Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಪೂರ್ವಕಾಲ ವೃತ್ತಾಂತ 6:31 - ಕನ್ನಡ ಸತ್ಯವೇದವು J.V. (BSI)

31 ಮಂಜೂಷವು ವಿಶ್ರಾಂತಿಹೊಂದಿದ ಮೇಲೆ ದಾವೀದನಿಂದ ಯೆಹೋವನ ಆಲಯದಲ್ಲಿ ವಾದ್ಯ ಸೇವೆಗೆ ನೇವಿುಸಲ್ಪಟ್ಟವರ ಪಟ್ಟಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

31 ಮಂಜೂಷವು ವಿಶ್ರಾಂತಿಹೊಂದಿದ ಮೇಲೆ ದಾವೀದನಿಂದ ಯೆಹೋವನ ಆಲಯದಲ್ಲಿ ವಾದ್ಯ ಸೇವೆಗೆ ನೇಮಿಸಲ್ಪಟ್ಟವರ ಪಟ್ಟಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

31 ಮಂಜೂಷವನ್ನು ಜೆರುಸಲೇಮಿಗೆ ತಂದ ತರುವಾಯ ಆರಾಧನಾವಿಧಿಗಾಗಿ ಅರಸ ದಾವೀದನು ಸಂಗೀತಮಂಡಲಿಯನ್ನು ನೇಮಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

31 ದೇವದರ್ಶನಗುಡಾರದ ಮಹಾಪವಿತ್ರಸ್ಥಳದಲ್ಲಿ ಒಡಂಬಡಿಕೆಯ ಪೆಟ್ಟಿಗೆಯನ್ನು ಇಟ್ಟ ಬಳಿಕ ಅರಸನಾದ ದಾವೀದನು ಗಾಯಕರನ್ನು ಆರಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

31 ಮಂಜೂಷವನ್ನು ನೆಲೆಗೊಳಿಸಿದ ತರುವಾಯ ದಾವೀದನು ಯೆಹೋವ ದೇವರ ಮನೆಯಲ್ಲಿ ವಾದ್ಯಗಾರರನ್ನು ನೇಮಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಪೂರ್ವಕಾಲ ವೃತ್ತಾಂತ 6:31
16 ತಿಳಿವುಗಳ ಹೋಲಿಕೆ  

ಜನರು ಯೆಹೋವನ ಮಂಜೂಷವನ್ನು ತಂದು ದಾವೀದನು ಹಾಕಿಸಿದ ಗುಡಾರದೊಳಗೆ ನಿಯವಿುತ ಸ್ಥಳದಲ್ಲಿಟ್ಟರು; ಆಗ ದಾವೀದನು ಯೆಹೋವನಿಗೋಸ್ಕರ ಸರ್ವಾಂಗಹೋಮಗಳನ್ನೂ ಸಮಾಧಾನಯಜ್ಞಗಳನ್ನೂ ಸಮರ್ಪಿಸಿದನು.


ಆತನು - ಇದು ನನ್ನ ಶಾಶ್ವತವಾಸಸ್ಥಾನ; ಇಲ್ಲೇ ಇರುವೆನು; ಇದು ನನಗೆ ಇಷ್ಟವು.


ಯೆಹೋವನೇ, ಎದ್ದು ನಿನ್ನ ಪ್ರತಾಪಯುಕ್ತವಾದ ಮಂಜೂಷದೊಡನೆ ನಿನ್ನ ವಾಸಸ್ಥಾನದಲ್ಲಿ ಸೇರೋಣವಾಗಲಿ.


ದಾವೀದನೂ ಇಸ್ರಾಯೇಲ್ಯರ ಹಿರಿಯರೂ ಸಹಸ್ರಾಧಿಪತಿಗಳೂ ಓಬೇದೆದೋಮನ ಮನೆಯಲ್ಲಿದ್ದ ಯೆಹೋವನ ನಿಬಂಧನ ಮಂಜೂಷವನ್ನು


ಉಳಿದ ಯಾಜಕರೂ ಲೇವಿಯರೂ ದೇವದರ್ಶನದ ಗುಡಾರ, ಅದರಲ್ಲಿದ್ದ ಪರಿಶುದ್ಧವಸ್ತು ಇವುಗಳನ್ನು ಹೊತ್ತರು.


ಇವನ ಮಗನು ಉಜ್ಜ; ಇವನ ಮಗನು ಶಿಮ್ಮಾ; ಇವನ ಮಗನು ಹಗ್ಗೀಯ; ಇವನ ಮಗನು ಅಸಾಯ.


