Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಪೂರ್ವಕಾಲ ವೃತ್ತಾಂತ 26:20 - ಕನ್ನಡ ಸತ್ಯವೇದವು J.V. (BSI)

20 ಮೇಲೆ ಕಂಡವರ ಕುಲಬಂಧುಗಳೂ ದೇವಾಲಯದ ಭಂಡಾರ, ಪರಿಶುದ್ಧವಸ್ತುಗಳ ಭಂಡಾರ ಇವುಗಳನ್ನು ಕಾಯುವವರೂ ಆದ ಲೇವಿಯರ ಪಟ್ಟಿ -

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

20 ಲೇವಿಯನಾದ ಅಹೀಯನು ಮೇಲೆ ಹೇಳಿರುವವರ ಕುಲಬಂಧುಗಳೂ, ದೇವಾಲಯದ ಭಂಡಾರ, ಪರಿಶುದ್ಧ ವಸ್ತುಗಳ ಭಂಡಾರ ಇವುಗಳನ್ನು ಕಾಯುತ್ತಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

20 ಮೇಲೆ ಕಂಡವರ ಕುಲಬಂಧುಗಳೂ ಹಾಗೂ ದೇವಾಲಯದ ಭಂಡಾರ, ಪರಿಶುದ್ಧ ವಸ್ತುಗಳ ಭಂಡಾರ ಇವುಗಳನ್ನು ಕಾಯುವ ಲೇವಿಯರ ಪಟ್ಟಿ:

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

20 ಅಹೀಯನು ಲೇವಿ ಕುಲದವನಾಗಿದ್ದನು. ಇವನು ದೇವಾಲಯದ ಬೆಲೆಬಾಳುವ ವಸ್ತುಗಳ ಅಧಿಕಾರಿಯಾಗಿದ್ದನು. ಅಲ್ಲದೆ ಪವಿತ್ರ ಸಾಮಾಗ್ರಿಗಳನ್ನು ಇಡುವ ಸ್ಥಳದ ಮೇಲೆಯೂ ಇವನು ಅಧಿಕಾರಿಯಾಗಿದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

20 ಇದಲ್ಲದೆ ಲೇವಿಯರಲ್ಲಿ ಅಹೀಯನು ದೇವರ ಆಲಯದ ಬೊಕ್ಕಸದ ಮೇಲೆಯೂ, ಪ್ರತಿಷ್ಠಿತವಾದವುಗಳ ಬೊಕ್ಕಸಗಳ ಮೇಲೆಯೂ ಅಧಿಕಾರಿಯಾಗಿದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಪೂರ್ವಕಾಲ ವೃತ್ತಾಂತ 26:20
21 ತಿಳಿವುಗಳ ಹೋಲಿಕೆ  

ಯೆಹೀಯೇಲ್ಯರಾದ ಜೇತಾಮನೂ ಯೋವೇಲನೆಂಬ ಅವನ ತಮ್ಮನೂ ಯೆಹೋವನ ಆಲಯದ ಭಂಡಾರಗಳನ್ನು ಕಾಯುವವರಾಗಿದ್ದರು.


ನನ್ನ ಆಲಯವು ಆಹಾರಶೂನ್ಯವಾಗದಂತೆ ನೀವು ದಶಮಾಂಶ ಯಾವತ್ತನ್ನೂ ಬಂಡಾರಕ್ಕೆ ತೆಗೆದುಕೊಂಡು ಬನ್ನಿರಿ; ನಾನು ಪರಲೋಕದ ದ್ವಾರಗಳನ್ನು ತೆರೆದು ನಿಮ್ಮಲ್ಲಿ ಸ್ಥಳ ಹಿಡಿಯಲಾಗದಷ್ಟು ಸುವರವನ್ನು ಸುರಿಯುವೆನೋ ಇಲ್ಲವೋ ನನ್ನನ್ನು ಹೀಗೆ ಪರೀಕ್ಷಿಸಿರಿ; ಇದು ಸೇನಾಧೀಶ್ವರ ಯೆಹೋವನ ನುಡಿ.


ಅವರು ತಮ್ಮ ಸಾಮರ್ಥ್ಯಾನುಸಾರ ಕಟ್ಟಡದ ಭಂಡಾರಕ್ಕೆ ಕೊಟ್ಟದ್ದು - ಅರುವತ್ತೊಂದು ಸಾವಿರ ಬಂಗಾರದ ಪವನುಗಳು, ಎರಡು ಲಕ್ಷದ ಐವತ್ತು ಸಾವಿರ ತೊಲೆ ಬೆಳ್ಳಿ, ನೂರು ಯಾಜಕವಸ್ತ್ರಗಳು.


ಗೇರ್ಷೋಮನ ಮಗನೂ ಮೋಶೆಯ ಮೊಮ್ಮಗನೂ ಆಗಿರುವ ಶೆಬೂವೇಲನು ಭಂಡಾರಗಳನ್ನು ಕಾಯುವವರ ಮುಖ್ಯಸ್ಥನು.


ಅರಸನಾದ ದಾವೀದನು ಇವುಗಳನ್ನೂ ಎದೋಮ್ಯರು ಮೋವಾಬ್ಯರು ಅಮ್ಮೋನಿಯರು ಫಿಲಿಷ್ಟಿಯರು ಅಮಾಲೇಕ್ಯರು ಎಂಬೀ ಸುತ್ತಣ ಜನಾಂಗಗಳಿಂದ ಕಿತ್ತುಕೊಂಡ ಬೆಳ್ಳಿಬಂಗಾರವನ್ನೂ ಯೆಹೋವನಿಗೋಸ್ಕರ ಪ್ರತಿಷ್ಠಿಸಿದನು.


ಆಗ ಆಸನು ಯೆಹೋವನ ಆಲಯದ ಮತ್ತು ಅರಮನೆಯ ಭಂಡಾರಗಳಲ್ಲಿ ಉಳಿದಿದ್ದ ಬೆಳ್ಳಿಬಂಗಾರವನ್ನು ತೆಗೆದುಕೊಂಡು ಅದನ್ನು ದೂತರ ಮುಖಾಂತರವಾಗಿ ದಮಸ್ಕದಲ್ಲಿದ್ದ ಅರಾಮ್ಯರ ಅರಸನೂ ಹೆಜ್ಯೋನನ ಮೊಮ್ಮಗನೂ ಟಬ್ರಿಮ್ಮೋನನ ಮಗನೂ ಆದ ಬೆನ್ಹದದನಿಗೆ ಕೊಟ್ಟು ಕಳುಹಿಸಿ ಅವನಿಗೆ -


ಯೆಹೋವನ ಆಲಯದ ಮತ್ತು ಅರಮನೆಯ ಎಲ್ಲಾ ದ್ರವ್ಯವನ್ನೂ ಸೊಲೊಮೋನನು ಮಾಡಿಸಿದ ಬಂಗಾರದ ಗುರಾಣಿಗಳನ್ನೂ ತೆಗೆದುಕೊಂಡು ಹೋದನು.


ಅರಸನಾದ ಸೊಲೊಮೋನನು ಯೆಹೋವನ ಆಲಯಕ್ಕೋಸ್ಕರ ಬೇಕಾದ ಎಲ್ಲಾ ಸಾಮಾನುಗಳನ್ನು ಸಿದ್ಧಮಾಡಿಸಿದನಂತರ ತನ್ನ ತಂದೆಯಾದ ದಾವೀದನು ಯೆಹೋವನಿಗೆ ಹರಕೆಹೊತ್ತು ಪ್ರತಿಷ್ಠಿಸಿದ ಬೆಳ್ಳಿ ಬಂಗಾರವನ್ನೂ ಸಾಮಾನುಗಳನ್ನೂ ದೇವಾಲಯದ ಭಂಡಾರಕ್ಕೆ ಸೇರಿಸಿದನು.


ಕೋರಹೀಯರ ಮತ್ತು ಮೆರಾರೀಯರ ದ್ವಾರಪಾಲಕ ವರ್ಗಗಳು ಇವೇ.


ಗೇರ್ಷೋಮನಿಗೆ ಹುಟ್ಟಿದ ಲದ್ದಾನ ಸಂತಾನದವರಾದ ಲದ್ದಾನ್ಯ ಕುಟುಂಬಗಳ ಪ್ರಧಾನರಲ್ಲಿ - ಯೆಹೀಯೇಲೀ;


ಅಂಥವರು ತಮ್ಮ ಸ್ವಕುಲದವರ ಜೊತೆಯಲ್ಲಿ ದೇವದರ್ಶನದ ಗುಡಾರವನ್ನು ಕಾಯುವ ಸೇವೆ ಮಾಡಬಹುದೇ ಹೊರತು ಅವರಿಂದ ಬೇರೆ ಪರಿಚರ್ಯವನ್ನು ಮಾಡಿಸಕೂಡದು. ಲೇವಿಯರು ಕಾಪಾಡಬೇಕಾದವುಗಳ ವಿಷಯದಲ್ಲಿ ನೀನು ಹೀಗೆ ಅವರಿಗೆ ನೇವಿುಸಬೇಕು.


ಅವನು ಯಾಜಕರನ್ನೂ ಲೇವಿಯರನ್ನೂ ಭಂಡಾರಗಳನ್ನೂ ಕುರಿತು ಕೊಟ್ಟ ಅಪ್ಪಣೆಯನ್ನು ಅವರು ಸ್ವಲ್ಪವಾದರೂ ಮೀರಲಿಲ್ಲ.


ಅವು ಬಂಗಾರದಷ್ಟು ಬೆಲೆಯುಳ್ಳವುಗಳು. ನಾನು ಅವರಿಗೆ - ನೀವು ಯೆಹೋವನ ಸ್ವಕೀಯರು; ಆ ಪಾತ್ರೆಗಳೂ ದೇವರ ವಸ್ತುಗಳು; ಆ ಬೆಳ್ಳಿಬಂಗಾರವೂ ನಿಮ್ಮ ಪಿತೃಗಳ ದೇವರಾದ ಯೆಹೋವನಿಗೋಸ್ಕರ ಸಮರ್ಪಿತವಾದ ಕಾಣಿಕೆಯು.


ಸೇವೆಮಾಡುತ್ತಿದ್ದ ಯಾಜಕರ ಮತ್ತು ಲೇವಿಯರ ವಿಷಯದಲ್ಲಿ ಯೆಹೂದ್ಯರಿಗೆ ಬಹು ಸಂತೋಷವುಂಟಾದದರಿಂದ ಆ ದಿನದಲ್ಲಿ ಅವರು ಧರ್ಮವಿಧಿಯ ಪ್ರಕಾರ ಆಯಾ ಊರುಗಳ ಭೂವಿುಯಿಂದ ಯಾಜಕರಿಗೂ ಲೇವಿಯರಿಗೂ ಸಿಕ್ಕತಕ್ಕ ಭಾಗಗಳನ್ನು ಅಂದರೆ ದೇವರಿಗೋಸ್ಕರ ಪ್ರತ್ಯೇಕಿಸತಕ್ಕ ವಸ್ತು, ಪ್ರಥಮಫಲ, ದಶಮಾಂಶ ಇವುಗಳನ್ನು ಸಂಗ್ರಹಮಾಡತಕ್ಕ ಕೊಠಡಿಗಳ ಮೇಲೆ ಪಾರುಪತ್ಯಗಾರರನ್ನು ನೇವಿುಸಿದರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು