1 ಪೂರ್ವಕಾಲ ವೃತ್ತಾಂತ 21:29 - ಕನ್ನಡ ಸತ್ಯವೇದವು J.V. (BSI)29 ಆದರೂ ದಾವೀದನು ಯೆಹೋವದೂತನ ಕತ್ತಿಗೆ ಹೆದರಿ ದೇವದರ್ಶನಕ್ಕೋಸ್ಕರ ಅಲ್ಲಿಗೆ ಹೋಗಲಾರದೆ ಯೆಬೂಸಿಯನಾದ ಒರ್ನಾನನ ಕಣದಲ್ಲಿಯೇ ಯಜ್ಞವನ್ನರ್ಪಿಸಿದನು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201929 ಆದರೂ ದಾವೀದನು ಯೆಹೋವನ ದೂತನ ಕತ್ತಿಗೆ ಹೆದರಿ ದೇವದರ್ಶನಕ್ಕಾಗಿ ಅಲ್ಲಿಗೆ ಹೋಗಲಾರದೆ, ಯೆಬೂಸಿಯನಾದ ಒರ್ನಾನನ ಕಣದಲ್ಲಿಯೇ ಯಜ್ಞವನ್ನು ಅರ್ಪಿಸಿದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)29 ಆದರೂ ದಾವೀದನು ಸರ್ವೇಶ್ವರನ ದೂತ ಹಿಡಿದಿದ್ದ ಕತ್ತಿಗೆ ಹೆದರಿ, ದೇವದರ್ಶನಕ್ಕಾಗಿ ಅಲ್ಲಿಗೆ ಹೋಗಲಾರದೆ, ಯೆಬೂಸಿಯನಾದ ಒರ್ನಾನನ ಕಣದಲ್ಲಿಯೇ ಬಲಿಯರ್ಪಿಸಿದನು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್29 ಆಗ ಪವಿತ್ರ ಗುಡಾರವು ಮತ್ತು ಯಜ್ಞವೇದಿಕೆಯು ಗಿಬ್ಯೋನ್ ಪಟ್ಟಣದ ಎತ್ತರದ ಪ್ರದೇಶದಲ್ಲಿತ್ತು. ಇಸ್ರೇಲರು ಅರಣ್ಯದಲ್ಲಿ ಪ್ರಯಾಣ ಮಾಡುತ್ತಿರುವಾಗ ಮೋಶೆಯು ಆ ಗುಡಾರವನ್ನು ಮಾಡಿಸಿದ್ದನು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ29 ಮರುಭೂಮಿಯಲ್ಲಿ ಮೋಶೆಯು ಮಾಡಿದ ಯೆಹೋವ ದೇವರ ಗುಡಾರವೂ, ದಹನಬಲಿಪೀಠವೂ ಆ ಕಾಲದಲ್ಲಿ ಗಿಬ್ಯೋನಿನ ಉನ್ನತ ಸ್ಥಳದಲ್ಲಿ ಇದ್ದವು. ಅಧ್ಯಾಯವನ್ನು ನೋಡಿ |