ಸೊಲೊಮೋನನು ಯೆರೂಸಲೇವಿುನಲ್ಲಿ ಯೆಹೋವನ ಆಲಯವನ್ನು ಕಟ್ಟುವ ತನಕ ಅವರು ದೇವದರ್ಶನದ ಗುಡಾರವೆಂಬ ಆಲಯದ ಮುಂದೆ ತಮ್ಮ ಕ್ರಮಾನುಸಾರವಾಗಿ ವಾದ್ಯಸೇವೆಯನ್ನು ನಡಿಸುತ್ತಿದ್ದರು.


ವಾದ್ಯಗಾರರ ಪಟ್ಟಿ. ಅವರು ಲೇವಿಯ ಗೋತ್ರಗಳಲ್ಲಿ ಪ್ರಧಾನರೂ ದೇವಾಲಯದ ಕೋಣೆಗಳಲ್ಲಿ ವಾಸಿಸುವವರೂ ಆಗಿದ್ದರು. ಅವರು ಹಗಲಿರುಳೂ ಕೆಲಸದಲ್ಲಿರುತ್ತಿದ್ದದರಿಂದ ಇತರ ಸೇವೆಯಿಂದ ಬಿಡುಗಡೆ ಹೊಂದಿದ್ದರು.


ದಾವೀದನು ತನ್ನ ನಗರದಲ್ಲಿ ತನಗೋಸ್ಕರ ಮನೆಗಳನ್ನು ಕಟ್ಟಿಸಿದ್ದಲ್ಲದೆ ದೇವಮಂಜೂಷಕ್ಕೋಸ್ಕರವೂ ಸ್ಥಳವನ್ನು ಸಿದ್ಧಮಾಡಿ ಗುಡಾರವನ್ನು ಹಾಕಿಸಿದನು.


ದಾವೀದನೂ ಮಂಜೂಷವನ್ನು ಹೊತ್ತ ಮತ್ತು ವಾದ್ಯಮಾಡುವ ಎಲ್ಲಾ ಲೇವಿಯರೂ ಹೊರುವವರ ಮುಖ್ಯಸ್ಥನಾದ ಕೆನನ್ಯನೂ ನೂಲಿನ ನಿಲುವಂಗಿಗಳನ್ನು ಧರಿಸಿಕೊಂಡಿದ್ದರು. ದಾವೀದನು ಇದರ ಹೊರತಾಗಿ ನಾರಿನ ಏಫೋದನ್ನೂ ಧರಿಸಿಕೊಂಡಿದ್ದನು.


ಕಟ್ಟುವವರು ಯೆಹೋವನ ಮಂದಿರದ ಅಸ್ತಿವಾರವನ್ನು ಹಾಕಿದಾಗ ಇಸ್ರಾಯೇಲ್ಯರ ಅರಸನಾದ ದಾವೀದನು ನೇವಿುಸಿದ ಕ್ರಮಕ್ಕನುಸಾರವಾಗಿ ಯೆಹೋವನನ್ನು ಕೀರ್ತಿಸುವದಕ್ಕೋಸ್ಕರ ದೀಕ್ಷಾವಸ್ತ್ರ ಭೂಷಿತರಾದ ಯಾಜಕರು ತುತೂರಿಗಳೊಡನೆಯೂ ಆಸಾಫನ ಮಕ್ಕಳಾದ ಲೇವಿಯರು ತಾಳಗಳೊಡನೆಯೂ ನಿಂತುಕೊಂಡು


ಆಮೇಲೆ ಅವನು ನನ್ನನ್ನು ಒಳಗಣ ಪ್ರಾಕಾರಕ್ಕೆ ಕರತಂದನು; ಇಗೋ, ಅಲ್ಲಿ ಎರಡು ಕೋಣೆಗಳು ಕಾಣಿಸಿದವು; ಬಡಗಣ ಹೆಬ್ಬಾಗಿಲ ಪಕ್ಕದಲ್ಲಿ ಒಂದು ಕೋಣೆಯು ತೆಂಕಲಿಗೆ ಅಭಿಮುಖವಾಗಿತ್ತು; ತೆಂಕಣ ಹೆಬ್ಬಾಗಿಲ ಪಕ್ಕದಲ್ಲಿ ಇನ್ನೊಂದು ಕೋಣೆಯು ಬಡಗಲಿಗೆ ಅಭಿಮುಖವಾಗಿತ್ತು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು