1 ಪೂರ್ವಕಾಲ ವೃತ್ತಾಂತ 29:22 - ಕನ್ನಡ ಸತ್ಯವೇದವು J.V. (BSI)22 ಯೆಹೋವನ ಸನ್ನಿಧಿಯಲ್ಲಿ ಮಹಾ ಸಂತೋಷದಿಂದ ಅನ್ನಪಾನಗಳನ್ನು ತೆಗೆದುಕೊಂಡರು. ಅವರು ದಾವೀದನ ಮಗನಾದ ಸೊಲೊಮೋನನನ್ನು ತಿರಿಗಿ ಅರಸನನ್ನಾಗಿ ಆರಿಸಿಕೊಂಡು ಪ್ರಭುವಾಗುವದಕ್ಕೂ ಚಾದೋಕನನ್ನು ಯಾಜಕನಾಗುವದಕ್ಕೂ ಅಭಿಷೇಕಿಸಿ ಯೆಹೋವನಿಗೋಸ್ಕರ ಪ್ರತಿಷ್ಠಿಸಿದರು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201922 ಜನರು ದಾವೀದನ ಮಗನಾದ ಸೊಲೊಮೋನನನ್ನು ಪುನಃ ಅರಸನನ್ನಾಗಿ ಆರಿಸಿಕೊಂಡು ಅವನನ್ನು ರಾಜನನ್ನಾಗಿಸಿವುದಕ್ಕೂ, ಚಾದೋಕನನ್ನು ಯಾಜಕನಾಗುವುದಕ್ಕೂ ಅಭಿಷೇಕಿಸಿ ಯೆಹೋವನಿಗೋಸ್ಕರ ಪ್ರತಿಷ್ಠಿಸಿದರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)22 ಸರ್ವೇಶ್ವರನ ಸನ್ನಿಧಿಯಲ್ಲಿ ಮಹಾಸಂತೋಷದಿಂದ ಅನ್ನಪಾನಗಳನ್ನು ತೆಗೆದುಕೊಂಡರು. ದಾವೀದನ ಮಗ ಸೊಲೊಮೋನನನ್ನು ಮತ್ತೆ ಅರಸನನ್ನಾಗಿ ಆರಿಸಿಕೊಂಡು, ಅವನು ರಾಜನಾಗುವುದಕ್ಕೂ ಚಾದೋಕನು ಯಾಜಕನಾಗುವುದಕ್ಕೂ ಅಭಿಷೇಕಿಸಿ, ಸರ್ವೇಶ್ವರನಿಗೆ ಪ್ರತಿಷ್ಠಿಸಿದರು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್22 ಆ ದಿವಸ ಸೇರಿಬಂದ ಜನರು ಯೆಹೋವನ ಸನ್ನಿಧಿಯಲ್ಲಿ ಅನ್ನಪಾನಗಳನ್ನು ತೆಗೆದುಕೊಂಡು ಉಲ್ಲಾಸಿಸಿದರು. ಅವರು ದಾವೀದನ ಮಗನಾದ ಸೊಲೊಮೋನನನ್ನು ತಿರಿಗಿ ಅರಸನನ್ನಾಗಿಯೂ ಚಾದೋಕನನ್ನು ಮಹಾಯಾಜಕನನ್ನಾಗಿಯೂ ಯೆಹೋವನ ಸನ್ನಿಧಿಯಲ್ಲಿ ಅಭಿಷೇಕಿಸಿದರು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ22 ಆ ದಿವಸದಲ್ಲಿ ಮಹಾ ಸಂತೋಷದಿಂದ ಯೆಹೋವ ದೇವರ ಮುಂದೆ ತಿಂದು ಕುಡಿದರು. ಎರಡನೆಯ ಸಾರಿ ದಾವೀದನ ಮಗ ಸೊಲೊಮೋನನನ್ನು ಅರಸನನ್ನಾಗಿ ಸ್ವೀಕರಿಸಿದರು. ಯೆಹೋವ ದೇವರ ಮುಂದೆ ಅವನನ್ನು ನಾಯಕನಾಗಿಯೂ ಚಾದೋಕನನ್ನು ಯಾಜಕನಾಗಿಯೂ ಅಭಿಷೇಕಿಸಿದರು. ಅಧ್ಯಾಯವನ್ನು ನೋಡಿ |
ಇದಲ್ಲದೆ ಇಸ್ಸಾಕಾರ್ ಜೆಬುಲೂನ್ ನಫ್ತಾಲಿ ಮೊದಲುಗೊಂಡು ಎಲ್ಲಾ ಸಮೀಪ ಪ್ರಾಂತಗಳವರು ಎತ್ತು, ಕತ್ತೆ, ಹೇಸರಕತ್ತೆ, ಒಂಟೆ ಇವುಗಳ ಮೇಲೆ ಆಹಾರಪದಾರ್ಥಗಳನ್ನು ಹೇರಿಕೊಂಡು ಬಂದರು. ಅವರು ತಂದವುಗಳಾವವಂದರೆ - ತರತರದ ರೊಟ್ಟಿ, ಅಂಜೂರ ಹಣ್ಣಿನ ಉಂಡೆ, ಒಣಗಿದ ದ್ರಾಕ್ಷೇಗೊಂಚಲು, ದ್ರಾಕ್ಷಾರಸ, ಎಣ್ಣೆ, ಅನೇಕ ದನಕುರಿಗಳು ಇವೇ. ಇಸ್ರಾಯೇಲ್ಯರೊಳಗೆ ಮಹಾ ಸಂತೋಷವಿತ್ತಷ್ಟೆ.