1 ಪೂರ್ವಕಾಲ ವೃತ್ತಾಂತ 28:8 - ಕನ್ನಡ ಸತ್ಯವೇದವು J.V. (BSI)8 ನಿಮ್ಮ ದೇವರಾದ ಯೆಹೋವನ ಎಲ್ಲಾ ಆಜ್ಞೆಗಳನ್ನು ಧ್ಯಾನಿಸಿ ಕೈಕೊಳ್ಳಬೇಕೆಂದು ಯೆಹೋವನ ಮಂಡಲಿಯಾದ ಸಮಸ್ತ ಇಸ್ರಾಯೇಲ್ಯರ ಎದುರಿನಲ್ಲಿ ನಮ್ಮ ದೇವರಿಗೆ ಕೇಳಿಸುವಂತೆ ನಿಮ್ಮನ್ನು ಎಚ್ಚರಿಸುತ್ತೇನೆ. ಹಾಗೆ ಮಾಡಿದರೆ ಈ ಒಳ್ಳೇ ದೇಶವು ಸದಾಕಾಲ ನಿಮ್ಮ ಮತ್ತು ನಿಮ್ಮ ಸಂತಾನದವರ ಸ್ವಾಸ್ತ್ಯವಾಗಿರುವದು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20198 ಆದುದರಿಂದ ನಿಮ್ಮ ದೇವರಾದ ಯೆಹೋವನ ಎಲ್ಲಾ ಆಜ್ಞೆಗಳನ್ನು ಧ್ಯಾನಿಸಿ ಕೈಕೊಳ್ಳಬೇಕೆಂದು ಯೆಹೋವನ ಸಭೆಯಾದ ಸಮಸ್ತ ಇಸ್ರಾಯೇಲರ ಎದುರಿನಲ್ಲಿ ನಮ್ಮ ದೇವರಿಗೆ ಕೇಳಿಸುವಂತೆ ನಿಮ್ಮನ್ನು ಎಚ್ಚರಿಸುತ್ತೇನೆ. ಹಾಗೆ ಮಾಡಿದರೆ ಈ ಒಳ್ಳೆಯ ದೇಶವು ಸದಾಕಾಲ ನಿಮ್ಮ ಮತ್ತು ನಿಮ್ಮ ಸಂತಾನದವರ ಸ್ವತ್ತಾಗಿರುವುದು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)8 “ನಿಮ್ಮ ದೇವರಾದ ಸರ್ವೇಶ್ವರನ ಎಲ್ಲಾ ಆಜ್ಞೆಗಳನ್ನು ಧ್ಯಾನಿಸಿ ಕೈಗೊಳ್ಳಬೇಕೆಂದು ಸರ್ವೇಶ್ವರನ ಸಮಾಜವಾದ ಸಮಸ್ತ ಇಸ್ರಯೇಲರ ಮುಂದೆ, ನಮ್ಮ ದೇವರಿಗೆ ಕೇಳಿಸುವಂತೆ, ನಿಮ್ಮನ್ನು ಎಚ್ಚರಿಸುತ್ತೇನೆ. ಹಾಗೆ ಮಾಡಿದರೆ ಈ ಒಳ್ಳೆಯ ನಾಡು ಸದಾಕಾಲ ನಿಮ್ಮ ಮತ್ತು ನಿಮ್ಮ ಸಂತಾನದವರ ಸೊತ್ತಾಗಿರುವುದು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್8 “ನಾನು ದೇವರ ಸನ್ನಿಧಾನದಲ್ಲಿಯೂ ಎಲ್ಲಾ ಇಸ್ರೇಲರ ಮುಂದೆಯೂ ನಿಮಗಿದನ್ನು ಹೇಳುತ್ತಿದ್ದೇನೆ. ನಿಮ್ಮ ದೇವರಾದ ಯೆಹೋವನ ಎಲ್ಲಾ ಆಜ್ಞೆಗಳಿಗೆ ವಿಧೇಯರಾಗಿರಿ. ಆಗ ನೀವು ಉತ್ತಮವಾದ ಈ ದೇಶವನ್ನು ಅನುಭವಿಸುವಿರಿ; ನಿಮ್ಮ ಸಂತತಿಯವರೂ ಇದರ ಸುಖವನ್ನು ಅನುಭವಿಸುವಂತೆ ಮಾಡುವಿರಿ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ8 “ಆದ್ದರಿಂದ ನೀವು ಈ ಉತ್ತಮ ದೇಶವನ್ನು ಸ್ವಾಧೀನಮಾಡಿಕೊಂಡು, ಅದನ್ನು ನಿರಂತರದಲ್ಲಿ ನಿಮ್ಮ ತರುವಾಯ ಇರುವ ನಿಮ್ಮ ಮಕ್ಕಳಿಗೆ ಬಾಧ್ಯತೆಯಾಗಿ ಕೊಡುವ ಹಾಗೆ, ಯೆಹೋವ ದೇವರ ಸಭೆಯಾದ ಸಮಸ್ತ ಇಸ್ರಾಯೇಲಿನ ಸಮ್ಮುಖದಲ್ಲಿಯೂ, ನಮ್ಮ ದೇವರು ಕೇಳಿಸುವಂತೆ ನಿಮ್ಮ ದೇವರಾದ ಯೆಹೋವ ದೇವರ ಆಜ್ಞೆಗಳನ್ನೆಲ್ಲಾ ಹುಡುಕಿ ಕೈಗೊಳ್ಳಿರಿ ಎಂದು ಎಚ್ಚರಿಸುತ್ತೇನೆ. ಅಧ್ಯಾಯವನ್ನು ನೋಡಿ |
ಹೀಗಿರಲಾಗಿ ನೀವು ನಿಮ್ಮ ಹೆಣ್ಣುಮಕ್ಕಳನ್ನು ಅವರ ಗಂಡುಮಕ್ಕಳಿಗೆ ಕೊಡಲೂಬಾರದು, ನಿಮ್ಮ ಗಂಡುಮಕ್ಕಳಿಗೋಸ್ಕರ ಅವರ ಹೆಣ್ಣು ಮಕ್ಕಳನ್ನು ತೆಗೆದುಕೊಳ್ಳಲೂಬಾರದು, ಅವರಿಗೋಸ್ಕರ ಸುಖಕ್ಷೇಮಗಳನ್ನು ಎಂದಿಗೂ ಬಯಸಬಾರದು. ಈ ಪ್ರಕಾರ ನಡೆದರೆ ನೀವು ಬಲಗೊಂಡು ಆ ದೇಶದ ಸಮೃದ್ಧಿಯನ್ನು ಅನುಭವಿಸಿ ಅದನ್ನು ನಿಮ್ಮ ಸಂತಾನದವರಿಗೆ ಶಾಶ್ವತಸ್ವಾಸ್ತ್ಯವನ್ನಾಗಿ ಬಿಡುವಿರಿ ಎಂದು ಹೇಳಿದಿಯಲ್ಲಾ.
ನನ್ನ ಮಗನಾದ ಸೊಲೊಮೋನನೇ, ನೀನಂತೂ ನಿನ್ನ ತಂದೆಯ ದೇವರನ್ನು ಅರಿತುಕೊಂಡು ಸಂಪೂರ್ಣಹೃದಯದಿಂದಲೂ ಮನಸ್ಸಂತೋಷದಿಂದಲೂ ಆತನನ್ನೇ ಸೇವಿಸು; ಯೆಹೋವನು ಎಲ್ಲಾ ಹೃದಯಗಳನ್ನು ವಿಚಾರಿಸುವವನೂ ಎಲ್ಲಾ ಮನಸ್ಸಂಕಲ್ಪಗಳನ್ನು ಬಲ್ಲವನೂ ಆಗಿರುತ್ತಾನಲ್ಲಾ. ನೀನು ಆತನನ್ನು ಹುಡುಕುವದಾದರೆ ಆತನು ನಿನಗೆ ಸಿಕ್ಕುವನು. ಆತನನ್ನು ಬಿಟ್ಟರೆ ನಿನ್ನನ್ನು ಶಾಶ್ವತವಾಗಿ ತಳ್ಳಿಬಿಡುವನು.