1 ಪೂರ್ವಕಾಲ ವೃತ್ತಾಂತ 4:41 - ಕನ್ನಡ ಸತ್ಯವೇದವು J.V. (BSI)41 ಮೇಲೆ ಹೇಳಿದ ಪ್ರಭುಗಳು ಯೆಹೂದ ರಾಜನಾದ ಹಿಜ್ಕೀಯನ ಕಾಲದಲ್ಲಿ ಅಲ್ಲಿಗೆ ಹೋಗಿ [ಆ ಹಾಮ್ಯರ] ಪಾಳೆಯಗಳನ್ನೂ ಅಲ್ಲಿ ಸಿಕ್ಕಿದ ಮೆಗೂನ್ಯರನ್ನೂ ಜಯಿಸಿ ಎಲ್ಲರನ್ನೂ ನಿರ್ನಾಮಮಾಡಿದರು; ಮತ್ತು ತಮ್ಮ ಆಡುಕುರಿಗಳಿಗೆ ಅಲ್ಲಿ ಮೇವು ಸಿಕ್ಕಿದದರಿಂದ ಅಲ್ಲೇ ವಾಸಿಸಿದರು. ಅಲ್ಲಿನ ಮೂಲನಿವಾಸಿಗಳು ಈಗ ಯಾರೂ ಉಳಿದಿರುವದಿಲ್ಲ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201941 ಮೇಲೆ ಹೇಳಿದ ಪ್ರಭುಗಳು ಯೆಹೂದ ರಾಜನಾದ ಹಿಜ್ಕೀಯನ ಕಾಲದಲ್ಲಿ ಅಲ್ಲಿಗೆ ಹೋಗಿ ಆ ಹಾಮ್ಯರ ಪಾಳೆಯಗಳನ್ನೂ, ಅಲ್ಲಿ ಸಿಕ್ಕಿದ ಮೆಗೂನ್ಯರನ್ನೂ ಗೆದ್ದು, ಎಲ್ಲರನ್ನೂ ನಿರ್ನಾಮಮಾಡಿದರು. ಅವರು ತಮ್ಮ ಆಡುಕುರಿಗಳಿಗೆ ಅಲ್ಲಿ ಮೇವು ಸಿಕ್ಕಿದ್ದರಿಂದ ಅಲ್ಲೇ ವಾಸಿಸಿದರು. ಅಲ್ಲಿನ ಮೂಲನಿವಾಸಿಗಳು ಯಾರೂ ಉಳಿಯಲಿಲ್ಲ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)41 ಯೆಹೂದದ ಅರಸ ಹಿಜ್ಕೀಯನ ಕಾಲದಲ್ಲಿ ಮೇಲೆ ನಮೂದಿಸಿದ ಪುರುಷರು ಅಲ್ಲಿ ವಾಸಿಸುತ್ತಿದ್ದ ಹಾಮ್ಯರನ್ನೂ ಮೆಗೂನ್ಯರನ್ನೂ ಜಯಿಸಿ ಎಲ್ಲರನ್ನೂ ನಿರ್ನಾಮ ಮಾಡಿದರು. ತಮ್ಮ ಆಡುಕುರಿಗಳಿಗಾಗಿ ಧಾರಾಳವಾಗಿ ಹುಲ್ಲುಗಾವಲುಗಳಿದ್ದುದರಿಂದ ಅಲ್ಲಿಯೇ ಸ್ಥಿರವಾಗಿ ನೆಲೆಸಿದರು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್41 ಯೆಹೂದದ ಅರಸನಾಗಿದ್ದ ಹಿಜ್ಕೀಯನ ಕಾಲದಲ್ಲಿ ಇದು ಆಯಿತು. ಇವರು ಗೆದೋರಿಗೆ ಬಂದು ಹಾಮನ ಸಂತತಿಯವರೊಂದಿಗೆ ಯುದ್ಧಮಾಡಿ ಅವರ ಗುಡಾರಗಳನ್ನು ನಾಶಮಾಡಿದರು. ಅಲ್ಲದೆ ಮೆಗೂನ್ಯರ ವಿರುದ್ಧವಾಗಿ ಯುದ್ಧಮಾಡಿ ಅಲ್ಲಿ ನೆಲೆಸಿದರು. ಇವರು ಮೆಗೂನ್ಯರನ್ನೆಲ್ಲಾ ನಾಶಮಾಡಿದರು. ಇಂದಿನವರೆಗೂ ಮೆಗೂನ್ಯರಲ್ಲಿ ಯಾರೂ ಉಳಿದಿಲ್ಲ. ಹೀಗೆ ಆ ಸ್ಥಳದಲ್ಲಿ ಅವರು ನೆಲೆಸಿದರು; ಯಾಕೆಂದರೆ ಅವರ ಪಶುಗಳಿಗೆ ಅಲ್ಲಿ ಸಾಕಷ್ಟು ಹುಲ್ಲಿತ್ತು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ41 ಹೆಸರು ಹೆಸರಾಗಿ ಬರೆದಿರುವವರಾದ ಇವರು ಯೆಹೂದದ ಅರಸನಾದ ಹಿಜ್ಕೀಯನ ದಿವಸಗಳಲ್ಲಿ ಅಲ್ಲಿಗೆ ಹೋಗಿ ಹಾಮ್ಯರ ಡೇರೆಗಳನ್ನೂ ಅಲ್ಲಿ ಸಿಕ್ಕಿದ ಮೆಗೂನ್ಯರನ್ನೂ ಸಂಪೂರ್ಣವಾಗಿ ನಾಶಮಾಡಿದರು. ಅಲ್ಲಿ ತಮ್ಮ ಮಂದೆಗಳಿಗೆ ಮೇವು ಇರುವುದರಿಂದ ಇಂದಿನವರೆಗೂ ಅವರ ಸ್ಥಳದಲ್ಲಿ ವಾಸಿಸಿದರು. ಅಧ್ಯಾಯವನ್ನು ನೋಡಿ |