1 ಪೂರ್ವಕಾಲ ವೃತ್ತಾಂತ 21:12 - ಕನ್ನಡ ಸತ್ಯವೇದವು J.V. (BSI)12 ಮೂರುವರುಷಗಳ ಕಾಲ ಬರವು ಉಂಟಾಗಬೇಕೋ, ಇಲ್ಲವೆ ಮೂರು ತಿಂಗಳುಗಳವರೆಗೆ ನಿನ್ನ ಶತ್ರುಗಳ ಕತ್ತಿಗೆ ಬಲಿಯಾಗುವದು ಬೇಕೋ, ಇಲ್ಲವೆ ಇಸ್ರಾಯೇಲ್ಯರ ಸಮಸ್ತಪ್ರಾಂತಗಳಲ್ಲಿ ಯೆಹೋವನು ಕಳುಹಿಸಿದ ಸಂಹಾರಕದೂತನಿಂದುಂಟಾಗುವ ಮೂರು ದಿನಗಳ ಘೋರ ವ್ಯಾಧಿ ರೂಪವಾದ ಯೆಹೋವನ ಕತ್ತಿಯುಬೇಕೋ? ಈ ಮೂರರಲ್ಲಿ ಒಂದನ್ನು ಆರಿಸಿಕೋ ಎಂಬದೇ. ನನ್ನನ್ನು ಕಳುಹಿಸಿದವನಿಗೆ ಯಾವ ಉತ್ತರವನ್ನು ತೆಗೆದುಕೊಂಡು ಹೋಗಬೇಕು, ಆಲೋಚಿಸಿ ಹೇಳು ಎಂದು ಹೇಳಿದನು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201912 ‘ಮೂರು ವರ್ಷಗಳ ವರೆಗೆ ಬರಗಾಲ ಉಂಟಾಗಬೇಕೋ, ಇಲ್ಲವೆ ನೀನು ಮೂರು ತಿಂಗಳು ನಿನ್ನ ಶತ್ರುಗಳ ಚಿತ್ರಹಿಂಸೆಗೆ ಬಲಿಯಾಗುವುದು ಬೇಕೋ, ಇಲ್ಲವೆ ಇಸ್ರಾಯೇಲರ ಸಮಸ್ತ ಪ್ರಾಂತ್ಯಗಳಲ್ಲಿ ಯೆಹೋವನು ಕಳುಹಿಸಿದ ಸಂಹಾರದೂತನಿಂದ ಉಂಟಾಗುವ ಮೂರು ದಿನಗಳ ಘೋರವ್ಯಾಧಿಯ ರೂಪವಾದ ಯೆಹೋವನ ಶಿಕ್ಷೆ ಬೇಕೋ, ಈ ಮೂರರಲ್ಲಿ ಒಂದನ್ನು ಆರಿಸಿಕೊ’ ಎಂಬುದೇ. ನನ್ನನ್ನು ಕಳುಹಿಸಿದವನಿಗೆ ಯಾವ ಉತ್ತರವನ್ನು ತೆಗೆದುಕೊಂಡು ಹೋಗಬೇಕು ಆಲೋಚಿಸಿ ಹೇಳು” ಎಂದು ಹೇಳಿದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)12 ‘ಮೂರು ವರ್ಷಗಳ ಕಾಲ ಕ್ಷಾಮ ಉಂಟಾಗಬೇಕೋ? ಇಲ್ಲವೆ ಮೂರು ತಿಂಗಳುಗಳವರೆಗೆ ನಿನ್ನ ಶತ್ರುಗಳ ಚಿತ್ರಹಿಂಸೆಗೆ ಬಲಿಯಾಗುವುದು ಬೇಕೋ? ಇಲ್ಲವೆ ಇಸ್ರಯೇಲರ ಸಮಸ್ತ ಪ್ರಾಂತ್ಯಗಳಿಗೆ ಸರ್ವೇಶ್ವರ ಕಳುಹಿಸುವ ಸಂಹಾರಕ ದೂತನಿಂದ ಉಂಟಾಗುವ ಮೂರು ದಿನಗಳ ಘೋರ ವ್ಯಾಧಿರೂಪವಾದ ಸರ್ವೇಶ್ವರನ ಶಿಕ್ಷೆ ಬೇಕೋ? ಈ ಮೂರರಲ್ಲಿ ಒಂದನ್ನು ಆರಿಸಿಕೋ’ ನನ್ನನ್ನು ಕಳುಹಿಸಿದವರಿಗೆ ಯಾವ ಉತ್ತರವನ್ನು ತೆಗೆದುಕೊಂಡು ಹೋಗಬೇಕು, ಆಲೋಚಿಸಿ ಹೇಳು,” ಎಂದು ಹೇಳಿದನು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ12 ನಿನ್ನ ದೇಶದಲ್ಲಿ ಮೂರು ವರುಷ ಕ್ಷಾಮ ಉಂಟಾಗಬೇಕೋ? ಇಲ್ಲವೆ ಮೂರು ತಿಂಗಳವರೆಗೆ ನಿನ್ನ ಶತ್ರುಗಳ ಹಿಂಸೆಗೆ ಬಲಿಯಾಗುವುದು ಬೇಕೋ? ಇಲ್ಲವೆ ಯೆಹೋವ ದೇವರ ದೂತನು ಇಸ್ರಾಯೇಲಿನ ಸಮಸ್ತ ಪ್ರಾಂತಗಳಲ್ಲಿ ಯೆಹೋವ ದೇವರ ಖಡ್ಗದಿಂದ ಮೂರು ದಿವಸಗಳವರೆಗೆ ಘೋರವ್ಯಾಧಿ ಉಂಟಾಗಬೇಕೋ? ನೀನು ಆರಿಸಿಕೋ. ಈಗ ನನ್ನನ್ನು ಕಳುಹಿಸಿದವರಿಗೆ ನಾನು ಏನು ಉತ್ತರ ತೆಗೆದುಕೊಂಡು ಹೋಗಬೇಕು? ಯೋಚಿಸಿನೋಡು,” ಎಂದನು. ಅಧ್ಯಾಯವನ್ನು ನೋಡಿ |