Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಪೂರ್ವಕಾಲ ವೃತ್ತಾಂತ 5:25 - ಕನ್ನಡ ಸತ್ಯವೇದವು J.V. (BSI)

25 ಅವರು ತಮ್ಮ ಪಿತೃಗಳ ದೇವರಿಗೆ ದ್ರೋಹಿಗಳಾಗಿ ಆತನು ತಮ್ಮ ಮುಂದೆಯೇ ಸಂಹರಿಸಿದ ಆ ದೇಶ ನಿವಾಸಿಗಳ ದೇವರುಗಳನ್ನು ಹಿಂಬಾಲಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

25 ಅವರು ತಮ್ಮ ಪೂರ್ವಿಕರ ದೇವರಿಗೆ ದ್ರೋಹಿಗಳಾಗಿದರು. ಯೆಹೋವನು ತಮ್ಮ ಮುಂದೆಯೇ ಸಂಹರಿಸಿದ ಆ ದೇಶದ ನಿವಾಸಿಗಳ ದೇವರುಗಳನ್ನು ಆರಾಧಿಸತೊಡಗಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

25 ಆದರೆ ಜನರು ತಮ್ಮ ಪಿತೃಗಳ ದೇವರಿಗೆ ಅವಿಧೇಯರಾದರು. ಆ ಪ್ರದೇಶದಿಂದ ದೇವರೇ ಹೊರದೂಡಿದ ಬೇರೆ ಜನಾಂಗಗಳ ದೇವತೆಗಳನ್ನು ಪೂಜಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

25 ಆದರೆ ಆ ಅಧಿಪತಿಗಳು ತಮ್ಮ ಪೂರ್ವಿಕರು ಆರಾಧಿಸುತ್ತಿದ್ದ ದೇವರನ್ನು ಬಿಟ್ಟು ಬೇರೆ ದೇವರುಗಳನ್ನು ಪೂಜಿಸತೊಡಗಿ ತಮ್ಮ ದೇವರ ವಿರುದ್ಧವಾಗಿ ಪಾಪಮಾಡಿದರು. ತಾವು ಸೋಲಿಸಿದ ಅನ್ಯಜನಾಂಗದವರ ದೇವರುಗಳನ್ನು ಇವರು ಆರಾಧಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

25 ಆದರೆ ಅವರು ತಮ್ಮ ಪಿತೃಗಳ ದೇವರಿಗೆ ದ್ರೋಹಿಗಳಾಗಿದ್ದರು. ದೇವರು ತಮ್ಮ ಮುಂದೆ ನಾಶಮಾಡಿದ ಆ ದೇಶದ ಜನರ ದೇವರುಗಳ ಹಿಂದೆ ಜಾರರಾಗಿ ಹೋದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಪೂರ್ವಕಾಲ ವೃತ್ತಾಂತ 5:25
14 ತಿಳಿವುಗಳ ಹೋಲಿಕೆ  

ಅವಳ ಹಣೆಯ ಮೇಲೆ - ಬಾಬೆಲೆಂಬ ಮಹಾನಗರಿ, ಭೂವಿುಯಲ್ಲಿರುವ ಜಾರಸ್ತ್ರೀಯರಿಗೂ ಅಸಹ್ಯವಾದ ಕಾರ್ಯಗಳಿಗೂ ತಾಯಿ ಎಂದು ಗೂಢಾರ್ಥವುಳ್ಳ ಹೆಸರು ಬರೆದಿತ್ತು.


ಯೆಹೋವನು ಹೋಶೇಯನ ಸಂಗಡ ಮೊದಲು ಮಾತಾಡಿದಾಗ ಆತನು ಅವನಿಗೆ - ನೀನು ಹೋಗಿ ವ್ಯಭಿಚಾರಿಣಿಯನ್ನು ಮದುವೆಮಾಡಿಕೊಂಡು ವ್ಯಭಿಚಾರದಿಂದಾಗುವ ಮಕ್ಕಳನ್ನು ಸೇರಿಸಿಕೋ; ದೇಶವು ನನ್ನನ್ನು ಬಿಟ್ಟು ಅಧಿಕ ವ್ಯಭಿಚಾರವನ್ನು ನಡಿಸುತ್ತದೆಂಬದಕ್ಕೆ ಇದು ದೃಷ್ಟಾಂತವಾಗಿರಲಿ ಎಂದು ಹೇಳಿದನು.


ನೀವು ಆ ದೇಶದ ನಿವಾಸಿಗಳ ಸಂಗಡ ಒಡಂಬಡಿಕೆಮಾಡಿಕೊಳ್ಳದಂತೆ ಜಾಗರೂಕರಾಗಿರಿ, ಮಾಡಿಕೊಂಡರೆ ಅವರು ತಮ್ಮ ದೇವತೆಗಳನ್ನು ಪೂಜಿಸಿ ಯಜ್ಞಗಳನ್ನು ಮಾಡುವಾಗ ಅವರಲ್ಲಿ ಒಬ್ಬನು ಯಜ್ಞ ಭೋಜನಕ್ಕೆ ನಿಮ್ಮನ್ನೂ ಕರೆದಾನು, ನೀವು ಹೋಗಿ ಭೋಜನ ಮಾಡೀರಿ;


ಇಸ್ರಾಯೇಲೇ, ಜನಾಂಗಗಳಂತೆ ವಿುತಿಮೀರಿ ಉಲ್ಲಾಸಿಸಬೇಡ; ನೀನು ನಿನ್ನ ದೇವರನ್ನು ಬಿಟ್ಟು ಸೂಳೆತನ ನಡಿಸಿದ್ದೀ; ಎಲ್ಲಾ ಕಣಗಳಲ್ಲಿನ ಫಲವನ್ನು ಅದರ ಪ್ರತಿಫಲವನ್ನಾಗಿ ಆಶಿಸಿದ್ದೀ.


ಗಿದ್ಯೋನನು ಸತ್ತನಂತರ ಇಸ್ರಾಯೇಲ್ಯರು ದೇವದ್ರೋಹಿಗಳಾಗಿ ಬಾಳನ ಪ್ರತಿಮೆಗಳನ್ನು ಪೂಜಿಸಿದರು; ಬಾಳ್‍ಬೆರೀತನನ್ನು ತಮಗೆ ದೇವರು ಮಾಡಿಕೊಂಡರು.


ಇಸ್ರಾಯೇಲ್ಯರು ಅವರ ಮಾತನ್ನೂ ಕೇಳದೆ ಅನ್ಯದೇವತೆಗಳನ್ನು ಪೂಜಿಸಿ ಅವುಗಳಿಗೆ ಅಡ್ಡಬಿದ್ದು ದೇವದ್ರೋಹಿಗಳಾದರು. ಯೆಹೋವನ ಆಜ್ಞೆಗಳನ್ನು ಕೈಕೊಳ್ಳುತ್ತಿದ್ದ ತಮ್ಮ ಪಿತೃಗಳ ಮಾರ್ಗವನ್ನು ಬೇಗನೆ ಬಿಟ್ಟುಬಿಟ್ಟರು; ಅವರಂತೆ ನಡೆಯಲೇ ಇಲ್ಲ.


ತಮ್ಮ ಪಿತೃಗಳನ್ನು ಐಗುಪ್ತದಿಂದ ಕರತಂದ ದೇವರಾದ ಯೆಹೋವನನ್ನು ಬಿಟ್ಟು ಅನ್ಯದೇವತೆಗಳನ್ನು ಅಂದರೆ ತಮ್ಮ ಸುತ್ತಣ ಜನಾಂಗಗಳ ದೇವರುಗಳನ್ನು ಅವಲಂಬಿಸಿ ಅವುಗಳಿಗೆ ಅಡ್ಡಬಿದ್ದು ಯೆಹೋವನನ್ನು ರೇಗಿಸಿದರು.


ಅಶ್ಶೂರ್‍ದೇಶದ ಅರಸನಾದ ಪೂಲನೆಂಬವನು ಇಸ್ರಾಯೇಲ್‍ದೇಶಕ್ಕೆ ವಿರೋಧವಾಗಿ ಬಂದಾಗ ಮೆನಹೇಮನು ಅವನ ಮುಖಾಂತರವಾಗಿ ತನ್ನ ಅರಸುತನವನ್ನು ದೃಢಪಡಿಸಿಕೊಳ್ಳುವದಕ್ಕೋಸ್ಕರ ಅವನಿಗೆ ಸಾವಿರ ತಲಾಂತು ಬೆಳ್ಳಿಯನ್ನು ಕೊಟ್ಟನು.


ಅವರ ಗೋತ್ರಗಳ ಪ್ರಧಾನ ಪುರುಷರು - ಏಫೆರ್, ಇಷ್ಷೀ, ಎಲೀಯೇಲ್, ಅಜ್ರೀಯೇಲ್, ಯೆರೆಮೀಯ. ಹೋದವ್ಯ, ಯೆಹ್ತೀಯೇಲ್. ಇವರು ರಣವೀರರೂ ಹೆಸರುಗೊಂಡವರೂ ಗೋತ್ರ ಪ್ರಧಾನರೂ ಆಗಿರುವವರು.


ಎಲ್ಲಾ ಇಸ್ರಾಯೇಲ್ಯರು ವಂಶಾವಳಿಗಳಲ್ಲಿ ಲಿಖಿತರಾದರು; ಅವರ ಹೆಸರುಗಳು ಇಸ್ರಾಯೇಲ್ಯರ ಅರಸರ ಪುಸ್ತಕದಲ್ಲಿ ಬರೆದಿರುತ್ತವೆ. ಯೆಹೂದ್ಯರು ದೇವದ್ರೋಹಿಗಳಾದದರಿಂದ ಬಾಬೆಲಿಗೆ ಸೆರೆಯವರಾಗಿ ಹೋಗಬೇಕಾಯಿತು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು