ್ಲಿ ದಾನಿಯೇಲ್;


ಆಗ ಎಲ್ಲಾಜಾರನ ಮಗನಾದ ಫೀನೆಹಾಸನು ಅವರ ನಾಯಕನಾಗಿದ್ದನು; ಯೆಹೋವನು ಇವನ ಸಂಗಡ ಇದ್ದನು.


ಆರೋನನ ಮೊಮ್ಮಗನೂ ಎಲ್ಲಾಜಾರನ ಮಗನೂ ಆದ ಫೀನೆಹಾಸನು ಯಾಜಕಸೇವೆಮಾಡುತ್ತಿದ್ದನು. ಹೀಗಿರುವದರಿಂದ ಇಸ್ರಾಯೇಲ್ಯರು - ನಾವು ನಮ್ಮ ಬಂಧುಗಳಾದ ಬೆನ್ಯಾಮೀನ್ಯರೊಡನೆ ಯುದ್ಧಕ್ಕೆ ಹೋಗಬೇಕೋ ಬೇಡವೋ ಎಂದು ಯೆಹೋವನನ್ನು ಕೇಳಿದರು. ಆತನು ಅವರಿಗೆ - ಹೋಗಿರಿ, ನಾಳೆ ಅವರನ್ನು ನಿಮ್ಮ ಕೈಗೆ ಒಪ್ಪಿಸುವೆನು ಅಂದನು.


ಆರೋನನ ಮಗನಾದ ಎಲ್ಲಾಜಾರನೂ ಮರಣ ಹೊಂದಿದನು. ಅವನ ಶವವನ್ನು ಎಫ್ರಾಯೀಮ್ ಪರ್ವತಪ್ರಾಂತದಲ್ಲಿ ಅವನ ಮಗನಾದ ಫೀನೆಹಾಸನ ಪಾಲಿಗೆ ಬಂದ ಗುಡ್ಡದಲ್ಲಿ ಸಮಾಧಿಮಾಡಿದರು.


ಆದರೆ ಮೊದಲು ಗಿಲ್ಯಾದಿನಲ್ಲಿರುವ ರೂಬೇನ್ಯರು, ಗಾದ್ಯರು, ಮನಸ್ಸೆಕುಲದ ಅರ್ಧಜನರು ಇವರ ಬಳಿಗೆ ಮಹಾಯಾಜಕ ಎಲ್ಲಾಜಾರನ ಮಗನಾದ ಫೀನೆಹಾಸನನ್ನೂ


ಮೋಶೆಯು ಇವರನ್ನು ಯುದ್ಧಕ್ಕೆ ಕಳುಹಿಸುವಾಗ ಮಹಾಯಾಜಕನಾದ ಎಲ್ಲಾಜಾರನ ಮಗ ಫೀನೆಹಾಸನಿಗೆ - ದೇವರ ಸಾಮಾನುಗಳನ್ನೂ ಆಜ್ಞಾತುತೂರಿಗಳನ್ನೂ ತೆಗೆದುಕೊಂಡು ಅವರೊಡನೆ ಹೋಗಬೇಕೆಂದು ಆಜ್ಞಾಪಿಸಿದನು.


ಆ ಒಡಂಬಡಿಕೆ ಏನಂದರೆ, ಅವನಿಗೂ ಅವನ ತರುವಾಯ ಅವನ ಸಂತತಿಯವರಿಗೂ ಯಾಜಕತ್ವವು ಶಾಶ್ವತವಾಗಿಯೇ ಇರುವದೆಂದು ಮಾತುಕೊಡುತ್ತೇನೆ. ಅವನು ತನ್ನ ದೇವರ ಗೌರವವನ್ನು ಸ್ಥಾಪಿಸಿ ಇಸ್ರಾಯೇಲ್ಯರಿಗೋಸ್ಕರ ದೋಷಪರಿಹಾರವನ್ನು ಮಾಡಿದ್ದರಿಂದ ನಾನು ಅವನಿಗೆ ಈ ಮಾತನ್ನು ಕೊಟ್ಟಿದ್ದೇನೆ ಎಂದು ಹೇಳಿದನು.


ಅಹೀಟೂಬನ ಮಗನಾದ ಚಾದೋಕನೂ ಅಹೀಮೆಲೆಕನ ಮಗನಾದ ಎಬ್ಯಾತಾರನೂ ಅವನ ಯಾಜಕರು;


ಅಮ್ರಾಮನ ಮಕ್ಕಳು - ಆರೋನ್, ಮೋಶೆ, ವಿುರ್ಯಾಮ್. ಆರೋನನ ಮಕ್ಕಳು - ನಾದಾಬ್, ಅಬೀಹೂ, ಎಲ್ಲಾಜಾರ್, ಈತಾಮಾರ್.


ಆಗ ಯೆಹೋಶುವನು ಯೆಫುನ್ನೆಯ ಮಗನಾದ ಕಾಲೇಬನನ್ನು ಆಶೀರ್ವದಿಸಿ ಹೆಬ್ರೋನ್ ಪಟ್ಟಣವನ್ನು ಅವನಿಗೆ ಸ್ವಾಸ್ತ್ಯವಾಗಿ ಕೊಟ್ಟನು.


ಅದರ ಮುಂಚಿನ ಹೆಸರು ಕಿರ್ಯತ್ಅರ್ಬ ಎಂಬದು. ಅರ್ಬ ಎಂಬವನು ಉನ್ನತ ಪುರುಷರಲ್ಲಿ ಪ್ರಮುಖನು. ಯುದ್ಧವು ನಿಂತು ದೇಶದಲ್ಲಿ ಸಮಾಧಾನವುಂಟಾಯಿತು.


ಮೆರಾರೀಯ ಮಕ್ಕಳು - ಮಹ್ಲೀ, ಮೂಷೀ ಎಂಬವರು. ಮಹ್ಲೀಯ ಮಕ್ಕಳು - ಎಲ್ಲಾಜಾರ್, ಕೀಷ್ ಇವರು.


ಮೆರಾರೀಯ ಮಕ್ಕಳು - ಮಹ್ಲೀ, ಮೂಷೀ ಎಂಬವರು. ಅವನ ಮತ್ತೊಬ್ಬ ಮಗನಾದ ಯಾಜ್ಯನ ವಂಶದವರು.


ನಮ್ಮ ದೇವರ ಕೃಪಾಹಸ್ತಪಾಲನೆಯು ನಮಗೆ ದೊರಕಿದ್ದರಿಂದ ಅವರು ಇಸ್ರಾಯೇಲನ ಮಗನಾದ ಲೇವಿಯ ಕುಲದ ಮಹ್ಲೀ ಸಂತಾನದವರಲ್ಲಿ ಈಸ್ಸೆಕೆಲನನ್ನೂ ಶೇರೇಬ್ಯನನ್ನೂ ಅವನ ಪುತ್ರಭ್ರಾತೃಗಳಲ್ಲಿ ಹದಿನೆಂಟು ಮಂದಿಯನ್ನೂ ಮೆರಾರೀಯರಲ್ಲಿ ಹಷಬ್ಯನನ್ನೂ


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು