Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಪೂರ್ವಕಾಲ ವೃತ್ತಾಂತ 2:16 - ಕನ್ನಡ ಸತ್ಯವೇದವು J.V. (BSI)

16 ಚೆರೂಯ ಅಬೀಗೈಲರು ಅವರ ಸಹೋದರಿಯರು. ಅಬ್ಷೈ, ಯೋವಾಬ್, ಅಸಾಹೇಲ್ ಎಂಬ ಮೂವರು ಚೆರೂಯಳ ಮಕ್ಕಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

16 ಚೆರೂಯ ಮತ್ತು ಅಬೀಗೈಲರು ಅವರ ಸಹೋದರಿಯರು. ಅಬ್ಷೈ, ಯೋವಾಬ ಮತ್ತು ಅಸಾಹೇಲ್ ಎಂಬವರು ಚೆರೂಯಳ ಮಕ್ಕಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

16 ಅವನ ಇಬ್ಬರು ಹೆಣ್ಣು ಮಕ್ಕಳು: ಚೆರೂಯ ಹಾಗೂ ಅಬೀಗೈಲ ಎಂಬವರು. ಜೆಸ್ಸೆಯ ಮಗಳು ಚೆರೂಯಳಿಗೆ ಅಬೈ , ಯೋವಾಬ್ , ಅಸಾಹೇಲ್ ಎಂಬ ಮೂರು ಜನ ಮಕ್ಕಳಿದ್ದರು .

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

16 ಅವರ ತಂಗಿಯಂದಿರು ಯಾರೆಂದರೆ, ಚೆರೂಯ ಮತ್ತು ಅಬೀಗೈಲ್, ಚೆರೂಯಳ ಮೂರುಮಕ್ಕಳು ಯಾರೆಂದರೆ, ಅಬ್ಷೈ, ಯೋವಾಬ್ ಮತ್ತು ಅಸಾಹೇಲ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

16 ಅವರ ಇಬ್ಬರು ಸಹೋದರಿಯರು ಚೆರೂಯಳು, ಅಬೀಗೈಲಳು. ಚೆರೂಯಳ ಮೂವರು ಮಕ್ಕಳು ಅಬೀಷೈ, ಯೋವಾಬ್, ಅಸಾಯೇಲ್.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಪೂರ್ವಕಾಲ ವೃತ್ತಾಂತ 2:16
11 ತಿಳಿವುಗಳ ಹೋಲಿಕೆ  

ಆಗ ದಾವೀದನು ಹಿತ್ತಿಯನಾದ ಅಹೀಮೆಲೆಕನನ್ನೂ ಚೆರೂಯಳ ಮಗನೂ ಯೋವಾಬನ ತಮ್ಮನೂ ಆದ ಅಬೀಷೈಯನ್ನೂ ಕುರಿತು - ನಿಮ್ಮಲ್ಲಿ ನನ್ನ ಸಂಗಡ ಸೌಲನ ಪಾಳೆಯಕ್ಕೆ ಯಾರು ಬರುವಿರಿ ಎಂದು ಕೇಳಿದ್ದಕ್ಕೆ ಅಬೀಷೈಯು - ನಾನು ಬರುತ್ತೇನೆ ಎಂದು ಉತ್ತರಕೊಟ್ಟನು.


ಅದಕ್ಕೆ ದಾವೀದನು - ಚೆರೂಯಳ ಮಕ್ಕಳೇ, ನನಗೆ ನಿಮ್ಮ ಗೊಡವೆಯೇ ಬೇಡ; ನೀವು ಈಹೊತ್ತು ನನ್ನನ್ನು ಅಕೃತ್ಯಕ್ಕೆ ಪ್ರೇರಿಸುವವರಾಗಿದ್ದೀರಿ. ಇಂಥ ದಿವಸದಲ್ಲಿ ಇಸ್ರಾಯೇಲ್ಯರಲ್ಲಿ ಒಬ್ಬನಿಗೆ ಮರಣದಂಡನೆಯಾಗುವದು ಸರಿಯೋ? ನಾನು ಇಸ್ರಾಯೇಲ್ಯರ ಅರಸನೆಂಬದು ಈಹೊತ್ತು ಸ್ಪಷ್ಟವಾಗಿ ಗೊತ್ತಾಯಿತು ಎಂದು ನುಡಿದನು.


ನಾನು ರಾಜ್ಯಾಭಿಷೇಕ ಹೊಂದಿದವನಾಗಿದ್ದರೂ ಈಗ ಏನೂ ಮಾಡಲಾರದವನಾಗಿದ್ದೇನೆ. ಚೆರೂಯಳ ಮಕ್ಕಳಾದ ಇವರು ನನ್ನ ಹತೋಟಿಗೆ ಬಾರದವರು. ಯೆಹೋವನೇ ಕೆಡುಕರಿಗೆ ಮುಯ್ಯಿತೀರಿಸಲಿ ಎಂದು ಹೇಳಿದನು.


ಚೆರೂಯಳ ಮಗನಾದ ಯೋವಾಬನೂ ದಾವೀದನ ಸೇವಕರೂ ಹೊರಟು ಗಿಬ್ಯೋನಿನ ಕೆರೆಯ ಹತ್ತಿರ ಸಂಧಿಸಿ ಇವರು ಕೆರೆಯ ಈಚೆಯಲ್ಲಿಯೂ ಅವರು ಆಚೆಯಲ್ಲಿಯೂ ಕೂತುಕೊಂಡರು.


ಅವನು ಯೋವಾಬನಿಗೆ ಬದಲಾಗಿ ಅಮಾಸನನ್ನು ಸೇನಾಪತಿಯನ್ನಾಗಿ ನೇವಿುಸಿದನು. ಇಸ್ರಾಯೇಲ್ಯನಾದ ಇತ್ರನು ನಾಹಾಷನ ಮಗಳೂ ಯೋವಾಬನ ತಾಯಿಯಾದ ಚೆರೂಯಳ ತಂಗಿಯೂ ಆದ ಅಬೀಗಲ್ ಎಂಬವಳನ್ನು ಕೂಡಿದ್ದರಿಂದ ಈ ಅಮಾಸನು ಹುಟ್ಟಿದನು.


ಐದನೆಯವನು ರದ್ದೈ; ಆರನೆಯವನು ಓಚೆಮ್; ಏಳನೆಯವನು ದಾವೀದ್.


ಅಬೀಗೈಲಳು ಅಮಾಸನ ತಾಯಿ; ಇಷ್ಮಾಯೇಲ್ಯನಾದ ಯೆತೆರ್ ಎಂಬವನು ಅವನ ತಂದೆ.


ಅರಸನು ಅಬ್ಷಾಲೋಮನಿಗಾಗಿ ಹಂಬಲಿಸುತ್ತಿರುವದನ್ನು ಚೆರೂಯಳ ಮಗನಾದ ಯೋವಾಬನು ತಿಳಿದು


ಯೋವಾಬನ ತಮ್ಮನಾದ ಅಬ್ಷೈಯು [ಬೇರೆ] ಮೂರು ಮಂದಿಯಲ್ಲಿ ಮುಖ್ಯಸ್ಥನು. ಇವನು ತನ್ನ ಬರ್ಜಿಯನ್ನು ಬೀಸುತ್ತಾ ಹೋಗಿ ಮುನ್ನೂರು ಮಂದಿಯನ್ನು ಕೊಂದದರಿಂದ ಈ ಮೂವರಲ್ಲಿ ಕೀರ್ತಿಗೊಂಡನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು